ವೆಸ್ಪಾ ಸ್ಕೂಟರ್ ಮೂಲಕ ಪಿಯಾಗಿಯೊ ಮರುಪ್ರವೇಶ

Piaggio Re enter Scooter Segment
ದೇಶದ ತ್ರಿಚಕ್ರ ಸಾರ್ವಭೌಮ ಪಿಯಾಗಿಯೊ ದ್ವಿಚಕ್ರ ಮಾರುಕಟ್ಟೆಗೆ ಶೀಘ್ರದಲ್ಲಿ ಮರುಪ್ರವೇಶ ಮಾಡಲಿದೆ. ಕಂಪನಿಯು ಶೀಘ್ರದಲ್ಲಿ ಐಕಾನಿಕ್ ವೆಸ್ಪಾ ಉತ್ಪಾದನೆ ಆರಂಭಿಸಲಿದೆ. ನೂತನ ವೆಸ್ಪಾ ಮುಂದಿನ ವರ್ಷದ ಮಾರ್ಚ್ ವೇಳೆಗೆ ದೇಶದ ರಸ್ತೆಗಿಳಿಯಲಿದೆ. ಇದರೊಂದಿಗೆ ಕಂಪನಿಯು ಬೈಕ್ ಮಾರುಕಟ್ಟೆಗೂ ಪ್ರವೇಶಿಸುವ ಯೋಜನೆ ಹೊಂದಿದೆ.

"ನೂತನ ವೆಸ್ಪಾ ಹೊರತರುವ ಉದ್ದೇಶದಿಂದ ಹೊಸ ಘಟಕವೊಂದನ್ನು ನಿರ್ಮಿಸುತ್ತಿದ್ದೇವೆ. ಇಲ್ಲಿ ವರ್ಷಕ್ಕೆ ಒಂದುವರೆ ಲಕ್ಷ ವೆಸ್ಪಾ ಸ್ಕೂಟರ್ ಉತ್ಪಾದಿಸಲಾಗುವುದು. ಮುಂದಿನ ವರ್ಷದ ವಾಹನ ಪ್ರದರ್ಶನದಲ್ಲಿ ಹೊಸ ವೆಸ್ಪಾ ಪ್ರದರ್ಶಿಸಲಿದ್ದೇವೆ. ಮಾರ್ಚ್ ವೇಳೆಗೆ ವೆಸ್ಪಾ ಬುಕ್ಕಿಂಗ್ ಆರಂಭಿಸಲಿದ್ದೇವೆ" ಎಂದು ಪಿಯಾಗಿಯೊ ವೆಹಿಕಲ್ಸ್ ಚೇರ್ಮನ್ ರವಿ ಛೋಪ್ರಾ ಹೇಳಿದ್ದಾರೆ.

ನೂತನ ವೆಸ್ಪಾ 125 ಸಿಸಿ ಎಂಜಿನ್ ಹೊಂದಿರಲಿದೆ ಮತ್ತು ಅದು ಗೇರ್ ಲೆಸ್ ಸ್ಕೂಟರ್ ಆಗಿರಲಿದೆ ಎಂದು ಛೋಪ್ರಾ ಮಾಹಿತಿ ನೀಡಿದ್ದಾರೆ. "2013ರ ವೇಳಗೆ ನೂತನ ಘಟಕವು ವರ್ಷಕ್ಕೆ 3 ಲಕ್ಷ ಸ್ಕೂಟರ್ ಉತ್ಪಾದನೆ ಸಾಮರ್ಥ್ಯ ಹೊಂದುವ ನಿರೀಕ್ಷೆಯಿದೆ" ಎಂದು ರವಿ ಛೋಪ್ರಾ ಹೇಳಿದ್ದಾರೆ.

ಕಂಪನಿಯು ಆರಂಭದಲ್ಲಿ ಭಾರತದ ಮಾರುಕಟ್ಟೆಗೆ ಮಾತ್ರ ವೆಸ್ಪಾ ಪರಿಚಯಿಸಲಿದೆ. ಇಲ್ಲಿನ ಸ್ಥಳೀಯ ಬೇಡಿಕೆಯ ಗುರಿ ಮುಟ್ಟಿದ ನಂತರ ವೆಸ್ಪಾ ರಫ್ತು ಕುರಿತು ಆಲೋಚಿಸಲಾಗುವುದು ಎಂದರು. ಇದರೊಂದಿಗೆ ಕಂಪನಿಯು ಭಾರತದಲ್ಲಿ ಬೈಕ್ ಹೊರತರುವ ಕುರಿತು ಅಧ್ಯಯನ ನಡೆಸುತ್ತಿದೆಯಂತೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ರವಿ ನಿರಾಕರಿಸಿದ್ದಾರೆ.

More from DriveSpark

Article Published On: Wednesday, September 7, 2011, 12:07 [IST]
English summary
Piaggio, the Indian three wheeler manufacturer it would soon restart building scooters and will start it with the new Vespa. The new Vespa will be launched in March next year. Piaggio is also considering to enter the motorcycle segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+