ಬೆಂಗಳೂರಲ್ಲಿ ಹೊಸ ಸಿ ಕ್ಲಾಸ್ ಮರ್ಸಿಡಿಸ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಸಿಕ್ಲಾಸ್ ಕಾರು ಸ್ಪೋರ್ಟಿ ಲುಕ್ ನಿಂದ ಆಕರ್ಷಕವಾಗಿ ಕಾಣುತ್ತದೆ. ಜರ್ಮನಿಯ ಕಾರು ಕಂಪನಿ ಈ ಕಾರಿಗೆ ಸಾಕಷ್ಟು ಹೊಸ ಫೀಚರುಗಳನ್ನು ಸೇರಿಸಿದೆ.
ಹಳೆಯ ಆವೃತ್ತಿಗೆ ಹೋಲಿಸಿದರೆ ಮರ್ಸಿಡಿಸ್ ನೂತನ ಸಿಕ್ಲಾಸ್ ಕಾರಿನಲ್ಲಿ ಬರೋಬ್ಬರಿ 2 ಸಾವಿರ ಬದಲಾವಣೆ ಮಾಡಲಾಗಿದೆಯಂತೆ. ಎಕ್ಸ್ ಟೀರಿಯರ್ ಪ್ಯಾನೆಲ್ ಸಂಪೂರ್ಣವಾಗಿ ಮರು ವಿನ್ಯಾಸ ಮಾಡಲಾಗಿದೆ. ಇಂಟಿರಿಯರ್ ಕೂಡ ಹೊಸ ವಿನ್ಯಾಸದಿಂದ ಇಷ್ಟವಾಗುತ್ತದೆ.
"ನೂತನ ಮರ್ಸಿಡಿಸ್ ಸಿ ಕ್ಲಾಸ್ ಕಾರು ಸಂಪೂರ್ಣವಾಗಿ ಮರುವಿನ್ಯಾಸವಾಗಿ ಬಂದಿದೆ. ಇದರಿಂದ ಗುಣಮಟ್ಟ, ಕಾರ್ಯಕ್ಷಮತೆ ಮತ್ತು ಐಷಾರಾಮಿ ಅನುಭವ ಹೆಚ್ಚಾಗಿದೆ" ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾ ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ದೇಬಾಶಿಸ್ ಮಿತ್ರಾ ಹೇಳಿದ್ದಾರೆ.
ನೂತನ ಸಿ ಕ್ಲಾಸ್ ಕಾರು ಎರಡು ಆಯ್ಕೆಗಳಲ್ಲಿ ದೊರಕುತ್ತಿದೆ. ಡೀಸೆಲ್ ಎಂಜಿನ್ ನ ಸಿ 250 ಸಿಡಿಐ ಮತ್ತು ಪೆಟ್ರೊಲ್ ಚಾಲಿತ ಸಿ 200 ಆಯ್ಕೆಗಳಲ್ಲಿ ದೊರಕುತ್ತದೆ. ಇವೆರಡು ಕಾರುಗಳು 7 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿವೆ.


Click it and Unblock the Notifications








