ಪ್ರತಿಭಟನೆ ಮಾಡೋದಿಲ್ಲ ಅಂತ ಅಗ್ರಿಮೆಂಟಿಗೆ ಸಹಿಹಾಕಿ

Good Conduct Bond
ಮಾನೆಸರ್ ಘಟಕದ ಕೆಲಸದ ಗುಣಮಟ್ಟ ಸುಧಾರಣೆಗೆ ಮಾರುತಿ ಸುಜುಕಿ ಮುಂದಾಗಿದೆ. ಕಂಪನಿಯು ತನ್ನ ನೌಕರರ ವಿರುದ್ಧ ಕಠಿಣವಾದ ನೀತಿ ನಿಯಮಗಳನ್ನು ರೂಪಿಸಿದೆ. ಇತ್ತೀಚೆಗೆ ಕಂಪನಿಯ ಸಿಬ್ಬಂದಿಗಳು ಮುಷ್ಕರ, ಪ್ರತಿಭಟನೆಯಲ್ಲಿ ನಿರತರಾಗಿದ್ದರಿಂದ ಕಂಪನಿಯ ಉತ್ಪಾದನೆಗೆ ಹಿನ್ನಡೆಯಾಗಿತ್ತು.

ಮಾರುತಿ ಸಿಬ್ಬಂದಿಗಳು ಮಾನೆಸರ್ ಘಟಕ ಪ್ರವೇಶಿಸುವಾಗ ಅವರಲ್ಲಿ ಬಾಂಡ್ ಪೇಪರ್ ಗೆ ಸಹಿ ಹಾಕಿಸಲಾಗುತ್ತದೆ. ಯಾರು ಸಹಿ ಹಾಕುವುದಿಲ್ಲವೋ ಅವರಿಗೆ ಫ್ಯಾಕ್ಟರಿಯೊಳಗೆ ಪ್ರವೇಶವಿಲ್ಲ. ಕಂಪನಿಯ ಸಿಬ್ಬಂದಿಗಳು ಗುಡ್ ಕಂಡಕ್ಟ್ ಬಾಂಡಿಗೆ ಸಹಿ ಹಾಕಲು ನಿರಾಕರಿಸಿದರೆ ಮತ್ತೊಂದು ಪ್ರತಿಭಟನೆಗೆ ಮಾನೆಸರ್ ಘಟಕ ಸಾಕ್ಷಿಯಾಗುವ ನಿರೀಕ್ಷೆಯಿದೆ.

"ಉತ್ತಮ ನಡತೆ ಒಪ್ಪಂದ"ಕ್ಕೆ ಸಹಿ ಹಾಕುವಂತೆ ಸಿಬ್ಬಂದಿಗಳಿಗೆ ತಿಳಿಸಲಾಗಿದೆ. ಈ ರೀತಿ ಸಹಿ ಹಾಕದ ನೌಕರರನ್ನು ಫ್ಯಾಕ್ಟರಿಯೊಳಗೆ ಪ್ರವೇಶಿಸಲು ಬಿಡುವುದಿಲ್ಲ" ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಉತ್ಪಾದನೆಯ ಗುಣಮಟ್ಟದ ಹಿನ್ನಡೆಗೆ ಕಾರಣವಾಗುತ್ತಿರುವ ಸಿಬ್ಬಂದಿಗಳ ಮೇಲೆ ಕಂಪನಿಯು ಕಠಿಣ ನಿಲುವು ತೆಗೆದುಕೊಳ್ಳಲು ಕಂಪನಿ ನಿರ್ಧರಿಸಿದೆ. ಕಂಪನಿಯು ಇತ್ತೀಚೆಗೆ ಗುಣಮಟ್ಟ ಪರೀಕ್ಷೆಗೆ ಬಿಟ್ಟ 437 ಕಾರುಗಳಲ್ಲಿ ಕೇವಲ 96 ಕಾರುಗಳು ಮಾತ್ರ ಗುಣಮಟ್ಟ ಹೊಂದಿದ್ದವು.

ಮಾರುತಿ ಸುಜುಕಿ ಸಿಬ್ಬಂದಿಗಳು ನೂತನ ಕಾರ್ಮಿಕ ಸಂಘಕ್ಕೆ ಅನುಮತಿ ನೀಡಬೇಕೆಂದು ಪ್ರತಿಭಟನೆ ನಡೆಸಿದ್ದರು. ಆದರೆ ಇದನ್ನು ಕಂಪನಿ ನಿರಾಕರಿಸಿತ್ತು. ಇದಕ್ಕಾಗಿ ಇತ್ತೀಚೆಗೆ ಮಾನೆಸರ್ ಘಟಕದ ಸಿಬ್ಬಂದಿಗಳು 13 ದಿನಗಳ ಪ್ರತಿಭಟನೆ ನಡೆಸಿದ್ದಾರೆ. ಇಂತಹ ಘಟನೆ ಭವಿಷ್ಯದಲ್ಲಿ ನಡೆಯದಂತೆ ಕಂಪನಿಯು ಬಾಂಡ್ ಪೇಪರಿಗೆ ಸಹಿ ಹಾಕಿಸಲು ನಿರ್ಧರಿಸಿದೆ.

More from DriveSpark

Article Published On: Monday, August 29, 2011, 15:50 [IST]
English summary
Maruti Suzuki India Limited (MSIL), India's largest carmaker has initiated stringent measures to improve quality of work at its plant in Manesar. MSIL has already suspended 10 workers and dismissed five workers after several quality issues were reported last week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+