ಪ್ರೀಮಿಯರ್ ರಿಯೊ ಕಾರು ರಸ್ತೆಗೆ, ದರ 4.7 ಲಕ್ಷ ರು.

ಇದು ಇತರ ಎಸ್ ಯುವಿಗಳಂತೆ ದೈತ್ಯ ಕಾರಲ್ಲ. ಇದು ಅಬಕಾರಿ ಸುಂಕ ಕಡಿಮೆ ಮಾಡುವ ಉದ್ದೇಶದಿಂದ ಗಾತ್ರದಲ್ಲಿ ನಾಲ್ಕು ಮೀಟರ್ ಸಣ್ಣದಾಗಿದೆ. ಇದಕ್ಕೂ ಮುನ್ನ ಕಂಪನಿಯು ಸುಮಾರು 5.29 ಲಕ್ಷ ರುಪಾಯಿಗೆ ಡೀಸೆಲ್ ರಿಯೊ ಆವೃತ್ತಿಯನ್ನು ಪರಿಚಯಿಸಿತ್ತು. ಅಂದಹಾಗೆ ಪುಣೆ ಮೂಲದ ಪ್ರಿಮೀಯರ್ ಕಂಪನಿಯು ಮೊದಲ ಕಾಂಪ್ಯಾಕ್ಟ್ ಎಸ್ ಯುವಿ ಕೂಡ ಹೌದು.
ನೂತನ ರಿಯೊ 1.2 ಲೀಟರಿನ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 76 ಹಾರ್ಸ್ ಪವರ್ ಮತ್ತು 104 ಎನ್ಎಂ ಟಾರ್ಕ್ ನೀಡುತ್ತದೆ. ರಿಯೊ ಡೀಸೆಲ್ ಆವೃತ್ತಿ ಪ್ರತಿಲೀಟರ್ ಗೆ 16 ಕಿ.ಮೀ. ಮೈಲೇಜ್ ನೀಡುತ್ತದೆ. ಪೆಟ್ರೊಲ್ ಆವೃತ್ತಿ ಪ್ರತಿಲೀಟರ್ ಗೆ ಸುಮಾರು 12 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ.
ರಿಯೋ ಕಾರಿನ ವಿಶೇಷತೆ ತಿಳಿಯಲು NEXT ಕ್ಲಿಕ್ ಮಾಡಿರಿ


Click it and Unblock the Notifications