ಆಡಿಯಲ್ಲಿ 600 ಉದ್ಯೋಗ: ಇನ್ನಷ್ಟು ಶೋರೂಂ

Audi India
ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿ ದೇಶದಲ್ಲಿ ಹಲವು ವಿಸ್ತರಣಾ ಯೋಜನೆಗಳನ್ನು ಹೊಂದಿದೆ. ಕಂಪನಿಯು ಭಾರತದಲ್ಲಿ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ಕಂಪನಿಗಳನ್ನು ಹಿಂದಿಕ್ಕಲು ಹಲವು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.

ಇದೀಗ ಕಂಪನಿಯು 2012ರ ಅಂತ್ಯದ ಒಳಗೆ ಭಾರತದಲ್ಲಿ ಸುಮಾರು 600 ಹೊಸ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದೆ. ಜೊತೆಗೆ ಕಂಪನಿಯ ಡೀಲರ್ ನೆಟ್ ವರ್ಕ್ ಸಂಖ್ಯೆಯನ್ನು 25ಕ್ಕೆ ತಲುಪಿಸುವ ಯೋಜನೆಯೂ ಕಂಪನಿಗಿದೆ.

ಆಡಿ ಕಂಪನಿಗೆ ಭಾರತವು ವೇಗವಾಗಿ ಅಭಿವೃದ್ಧಿಕಾಣುತ್ತಿರುವ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಕಂಪನಿಯು ಈ ವರ್ಷ ಶೇಕಡ 95ರಷ್ಟು ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಪ್ರಸಕ್ತ ವರ್ಷದ ಅಂತ್ಯಕ್ಕೆ ಇಲ್ಲಿ ಸುಮಾರು 5 ಸಾವಿರ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಕಮಪನಿ ಹೊಂದಿದೆ.

ಹೊಸ ಉದ್ಯೋಗ ಸೃಷ್ಟಿಯ ಕುರಿತು ಕಂಪನಿಯ ಮುಖ್ಯಸ್ಥರಾದ ಮೈಕಲ್ ಪಾರ್ಷ್ಕೆ ಮಾಹಿತಿ ನೀಡಿದ್ದಾರೆ. "2012ಕ್ಕೆ ನಾವು ಒಟ್ಟು 600 ಹೊಸ ಉದ್ಯೋಗ ಸೃಷ್ಟಿಸಲಿದ್ದೇವೆ ಮತ್ತು ಡೀಲರ್ಷಿಪ್ ಸಂಖ್ಯೆಯನ್ನು 25ಕ್ಕೆ ಮುಟ್ಟಿಸಲಿದ್ದೇವೆ. ಜೊತೆಗೆ ಮುಂದಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಹೊಸ ಕಾರು ಹೊರತರುವ ಯೋಜನೆಯೂ ಇದೆ" ಎಂದು ಅವರು ಹೇಳಿದ್ದಾರೆ.

More from DriveSpark

Article Published On: Monday, September 12, 2011, 12:07 [IST]
English summary
Audi, the German premium car maker is looking to overtake BMW and Mercedes-Benz and become India’s highest selling premium car maker. The company has said it would be creating 600 new jobs in India and would expand its dealer network to 25 by the end of 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+