ಸ್ಕೋಡಾ ಲಾರಾ ಆರ್ಎಸ್ ಆಗಸ್ಟ್ 31ರಂದು ರಸ್ತೆಗೆ

ಯಾವುದಿದು ಲಾರಾ?. ಲಾರಾ ಅಂದ್ರೆ ದೇಶದ ರಸ್ತೆಯಲ್ಲಿ ಜನಪ್ರಿಯತೆ ಪಡೆದಿರುವ Octavia RS ಕಾರಿನ ಹೊಸ ಮುಂದುವರೆದ ಆವೃತ್ತಿ. ಒಕ್ಟಾವಿಯಾ ಕಾರು ದೇಶದ ಹೆಚ್ಚಿನ ಕಾರು ಪ್ರೇಮಿಗಳ ಅಚ್ಚುಮೆಚ್ಚಿನ ಕಾರಾಗಿ ಜನಪ್ರಿಯತೆ ಪಡೆದಿದೆ.
ಲಾರಾ ಆರ್ಎಸ್ ಕಾರನ್ನು ಭಾರತೀಯರು ನೋಡುತ್ತಿರುವುದು ಇದು ಮೊದಲಲ್ಲ. ಯಾಕೆಂದರೆ 2010ರಲ್ಲಿ ನಡೆದ ದೆಹಲಿ ವಾಹನ ಪ್ರದರ್ಶನದಲ್ಲಿ ಈ ಕಾರು ಪ್ರದರ್ಶನಗೊಂಡಿತ್ತು. ನೂತನ ಸ್ಕೋಡಾ ಲಾರಾ ಕಾರು 1.8 ಲೀಟರಿನ ಟಿಎಸ್ಐ ಎಂಜಿನ್ ಹೊಂದಿದ್ದು ಸುಮಾರು 160 ಹಾರ್ಸ್ ಪವರ್ ನೀಡುತ್ತದೆ.
ಲಾರಾ ಆರ್ಎಸ್ ಕಾರು ನಿರ್ಮಾಣಕ್ಕೆ ಕಂಪನಿಯ ಹಳೆಯ ಮಾದರಿ ಒಕ್ಟಾವಿಯ ಆರ್ಎಸ್ ಸ್ಪೂರ್ತಿಯಂತೆ. ನೂತನ ಕಾರು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ನೂತನ ಕಾರು ಸ್ಪೋರ್ಟಿ ಸವಾರಿಗೆ ಸೂಕ್ತವಾಗಿದೆ ಎಂದು ಕಂಪನಿಯ ಪ್ರಮುಖ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Click it and Unblock the Notifications








