ಭೂಮಿಗೆ ದೇವರ ಟೂರ್: ಯಾರಿಗೆ ಯಾವ ಕಾರ್!

hindu gods
ಅದೊಂದು ಸುಂದರ ದಿನ. ಕೈಲಾಸಗಿರಿಗೆ ಆಗಮಿಸಿದ ದೇವರುಗಳು ಗಹನವಾದ ಚರ್ಚೆಯಲ್ಲಿ ತೊಡಗಿದ್ದರು. ಎಲ್ಲರ ಮುಖದಲ್ಲೂ ಸಂಭ್ರಮ ಎದ್ದು ಕಾಣುತ್ತಿತ್ತು. ಶಿವಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ವಿಷ್ಣುಲಕ್ಷ್ಮಿ ಮಾತ್ರವಲ್ಲದೇ ಯಮಧರ್ಮರಾಯ, ಶನೀಶ್ವರ ಕೂಡ ಅಲ್ಲಿದ್ದರು. ಆಗ ಅಲ್ಲಿಗೆ ಬಂದ ನಾರದನಿಗೆ ಅತೀವ ಆಶ್ಚರ್ಯ.

"ನಾರಾಯಣ ನಾರಾಯಣ.. ನೆರೆದಿರುವ ಎಲ್ಲಾ ದೇವರುಗಳಿಗೂ ಸಾಷ್ಟಾಂಗ ನಮಸ್ಕಾರ. ನಿಮ್ಮನ್ನೆಲ್ಲ ಎಲ್ಲೆಲ್ಲೋ ಹುಡುಕಿ ಕೊನೆಗೆ ಇಲ್ಲಿಗೆ ಬಂದೆ. ಏನಿದು ಆಶ್ಚರ್ಯ. ತಮ್ಮೆಲ್ಲರ ಮುಖಕಮಲಗಳು ಸಾವಿರ ಸೂರ್ಯನಂತೆ ಹೊಳೆಯುತ್ತಿವೆ. ಈ ಕಿರಿಯನ ಉದ್ಧಟತನವನ್ನು ಕ್ಷಮಿಸಿ. ತಮ್ಮೆಲ್ಲರ ಸಂಭ್ರಮವನ್ನು ನನಗೂ ತಿಳಿಸಬಹುದೇ?" ಎಂದು ನಾರದರು ಭಿನ್ನವಿಸಿಕೊಂಡರು.

ಅದಕ್ಕೆ ಶಿವ, "ನಾರದರೇ ತಮಗಿನ್ನು ವಿಷಯ ಗೊತ್ತಾಗಲಿಲ್ಲವೇ, ಅದಕ್ಕೂ ಮುನ್ನ ಭೂಲೋಕದ ಸಮಚಾರವನ್ನು ತಿಳಿಸಿ" ಅದಕ್ಕೆ ನಾರದ "ಭೂಲೋಕದ ವಿಷಯವನ್ನು ತಿಳಿಸಿ ಈ ಸಂಭ್ರಮದ ಕ್ಷಣವನ್ನು ಹಾಳು ಮಾಡಲಾರೆ. ಅಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಅನಾಚರಗಳು ಮಿತಿ ಮೀರುತ್ತಿವೆ" ಎಂದರು.

ತಕ್ಷಣ ಕೋಣದಿಂದ ಕೆಳಗಿಳಿದ ಯಮ, "ನಾರದರೇ ಆ ವಿಷಯ ಬಿಟ್ಟುಬಿಡಿ. ನಮ್ಮ ನರಕದಲ್ಲಿ ಸಾಕಷ್ಟು ಜಾಗ ಇದೆ. ಅಲ್ಲಿ ಈಗ ಹಬ್ಬದ ಸೀಸನ್ ಹೇಗಿದೆ ತಿಳಿಸಿ. ನಾವೆಲ್ಲ ಅಲ್ಲಿಗೆ ಟೂರ್ ಹೋಗುವ ಕುರಿತು ಇಲ್ಲಿ ಚರ್ಚಿಸುತ್ತಿದ್ದೇವು" ಎಂದು ದೇವರುಗಳ ಸಂಭ್ರಮದ ಗುಟ್ಟನ್ನು ಯಮಧರ್ಮರಾಯ ಬಿಟ್ಟುಕೊಟ್ಟರು.

"ನಾರಾಯಣ ನಾರಾಯಣ ಇದು ಬಹಳ ಸಂತಸದ ವಿಷಯ" ಎಂದ ನಾರದರ ದೃಷ್ಟಿ ಅಲ್ಲೇ ನಿಂತಿದ್ದ ದೇವರ ವಾಹನಗಳ ಮೇಲೆ ಬಿತ್ತು. ಅಲ್ಲಿದ್ದ ಮೂಷಿಕ, ಮಯೂರ, ಕಾಗೆ, ಗರುಡ, ನಂದಿ ಮುಂತಾದ ದೇವರ ವಾಹನಗಳನ್ನು ನೋಡಿ ನಾರದರು "ನಾರಾಯಣ ನಾರಾಯಣ" ಅಂದರು.

