ಫೋಕ್ಸ್ ವ್ಯಾಗನ್ ಮೈತ್ರಿ ಕಡಿದುಕೊಳ್ಳಲು ಸುಜುಕಿ ನಿರ್ಧಾರ

ಆದರೆ ಈ ಒಪ್ಪಂದ ಯಾಕೋ ಕಂಪನಿಗಳಿಗೆ ಸರಿಬಂದಂತೆ ಕಾಣಲಿಲ್ಲ. ಮೈತ್ರಿ ಮಾಡಿಕೊಂಡು ಎರಡು ವರ್ಷ ಕಳೆದರೂ ಇವೆರಡು ಕಂಪನಿಗಳು ಇನ್ನೂ ಯಾವುದೇ ಡೀಲ್ ನಡೆಸಿಲ್ಲ. "ಫೋಕ್ಸ್ ವ್ಯಾಗನ್ ತಂತ್ರಜ್ಞಾನದ ಕುರಿತು ಆಸಕ್ತಿ ಹೊಂದಿಲ್ಲ" ಅಂತ ಸುಜುಕಿ ಚೇರ್ಮನ್ ಒಸಮು ಸುಜುಕಿ ಸಂದರ್ಶನವೊಂದರಲ್ಲಿ ಸೂಚ್ಯವಾಗಿ ಹೇಳಿದ್ದರು.
ಸುಜುಕಿಯ ಸಣ್ಣಕಾರು ನಿರ್ಮಾಣದ ಕುರಿತು ಫೋಕ್ಸ್ ವ್ಯಾಗನ್ ಒಮ್ಮೆ ಆಸಕ್ತಿ ತೋರಿತ್ತು. ಅದಕ್ಕಾಗಿ ಸುಜುಕಿಗೆ ತನ್ನ ತಂತ್ರಜ್ಞಾನ ನೆರವು ನೀಡಿತ್ತು.
ಫೋಕ್ಸ್ ವ್ಯಾಗನ್ ಕಣ್ಣು ಸುಜುಕಿಯ ಭಾರತದ ಬೃಹತ್ ಮಾರುಕಟ್ಟೆಯ ಮೇಲಿತ್ತು. ಭಾರತದಲ್ಲಿ ಮಾರುತಿ ಸುಜುಕಿ ಶೇಕಡ 50ರಷ್ಟು ಪ್ರಾಬಲ್ಯ ಪಡೆದಿದೆ. ಹೀಗಾಗಿ ಸಣ್ಣಕಾರುಗಳತ್ತ ಫೋಕ್ಸ್ ಕಣ್ಣುಬಿದ್ದಿತ್ತು.
ಜಪಾನಿನ ಕಾರು ಕಂಪನಿ ಫಿಯೆಟ್ ನಿಂದ ಡೀಸೆಲ್ ಎಂಜಿನ್ ಖರೀದಿಸಲು ಯೋಜಿಸಿದಾಗ ಇವೆರಡು ಕಂಪನಿಗಳ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಕುರಿತು ಕಂಪನಿಗಳ ನಡುವೆ ಶೀತಲ ಸಮರಗಳು ನಡೆದಿವೆ ಎನ್ನಲಾಗಿದೆ. ಮೈತ್ರಿ ಕುರಿತು ಸುಜುಕಿ ಇನ್ನೂ ಅಧಿಕೃತವಾಗಿ ಪ್ರಕಟಣೆ ನೀಡಿಲ್ಲ.


Click it and Unblock the Notifications








