ಹೊಸ ಕಾರಿನ ನೋಂದಣಿಯಲ್ಲಿ ಮೋಸ ಮಾಡಿದ್ದ ಅಮಲಾ ಪೌಲ್‌ಗೆ 20 ಲಕ್ಷ ದಂಡ..!!
ಕಾಲಿವುಡ್ ಸಿನಿರಂಗದ ಸಹಜ ಸುಂದರಿ ಅಂದ್ರೆ ಅದು ಅಮಲಾ ಪೌಲ್. ಆದ್ರೆ ಇದೀಗ ಅವರು ಹೊಸ ಕಾರಿನ ನೋಂದಣಿ ವಿಚಾರವಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕಾಲಿವುಡ್ ಸಿನಿರಂಗದ ಸಹಜ ಸುಂದರಿ ಅಂದ್ರೆ ಅದು ಅಮಲಾ ಪೌಲ್. ದಕ್ಷಿಣ ಭಾರತ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದ ಅಮಲಾ ಪೌಲ್ ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ರು. ಆದ್ರೆ ಇದೀಗ ಅವರು ಹೊಸ ಕಾರಿನ ನೋಂದಣಿ ವಿಚಾರವಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಅಮಲಾ ಈಗ ತಮಿಳು ಮತ್ತು ಮಲಯಾಳಂ ನಲ್ಲಿ ಸಖತ್ ಬುಸ್ಸಿಯಾಗಿದ್ದು, ಆಕೆಯ ಕೈ ತುಂಬ ಸಿನಿಮಾಗಳಿವೆ. ಆದ್ರೆ ಇದೇ ಗ್ಯಾಪ್‌ನಲ್ಲಿ ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್350 ಕಾರು ಖರೀದಿಸಿದ್ದ ಅಮಲಾ, ಕಾರು ನೋಂದಣಿ ವೇಳೆ ಮಹಾಪ್ರಮಾದ ಎಸಗಿಸಿದ್ದಾರೆ.

ಐಷಾರಾಮಿ ಕಾರುಗಳ ಮೇಲಿನ ತೆರಿಗೆಯನ್ನು ತಪ್ಪಿಸಿಕೊಳ್ಳಲು ಹೋಗಿ ಸಿಕ್ಕಿಬಿದ್ದಿದ್ದು, ಕೇರಳ ಸಾರಿಗೆ ಇಲಾಖೆಯ ಅಧಿಕಾರಿಗಳಿಂದ 20 ಲಕ್ಷ ದಂಡ ಹಾಕಿಸಿಕೊಂಡಿರುವ ಘಟನೆ ನಡೆದಿದೆ.
Recommended Video


ಘಟನೆಯ ಹಿನ್ನೆಲೆ
ಕಳೆದ ಅಗಸ್ಟ್‌ನಲ್ಲಿ ಅಮಲಾ ಪೌಲು ಅವರು ಪುದುಚೇರಿಯಲ್ಲಿ ಮರ್ಸಿಡಿಸ್ ಬೆಂಝ್ ಎಸ್350 ಕಾರು ಖರೀದಿಸಿದ್ದರು. ಜೊತೆಗೆ ಪುದಚೇರಿಯಲ್ಲಿಯೇ ಹೊಸ ಕಾರಿನ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು.

ಆದ್ರೆ ಹೊಸ ಕಾರು ಪುದುಚೇರಿ ನೋಂದಣಿ ಮಾಡಿಸಿ ಕೇರಳ ರಸ್ತೆಗಳಲ್ಲಿ ಕಾರು ಬಳಕೆ ಮಾಡುತ್ತಿರುವುದನ್ನ ಪತ್ತೆ ಹಚ್ಚಿದ ಪೊಲೀಸರು, ಅಮಲಾ ಪೌಲ್ ವಿರುದ್ಧ ಸುಮಾರು 6 ವಿವಿಧ ಪ್ರಕರಣಗಳನ್ನು ದಾಖಲು ಮಾಡಿದ್ದರು.

ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಕೇರಳ ಪೊಲೀಸರು, ಪುದುಚೇರಿಯಲ್ಲಿ ಮಾಡಲಾಗಿದ್ದ ಕಾರಿನ ನೋಂದಣಿ ಬಗ್ಗೆಯು ಕುಲಂಕೂಶವಾಗಿ ಮಾಹಿತಿ ಕಲೆ ಹಾಕಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ತಪ್ಪದೇ ಓದಿರಿ- ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ವರದಿಯ ಪ್ರಕಾರ ತೆರಿಗೆ ಮುಕ್ತವಾಗಿರುವ ