ಮುಂದಿನ ವರ್ಷ ಟೊಯೊಟಾದಿಂದ 1,500 ಸಿಬ್ಬಂದಿ ನೇಮಕಾತಿ

ಟೊಯೊಟಾ ಕಂಪನಿಯು ದೇಶದಲ್ಲಿ ಕಿರ್ಲೊಸ್ಕರ್ ಗ್ರೂಪ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಕಾರು ಉತ್ಪಾದನಾ ಸಾಮರ್ಥ್ಯವನ್ನು ಒಂದು ಲಕ್ಷ ಯೂನಿಟ್ ಗೆ ಹೆಚ್ಚಿಸಲು ಮತ್ತು ಬಿಡಿಭಾಗ ತಯಾರಿಕೆಗಾಗಿ ಕಂಪನಿಯು 1,650 ಕೋಟಿ ರು. ಹೂಡಿಕೆ ಮಾಡಿದೆ.
"2012ರಲ್ಲಿ ನಾವು 1,500 ಖಾಯಂ ನೌಕರರನ್ನು ನೇಮಕಮಾಡಿಕೊಳ್ಳಲಿದ್ದೇವೆ. ಜೊತೆಗೆ ಕೆಲವು ಗುತ್ತಿಗೆ ಆಧರಿತ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಿಕೊಳ್ಳಲಿದ್ದೇವೆ" ಎಂದು ಟೊಯೊಟಾ ಕಿರ್ಲೊಸ್ಕರ್ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ಶೇಖರ್ ವಿಶ್ವನಾಥನ್ ಹೇಳಿದ್ದಾರೆ.
ಈಗ ಟೊಯೊಟಾ ಕಿರ್ಲೊಸ್ಕರ್ ಕಂಪನಿಯ ಎರಡು ಬೆಂಗಳೂರು ಘಟಕಗಳಲ್ಲಿ ಸುಮಾರು 4,500 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇಕಡ 70ರಷ್ಟು ಖಾಯಂ ಸಿಬ್ಬಂದಿಗಳಾಗಿದ್ದಾರೆ.
ಕಂಪನಿಯು ಬೆಂಗಳೂರು ಘಟಕದಲ್ಲಿ ಈಗ ವರ್ಷಕ್ಕೆ 1.5 ಲಕ್ಷ ಯೂನಿಟ್ ಕಾರು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದನ್ನು 2012ರ ವೇಳೆಗೆ 2.1 ಲಕ್ಷ ಯೂನಿಟ್ ಗೆ ಹೆಚ್ಚಿಸಲು ನಿರ್ಧರಿಸಿದೆ.


Click it and Unblock the Notifications