ಪಕ್ಕದಲ್ಲಿದ್ದ ವಿಷ್ಣು, "ಯಾಕೆ ಏನಾಯಿತು ನಾರದರೇ? ಎಂದು ಪ್ರಶ್ನಿಸಿದರು. "ಹೀಗೂ ಉಂಟೇ ನಾರಾಯಣ. ನೀವು ಭೂಲೋಕಕ್ಕೆ ಪ್ರಾಣಿಗಳ ಮೇಲೆ ಪ್ರವಾಸ ಹೊರಡುವಿರೇ? ಅಲ್ಲಿಗೆ ಈ ವಾಹನಗಳು ತರವಲ್ಲ" ಎಂದು ನುಡಿದರು.

ನಾರದರ ಮಾತನ್ನು ಕೇಳಿದ ಮೂಷಿಕ ಕೋಪದಿಂದ ಕೈಯಲ್ಲಿದ್ದ ಲಡ್ಡನ್ನು ದೂರಕೆಸೆದು "ಯಾಕೆ ತರವಲ್ಲ ನಾರದರೇ?" ಎಂದು ಪ್ರಶ್ನಿಸಿತ್ತು. ಅದಕ್ಕೆ ನಾರದರು, "ಕ್ಷಮಿಸಬೇಕು ದೇವ ವಾಹನಗಳೇ, ಭೂಲೋಕದ ಟ್ರೆಂಡನ್ನು ನೀವು ಅರ್ಥಮಾಡಿಕೊಳ್ಳುವಂತಾಗಿ. ಅಲ್ಲಿನ ರಸ್ತೆಗೆ ಯಾಂತ್ರಿಕ ವಾಹನಗಳೇ ಸೂಕ್ತ ಎಂಬುದು ನನ್ ಅಭಿಪ್ರಾಯ. ಮಾತು ತಪ್ಪೆನಿಸಿದರೆ ಮನ್ನಿಸುವಂತರಾಗಬೇಕು" ಎಂದು ಕೈಜೋಡಿಸಿದರು.

"ನಾರದರ ಮಾತು ಸೂಕ್ತವಾಗಿದೆ" ಎಂದು ಚೌತಿಯ ಸಂಭ್ರಮದಲ್ಲಿದ್ದ ಗಣಪತಿ ನುಡಿದಾಗ ಎಲ್ಲಾ ದೇವರುಗಳು ಗಂಭೀರವಾಗಿ ಯೋಚಿಸತೊಡಗಿದರು. "ಹಾಗಾದರೆ ನಾವು ಅಲ್ಲಿಗೆ ಯಾವ ವಾಹನದಲ್ಲಿ ಹೋಗೋಣ ಎಂದು ನಾರದರನ್ನೇ ಪ್ರಶ್ನಿಸಿದರು. ಅದಕ್ಕೆ ನಾರದರು ಗಂಭೀರವಾಗಿ ಯೋಚಿಸಿ ಹೀಗಂದರು.

"ನಾರಾಯಣ ನಾರಾಯಣ.. ಈಗ ಭೂಲೋಕದಲ್ಲಿ ಸಾಕಷ್ಟು ಮಾದರಿಯ ವಾಹನಗಳಿವೆ. ಮೈಲೇಜ್, ಸ್ಪೀಡ್, ಐಷಾರಾಮಿ ಕಾರುಗಳಿವೆ. ನೋಡಲು ಕೆಲವು ಥೇಟ್ ನಿಮ್ಮಲ್ಲಿರುವ ವಾಹನಗಳಂತೆ ಇವೆ" ಎಂದು ಅವರು ಕೆಲವು ದೇವರಿಗೆ ಕೆಲವು ವಾಹನ ಸೂಚಿಸಿದರು.

* ಶಿವನಿಗೆ ನಂದಿಯ ಮುಖ ಹೋಲುವ ಹೀರೋ ಹೋಂಡಾ ಹಂಕ್
* ಮೂಷಿಕನನ್ನು ಹೋಲುವ ನ್ಯಾನೊ ಕಾರು ಗಣಪತಿಗೆ
* ಯಮನ ಹೆಸರಿರುವ ಯಮಹಾ ಆರ್15 ಯಮಧರ್ಮರಾಯನಿಗೆ
* ಶನಿಗೆ ಕಾಗೆಯ ಕಪ್ಪುಬಣ್ಣದ ರೋಲ್ಸ್ ರಾಯ್ಸ್ ಕಾರು
* ವಿಷ್ಣುವಿಗೆ ಮೀನಿನಂತ್ತಿರುವ ಫೋಕ್ಸ್ ವ್ಯಾಗನ್ ಅಕ್ವಾ ಅಥವಾ ಆಮೆಯಂತ್ತಿರುವ ಬೀಟಲ್
* ಸುಬ್ರಹ್ಮಣ್ಯ ಸ್ವಾಮಿಗೆ ನವಿಲು ಬಣ್ಣದ ಪಲ್ಸರ್ ಬೈಕ್
* ಸಿಂಹದ ಬದಲಿಗೆ ದುರ್ಗೆಗೆ ಹರ್ಲಿ ಡೇವಿಡ್ ಸನ್ ಬೈಕ್

More from DriveSpark

Article Published On: Wednesday, August 31, 2011, 13:57 [IST]
English summary
Several gods decided to take a tour of the earth. When they were told their vaahanas or vehicles were not suitable to the current Indian roads they shose vehicles that suited their vaahanas. Shiva chose to ride Hero Hunk, Ganesh the Tata Nano, Yama the Yamaha R15 and so on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+