ಮಾರುತಿ ನೇಮಕಾತಿ ಆರಂಭ, ಸ್ವಿಫ್ಟ್ ಗೆ ಟಾಪ್ ಗೇರ್

Swift Production
ಮಾನೆಸರ್ ಘಟಕದಲ್ಲಿ ಹೊಸ ಖಾಯಂ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯನ್ನು ಮಾರುತಿ ಸುಜುಕಿ ಆರಂಭಿಸಿದೆ. ಕಂಪನಿಯು ಮಾನೆಸರ್ ಘಟಕಕ್ಕೆ ಐಟಿಐ ತರಬೇತಿ ಪಡೆದ 50 ಸಿಬ್ಬಂದಿಗಳನ್ನು ಈಗಾಗಲೇ ನೇಮಕ ಮಾಡಿಕೊಂಡಿದೆ. ಕಂಪನಿಯು ನಿನ್ನೆ ಸುಮಾರು 500 ನೂತನ ಸ್ವಿಫ್ಟ್ ಕಾರುಗಳನ್ನು ಉತ್ಪಾದಿಸಿದೆ. ಇದರಲ್ಲಿ ಕೆಲವು ಕಾರುಗಳನ್ನು ಗುರ್ ಗಾಂವ್ ಘಟಕದಲ್ಲಿ ಉತ್ಪಾದಿಸಲಾಗಿದೆ.

ಹೊಸ ಸ್ವಿಫ್ಟ್ ಕಾರಿಗೆ ಬೇಡಿಕೆ ಹೆಚ್ಚಿರುವುದರಿಂದ ಮಾನೆಸರ್ ಘಟಕದಲ್ಲಿ ಇತರ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಕಂಪನಿ ಸಿಬ್ಬಂದಿಗಳು ಸುಮಾರು ಎರಡು ವಾರಗಳ ದೀರ್ಘಕಾಲದ ಪ್ರತಿಭಟನೆ ನಡೆಸಿದ್ದರಿಂದ ಉತ್ಪಾದನೆಗೆ ಹಿನ್ನಡೆಯಾಗಿತ್ತು. ಆದರೆ ಕಂಪನಿ ನೌಕರರ ವಿಷಯದಲ್ಲಿ ಯಾವುದೇ ರಾಜಿಗೆ ಮುಂದಾಗಲು ಇಚ್ಚಿಸಲಿಲ್ಲ.

ಕಂಪನಿಯು ಇತ್ತೀಚೆಗೆ ನೌಕರರಿಗೆ ಉತ್ತಮ ನಡತೆ ಬಂಧ ಅಗ್ರಿಮೆಂಟಿಗೆ ಸಹಿಹಾಕುವಂತೆ ನೌಕರರಿಗೆ ಸೂಚಿಸಿತ್ತು. ಇದಕ್ಕೆ ಸಹಿ ಹಾಕದವರನ್ನು ಕಂಪನಿಯು ಘಟಕ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಸಹಿಹಾಕದ ಸಿಬ್ಬಂದಿ ಸ್ಥಾನಕ್ಕೆ ಹೊಸ ಪರಿಣಿತರನ್ನು ಕಂಪನಿ ನೇಮಕ ಮಾಡಿಕೊಳ್ಳುತ್ತಿದೆ.

ಉತ್ತಮ ನಡತೆ ಬಂಧಕ್ಕೆ 1,800ಸಿಬ್ಬಂದಿಗಳಲ್ಲಿ ಕೇವಲ 95 ನೌಕರರು ಮಾತ್ರ ಸಹಿಹಾಕಿದ್ದರು. ಇದರಲ್ಲಿ ಕೆಲವು ಉದ್ಯೋಗಿಗಳನ್ನು ಈಗಾಗಲೇ ಕೆಲಸದಿಂದ ವಜಾ ಮಾಡಲಾಗಿದೆ.

ನೌಕರರ ಮುಷ್ಕರ ಹೊಸ ಸ್ವಿಫ್ಟ್ ಉತ್ಪಾದನೆಗೆ ಹೊಡೆತ ನೀಡಿದೆ. ಇದರಿಂದಾಗಿ ಸ್ವಿಫ್ಟ್ ವೇಟಿಂಗ್ ಅವಧಿಯು ಹೆಚ್ಚಾಗಿದೆ. ಶೋರೂಂಗಳಲ್ಲಿ ನೂತನ ಸ್ವಿಫ್ಟ್ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ. ಇದೀಗ ಸ್ವಿಫ್ಟ್ ವೇಟಿಂಗ್ ಅವಧಿ 6 ತಿಂಗಳಿಗೆ ತಲುಪಿದೆ.

More from DriveSpark

Article Published On: Tuesday, September 13, 2011, 15:11 [IST]
English summary
Maruti Suzuki has said it would start hiring new permanent employees for its Manesar plant today, Sep13, despite protests from striking workers yesterday. The carmaker has already brought in 50 more ITI trained and experienced workers to Manesar. Production is returning to normal levels with 500 Swifts having been built on Monday. Some of them were built at the Gurgaon plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+