ಮಾರ್ಕೊಪೊಲೊ ಬಸ್ ಗಳಿಗೆ ಟಾಟಾ ಹೇಳಿದ ಬಿಎಂಟಿಸಿ

"ಮಾರ್ಕೊಪೊಲೊ ಬಸ್ ಗಳು ಪರಿಸರಕ್ಕೆ ಹೊರಸೂಸುವ ಇಂಗಾಲದ ಪ್ರಮಾಣ ವೋಲ್ವೊ ಬಸ್ ಗಳಿಗಿಂತ ಹೆಚ್ಚಿದೆ. ಹೀಗಾಗಿ ಇನ್ನು ಮುಂದೆ ಮಾರ್ಕೊಪೊಲೊ ಬಸ್ ಗಳನ್ನು ಖರೀದಿಸುವುದಿಲ್ಲ" ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಕೆ ಆರ್ ಶ್ರೀನಿವಾಸ್ ಹೇಳಿದ್ದಾರೆ.
ಬಿಎಂಟಿಸಿ ಈಗ ಸುಮಾರು 100 ಟಾಟಾ ಮಾರ್ಕೊಪೊಲೊ ಬಸ್ ಹೊಂದಿದೆ. ಇದರಲ್ಲಿ ಹೆಚ್ಚಿನವು ಮೆಜೆಸ್ಟಿಕ್ ಮತ್ತು ಶಿವಾಜಿನಗರದಿಂದ ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ಮತ್ತು ರಾಜಾಜಿನಗರ ರಸ್ತೆಯಲ್ಲಿ ಸಂಚರಿಸುತ್ತಿವೆ.
"ಕೆಲವು ಮಾರ್ಕೊಪೊಲೊ ಬಸ್ ಗಳ ಫ್ಯೂಯೆಲ್ ಇಂಜೆಕ್ಷನ್ ಪಂಪ್ ಬದಲಾಯಿಸಿದ್ದೇವೆ. ಆದರೂ ಒಂದೆರಡು ಬಸ್ ಗಳು ಹೆಚ್ಚು ಹೊಗೆ ಉಗುಳುತ್ತಿವೆ" ಎಂದು ಅವರು ಹೇಳಿದ್ದಾರೆ. ಮಾರ್ಕೊಪೊಲೊ ಬಸ್ ಹೆಚ್ಚು ಹೊಗೆ ಉಗುಳುವ ಕುರಿತು ಅವರಿಗೆ ಯಾರೋ ಮಾಹಿತಿ ನೀಡಿದ್ದರಿಂದ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎಂದರು.


Click it and Unblock the Notifications








