ಅರಮನೆ ಮೈದಾನದಲ್ಲಿ ಕಂಡ ವಾಹನ ಪ್ರದರ್ಶನ

By * ಪಿಸಿ

Auto Show Bangalore 2011
ಈ ದಿನಕ್ಕಾಗಿ ತುಂಬಾ ಕಾದಿದ್ದೆ. ಬೆಂಗಳೂರಿನಲ್ಲಿ ನಡೆಯುವ ವಾಹನ ಪ್ರದರ್ಶನಕ್ಕೆ ಹೋಗಬೇಕು, ಅಲ್ಲಿರುವ ವಾಹನ ಸ್ವರ್ಗವನ್ನು ಕಣ್ತುಂಬಿಕೊಳ್ಳಬೇಕು ಅಂದುಕೊಂಡಿದೆ. ಆಗ ಕಣ್ಣಿಗೆ ಕಂಡದ್ದು ಟೈಮ್ಸ್ ಆಟೋ ಶೋ. ಆಗಸ್ಟ್ 25ರಿಂದ ಅಗಸ್ಟ್ 28ರವರೆಗೆ ನಡೆದ ಪ್ರದರ್ಶನಕ್ಕೆ ನಾವು ಹೋಗಿದ್ದೇವು.

ಬೆಂಗಳೂರು ಅರಮನೆ ಮೈದಾನದ ವಿಶಾಲವಾದ ಅಂಗಣದಲ್ಲಿ ನೂತನ ಆಟೋ ಕುಟೀರ ತಲೆಯೆತ್ತಿ ನಿಂತಿತ್ತು. ಹೊರಗಡೆ ವಾಹನಗಳ ಮಾಮೂಲಿ ಪಾರ್ಕಿಂಗ್ ಹೆಚ್ಚಿತ್ತು. ಸುಂದರವಾದ ಪ್ರವೇಶದ್ವಾರ, ಅದರ ಮೇಲಿರುವ ಚಿತ್ರ ವಿಚಿತ್ರ ಬೈಕ್, ಕಾರು ಸ್ಟಂಟ್ ಪೋಸ್ಟರುಗಳು ಮನಸ್ಸಿಗೆ ಒಂದಿಷ್ಟು ಪುಳಕ ನೀಡಿದ್ದು ಸುಳ್ಳಲ್ಲ. ನೂರು ರು. ಪ್ರವೇಶ ಶುಲ್ಕ ನೀಡಿ ಬಲಗಾಲಿಟ್ಟು ಒಳಗಡೆ ಪ್ರವೇಶಿಸಿದೇವು.

ಒಳಗಿತ್ತು ವಾಹನಗಳ ಸ್ವರ್ಗ. ಸಾಲು ಸಾಲಾಗಿ ಮದುಮಕ್ಕಳಂತೆ ವಾಹನಗಳು ಸಿಂಗರಿಸಿ ನಿಂತ್ತಿದ್ದವು. ಕೆಲವು ವಾಹನಗಳು ವೀಕ್ಷಣೆಗೆ, ಟಚ್ ಮಾಡಲು ಮುಕ್ತವಾಗಿದ್ದವು. ಕೆಲವು ವಾಹನಗಳಲ್ಲಿ ಕುಳಿತು ಸ್ಟೇರಿಂಗ್ ತಿರುಗಿಸಬಹುದಿತ್ತು. ಐಷಾರಾಮಿ ಕಾರುಗಳು, ವಿಂಟೇಜ್ ಕಾರುಗಳನ್ನು ದೂರದಿಂದ ನೋಡಿ ಸಂಭ್ರಮಿಸಿದೆವು.

