ಬೆಂಕಿಯಲ್ಲಿ ಅರಳಿದ ದುಬಾರಿ ಕಾರು ಹರಾಜು!

ಹರಾಜಿನಲ್ಲಿ ಈ ಕಾರನ್ನು ಗೂಡಿಂಗ್ ಆಂಡ್ ಕಂಪನಿಗೆ ಸುಮಾರು 16.4 ಮಿಲಿಯನ್ ಡಾಲರ್(ಅಂದಾಜು 74 ಕೋಟಿ ರು.)ಗೆ ಮಾರಾಟ ಮಾಡಿದೆ. ಇದು ಜಗತ್ತಿನಲ್ಲಿ ನಡೆದ ಅತ್ಯಂತ ದುಬಾರಿ ಕಾರು ಹರಾಜು ಕೂಡ ಹೌದು.
ಫೆರಾರಿ ಟೆಸ್ಟಾ ರೊಸಾ 3.0 ಲೀಟರಿನ ವಿ-12 ಎಂಜಿನ್ ಹೊಂದಿದೆ. ಇದು 300 ಹಾರ್ಸ್ ಪವರ್ ನೀಡುತ್ತದೆ. ನಾಲ್ಕು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.
ಕ್ಲಾಸಿಕ್ ಕಾರು ಹರಾಜು ಪ್ರಕ್ರಿಯೆಗಳಲ್ಲಿ ಯಾವತ್ತೂ ಫೆರಾರಿ ಕಾರುಗಳಿಗೆ ಬೇಡಿಕೆ ಹೆಚ್ಚು. ಟೆಸ್ಟಾ ರೊಸಾ ಹರಾಜು ಪ್ರಕ್ರಿಯೆಯಲ್ಲೂ ಹೆಚ್ಚು ಜನರು ಭಾಗವಹಿಸಿದ್ದರು. ಕೊನೆಗೆ ಬೃಹತ್ ಮೊತ್ತಕ್ಕೆ ಗೂಡಿಂಗ್ ಕಂಪನಿಯ ಪಾಲಾಗಿದೆ.
ವಿಶೇಷವೆಂದರೆ ಈ ಕಾರು ಬೆಂಕಿಯಲ್ಲಿ ಅರಳಿದ ಹೂವು. ತಾಂತ್ರಿಕವಾಗಿ ಇದರ ಕಂಡಿಷನ್ ಅಷ್ಟು ಚೆನ್ನಾಗಿ ಉಳಿದಿಲ್ಲ. ಯಾಕೆಂದರೆ 958ರಲ್ಲಿ ನಡೆದ ರೇಸಿಂಗ್ ನಲ್ಲಿ ಜಾಗ್ವಾರ್ ಕಾರಿಗೆ ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡಿತ್ತು. ಆಮೇಲೆ ಫೆರಾರಿ ಇದನ್ನು ಮರುವಿನ್ಯಾಸ ಮಾಡಿ ಅಮೆರಿಕದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿತ್ತು.
1960ರ ಇಸವಿಯಲ್ಲಿ ಆ ವ್ಯಕ್ತಿ ಆ ಕಾರಿಗೆ ಬೆಂಕಿ ಹಾಕಿ ವಿಮೆ ಪಡೆಯಲು ಪ್ರಯತ್ನಿಸಿದ್ದರು. ನಂತರ ಪುನಃ ಫೆರಾರಿ ಆ ಕಾರನ್ನು ಮರುವಿನ್ಯಾಸ ಮಾಡಿತ್ತು.


Click it and Unblock the Notifications








