ಉದ್ಯೋಗ ಕಡಿತ ಮಾಡುತ್ತಿದೆಯೇ ಮಾರುತಿ?

Firing Workers
ಮಾನೆಸರ್ ಘಟಕದಲ್ಲಿ ಆಗಸ್ಟ್ 29ರ ನಂತರ ಉತ್ತಮ ನಡತೆ ಬಂಧಕ್ಕೆ ಸಹಿಹಾಕದ ಕಂಪನಿಯ ನೌಕರರನ್ನು ಮಾರುತಿ ಸುಜುಕಿ ಕಂಪನಿಯಿಂದ ಹೊರಹಾಕಿದೆ. ಜೊತೆಗೆ ಕಂಪನಿಯು ಹೊಸ ಖಾಯಂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಸದ್ಯ ತಾತ್ಕಾಲಿಕ ನೌಕರರ ನೆರವಿನಿಂದ ಕಂಪನಿಯ ಕಾರು ಉತ್ಪಾದನೆ ತುಸು ಚೇತರಿಕೆ ಕಾಣುತ್ತಿದೆ.

ಇದರೊಂದಿಗೆ ಕಾರಿನ ಬೇಡಿಕೆಯು ನಿಧಾನವಾಗಿ ಏರಿಕೆ ಕಾಣುತ್ತಿದೆ. ಇದು ಕಂಪನಿಯ ಮುಂದಿನ ವರ್ಷದ ಲಾಭ ಮತ್ತು ಆದಾಯದ ಮೇಲೆ ಪರಿಣಾಮ ಬೀರಲಿದೆ. ಇದೇ ಕಾರಣದಿಂದ ಕಂಪನಿಯು ಉತ್ಪಾದನಾ ಪ್ರಮಾಣ ಕಡಿಮೆಯಾಗಿರುವುದಕ್ಕೆ ಸರಿದೂಗಿಸಲು ವೆಚ್ಚ ಕಡಿತ ಮಾಡುವ ನಿರೀಕ್ಷೆಯಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಸಿಬ್ಬಂದಿಗಳ ವಿರುದ್ಧ ಕಂಪನಿ ಕಠಿಣ ನಿಲುವು ಹೊಂದಿರುವುದು ಕೂಡ ಸಿಬ್ಬಂದಿ ಕಡಿತದ ಒಂದು ಭಾಗವೆಂದು ಅಭಿಪ್ರಾಯಪಡಲಾಗಿದೆ. ನಿಮಗಿಷ್ಟವಿದ್ದರೆ ಅಗ್ರಿಮೆಂಟಿಗೆ ಸಹಿ ಹಾಕಿ, ಕೆಲಸ ಮಾಡಿ. ಇಲ್ಲವಾದರೆ ಮನೆಗೆ ಹೋಗಿ ಎಂಬ ನಿಲುವು ಕಂಪನಿಯದ್ದು. ಎಲ್ಲಾ ನೌಕರರು ಉತ್ತಮ ನಡತೆ ಅಗ್ರಿಮೆಂಟಿಗೆ ಸಹಿ ಹಾಕದಿರುವ ನಿರೀಕ್ಷೆಯಿದೆ. ಇದರಿಂದ ಕಂಪನಿಯು ಒಂದೇ ಏಟಿಗೆ ಎರಡು ಲಾಭ ಪಡೆಯಲಿದೆ.

ಮಾರುತಿ ಸುಜುಕಿ ಮಾತ್ರವಲ್ಲದೇ ಹೆಚ್ಚಿನ ಕಂಪನಿಗಳು ಕಾರು ಉತ್ಪಾದನೆ ತಗ್ಗಿಸುತ್ತಿವೆ. ಮಾರಾಟ ಪ್ರಮಾಣ ಇಳಿಕೆ ಕಾಣುತ್ತಿರುವುದರಿಂದ ಈ ಕ್ರಮಕ್ಕೆ ಕಂಪನಿಗಳು ಮುಂದಾಗಿವೆ. ಮಾರುತಿ ಸುಜುಕಿ ಮಾನೆಸರ್ ಘಟಕದಲ್ಲಿನ ಉದ್ಯೋಗ ಕಡಿತವು ವಾಹನ ಕಂಪನಿಗಳ ಉದ್ಯೋಗ ಕಡಿತ ಪ್ರಕ್ರಿಯೆಗೆ ಮುನ್ನುಡಿಯಾಗಬಹುದು ಎಂಬ ಆತಂಕವನ್ನು ವಿಶ್ಲೇಷಕರು ವ್ಯಕ್ತಪಡಿಸುತ್ತಾರೆ.

Article Published On: Thursday, September 15, 2011, 11:41 [IST]
English summary
Maruti Suzuki has decided to hire new workers to replace striking workers with new ones if the do not sign the good conduct bond it proposed on 29th August. Production had come to a halt and is slowly picking up after the carmaker hired some new temporary workers. Is Maruti Firing Workers to Cut Costs?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+