ಒಳಗಿನ ಸ್ಟಾಲುಗಳನ್ನು ನೋಡಿ ಅಚ್ಚರಿಯಾಯಿತು. ಒಂದೆಡೆ ವಾಹನಗಳನ್ನು ಮೊಡಿಫೈ ಮಾಡುವ ಕುರಿತ ಮಾಹಿತಿಯಿತ್ತು. ಅಲ್ಲಿ ಯಾವ ಕಾರನ್ನು ಬೇಕಾದರೂ ಇನ್ಯಾವುದೋ ಕಾರಿನಂತೆ ಬಾಡಿಮೊಡಿಫೈ ಮಾಡಬಹುದಿತ್ತು. ಕೆಲವು ಕಾನ್ಸೆಪ್ಟ್ ಕಾರುಗಳು, ಲೂನದಂತಹ ಹಳೆಯ ವಾಹನಗಳು ಮೋಡಿ ಮಾಡುವಂತ್ತಿದ್ದವು.

ಈ ಪ್ರದರ್ಶನದಲ್ಲಿ ಷೆವರ್ಲೆ ಸುರಕ್ಷತೆಯ ಥೀಮ್ ಇಟ್ಟುಕೊಂಡಿತ್ತು. ಟೊಯೊಟಾ "ಗೋ ಗ್ರೀನ್" ಕಾನ್ಸೆಪ್ಟನ್ನು ಪರಿಚಯಿಸಿತ್ತು.

ದೇಶದಲ್ಲಿ ನಡೆಯುವ ಪ್ರಮುಖ ವಾಹನ ಪ್ರದರ್ಶನಗಳಿಗೆ ಹೋಲಿಸಿದರೆ ಇದು ಒಂಚೂರು ಸಪ್ಪೆ ಎನಿಸಿದ್ದು ಸುಳ್ಳಲ್ಲ. ಆದರೂ ಹಳೆಯ ಲೂನಾ, ಟಿಪ್ಪರ್ ಗಾಡಿಗಳಿಂದ ಹಿಡಿದು ಇತ್ತೀಚಿನ ಕಾರುಗಳು, ಭವಿಷ್ಯದ ಕಾನ್ಸೆಪ್ಟ್ ಕಾರುಗಳು ಒಂದಿಷ್ಟು ಗಮನ ಸೆಳೆದವು.

ಅಪ್ ಸೆಟ್ ವಿಷ್ಯ: ಆದರೂ ಈ ವಾಹನ ಪ್ರದರ್ಶನ ನನ್ನನ್ನು ಕೊಂಚ ಅಪ್ ಸೆಟ್ ಮಾಡಿದ್ದು ಸುಳ್ಳಲ್ಲ. ಯಾಕೆಂದರೆ ಇದು ಎಲ್ಲಾ ಬ್ರಾಂಡುಗಳ ಸಮ್ಮೀಳನವಾಗಿರಲಿಲ್ಲ. ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು, ಬಜಾಜ್, ಹೀರೋ ಮೊಟೊಕಾರ್ಪ್, ಜಾಗ್ವಾರ್ ಲ್ಯಾಂಡ್ ಸೇರಿದಂತೆ ಪ್ರಮುಖ ಬ್ರಾಂಡುಗಳೇ ಗೈರು ಹಾಜರಾಗಿದ್ದವು. ಪುಟ್ಟ ಕಾರು ನ್ಯಾನೊ ಇರಲಿಲ್ಲ.

ಹಾಗಂತ ಟೈಮ್ಸ್ ಆಟೋ ಶೋ ಪೂರ್ತಿ ಸಪ್ಪೆಯಾಗಿರಲಿಲ್ಲ. ಅಲ್ಲಿದ್ದ ಇಂಟ್ರೆಸ್ಟಿಂಗ್ ವಿಷ್ಯಗಳು, ವಿವಿಧ ನಮೂನೆಯ ವಾಹನಗಳು, ವಿಂಟೇಜ್ ಕಾರು ಬೈಕುಗಳ ಸಂಪೂರ್ಣ ಮಾಹಿತಿಗಾಗಿ ನಿಮ್ಮ ಕಣ್ಣು ದಟ್ಸ್ ಕನ್ನಡ ಆಟೋಮೊಬೈಲ್ಸ್ ಮೇಲಿರಲಿ.

More from DriveSpark

Article Published On: Monday, August 29, 2011, 11:24 [IST]
English summary
Times Auto Show held in Bangalore at Palace grounds on 25th to 28th Aug 2011. Here is report of four-day-long Bangalore Auto Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+