ರಿಯೋ ಕಾರಿನ ಫೀಚರು ಸೂಪರ್ ಗುರು

ಅಗ್ಗದ ರಿಯೊ ಕಾರಿನಲ್ಲಿ ಯಾವೆಲ್ಲ ಫೀಚರುಗಳಿವೆ ಎಂದು ಕೇಳುತ್ತೀರಾ. ದರ ಕಡಿಮೆಯಾದರೂ ಸುರಕ್ಷತೆಯ ಫೀಚರುಗಳು ರಿಯೊ ಕಾರಿನಲ್ಲಿ ಕಡಿಮೆಯಾಗಿಲ್ಲ. ಇದರಲ್ಲಿ ಸೀಟ್ ಬೆಲ್ಟ್. ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಮುಂತಾದ ಸುರಕ್ಷತೆಯ ಫೀಚರುಗಳಿವೆ.

ಪವರ್ ಸ್ಟೇರಿಂಗ್, ಮಡುಚಬಹುದಾದ ಹಿಂದಿನ ಸೀಟು(ಇದರಿಂದ ಲಗೇಜ್ ಗಾತ್ರ ಹೆಚ್ಚಾಗಲಿದೆ. ಹಿಂದಿನ ವಿಂಡೋಗೂ ವೈಪರ್ ಇದೆ. ಪವರ್ ವಿಂಡೋಸ್, ಎಲೆಕ್ಟ್ರಾನಿಕ್ ಡೋರ್ ಮಿರ್ ಮತ್ತು ರಿಮೋಟ್ ಕಂಟ್ರೋಲ್ ಲಾಕಿಂಗ್ ಇತ್ಯಾದಿ ಪ್ರಮುಖ ಫೀಚರುಗಳಿವೆ.

ರಿಯೊ ಪೆಟ್ರೊಲ್ ಕಾರಿನ ಟೆಕ್ ಮಾಹಿತಿ
* ಎಂಜಿನ್: 4 ಸಿಲಿಂಡರ್, 1.2 ಲೀಟರ್ ಬಿಎಸ್4 ಎಂಪಿಎಫ್ಐ ಪೆಟ್ರೊಲ್ ಎಂಜಿನ್
* ಗರಿಷ್ಠ ಶಕ್ತಿ: 75.6 ಹಾರ್ಸ್ ಪವರ್ @ 5800 ಆರ್ ಪಿಎಂ
* ಗರಿಷ್ಠ ಟಾರ್ಕ್: 103.9 ಎನ್ಎಂ @ 3500 ನಿಂದ 4 ಸಾವಿರ ಆರ್ ಪಿಎಂ
* ಸೀಟು: ಐದು ಜನರು ಕುಳಿತುಕೊಳ್ಳಬಹುದು
* ಗೇರ್: 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್
* ಇಂಧನ ಟ್ಯಾಂಕ್ ಸಾಮರ್ಥ್ಯ: 46 ಲೀಟರ್
* ಬ್ರೇಕ್: ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗ ಡ್ರಮ್ ಬ್ರೇಕ್

ಫೀಚರುಗಳು
* ಮುಂಭಾಗದ ಮತ್ತು ಹಿಂಭಾಗದ ವಿಂಡೋಗೆ ವೈಪರ್ ಮತ್ತು ವಾಷರ್
* ಬಣ್ಣದ ಕಿಟಕಿಗಳು
* ಹಿಂಭಾಗಕ್ಕೆ ಫಾಗ್ ಲ್ಯಾಂಪ್
* ಡೇ-ನೈಟ್ ರಿಯರ್ ವ್ಯೂ ಮಿರರ್
* ಡಿಜಿಟಲ್ ಕ್ಲಾಕ್, 4 ಸ್ಪೀಕರ್
* ಪವರ್ ಸ್ಟೇರಿಂಗ್
* ಟೆಕ್ನೊಮೀಟರ್, 3 ಸ್ಪೋಕ್ ಸ್ಟೇರಿಂಗ್ ವೀಲ್
* ಮುಂಭಾಗದಲ್ಲಿ ಎಲೆಕ್ಟ್ರಿಕ್ ವಿಂಡೋ
* ಮ್ಯಾನುಯಲ್ ಏರ್ ಕಂಡಿಷನ್
* ಹೀಟರ್
* ಸುರಕ್ಷತೆಯ ಫೀಚರು: ಇಬಿಡಿ ಮತ್ತು ಎಬಿಎಸ್, ಸೀಟ್ ಬೆಲ್ಟ್
* ಚೈಲ್ಡ್ ಲಾಕ್, ಕೀಲೆಸ್ ಎಂಟ್ರಿ, ಬ್ರೇಕ್ ಅಸಿಸ್ಟ್ ಇತ್ಯಾದಿ.

Most Read Articles

Kannada
English summary
Premier has equipped the Rio compact SUV with several features. Some of the notable ones are power steering, split foldable rear seats etc. Please find below the extensive features and specifications of the Rio petrol.
Story first published: Friday, September 16, 2011, 13:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X