ಟೊಯೊಟಾ ಮಾರಾಟ ಶೇ. 84ರಷ್ಟು ಹೆಚ್ಚಳ

Toyota Kirloskar Motor
ನವದೆಹಲಿ, ಸೆ 02: ಜಪಾನಿನ ಬೃಹತ್ ವಾಹನ ತಯಾರಿಕಾ ಕಂಪನಿಯ ಭಾರತದ ಅಂಗಸಂಸ್ಥೆ ಟೊಯೊಟಾ ಕಿರ್ಲೊಸ್ಕರ್ ಮೊಟರ್ ಗೆ ಕಳೆದ ತಿಂಗಳು ಮಾರಾಟದಲ್ಲಿ ಭರ್ಜರಿ ಪ್ರಗತಿ ದಾಖಲಿಸಿದೆ. ಕಂಪನಿಯು ಕಳೆದ ತಿಂಗಳು 11,693 ಕಾರು ಮಾರಾಟ ಮಾಡಿದ್ದು, ಕಳೆದ ವರ್ಷದ ಆಗಸ್ಟ್ ನ 6,361 ಯೂನಿಟ್ ಗೆ ಹೋಲಿಸಿದರೆ ಶೇಕಡ 84ರಷ್ಟು ಏರಿಕೆ ದಾಖಲಿಸಿದೆ.

"ಕಂಪನಿಯ ಫ್ಲಾಗ್ ಷಿಪ್ ಆವೃತ್ತಿಗಳಾದ ಇನ್ನೋವಾ, ಎಟಿಯೋಸ್ ಮತ್ತು ಎಟಿಯೋಸ್ ಲಿವಾ ನೇತೃತ್ವದಲ್ಲಿ ಕಂಪನಿಯ ಮಾರಾಟ ಹೆಚ್ಚಳವಾಗಿದೆ" ಎಂದು ಟೊಯೊಟಾ ಕಿರ್ಲೊಸ್ಕರ್ ಮೊಟರ್ ನ ಮಾರುಕಟ್ಟೆ ವಿಭಾಗದ ಎಂಡಿ ಸಂದೀಪ್ ಸಿಂಗ್ ಹೇಳಿದ್ದಾರೆ.

ಕಳೆದ ತಿಂಗಳು ಕಂಪನಿಯು 4,305 ಯೂನಿಟ್ ಇನ್ನೋವಾ ಕಾರುಗಳನ್ನು ಮಾರಾಟ ಮಾಡಿತ್ತು. 2,824 ಯೂನಿಟ್ ಎಟಿಯೋಸ್ ಲಿವಾ ಮತ್ತು 2,710 ಎಟಿಯೋಸ್ ಸೆಡಾನ್ ಕಾರುಗಳು ಆಗಸ್ಟ್ ನಲ್ಲಿ ಮಾರಾಟವಾಗಿವೆ.

ಉಳಿದಂತೆ 913 ಯೂನಿಟ್ ಕೊರೊಲಾ ಆಲ್ಟಿಸ್, 897 ಫಾರ್ಚ್ಯುನರ್, 35 ಯೂನಿಟ್ ಕ್ಯಾಮ್ರಿ, 7 ಯೂನಿಟ್ ಪ್ರಾಡೊ ಮತ್ತು ತಲಾ ಒಂದೊಂದು ಲ್ಯಾಂಡ್ ಕ್ರೂಸರ್, ಪ್ರಿಯೂಸ್ ಕಾರುಗಳನ್ನು ಕಳೆದ ತಿಂಗಳು ಮಾರಾಟ ಮಾಡಿತ್ತು. ಇನ್ನು ಮುಂದಿನ ಹಬ್ಬದ ಸೀಸನಿನಲ್ಲಿ ಕಂಪನಿಯ ಕಾರು ಮಾರಾಟ ಇನ್ನಷ್ಟು ಪ್ರಗತಿ ಕಾಣುವ ನಿರೀಕ್ಷೆಯನ್ನು ಸಿಂಗ್ ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Friday, September 2, 2011, 11:38 [IST]
English summary
Toyota Kirloskar Motor increase of 84 percent in its sales for August 2011. Last month company sold 4,305 units of Innova, 2,824 units of Etios Liva, 2,710 units of Etios sedan, 913 units of Corolla Altis, 897 units of Fortuner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+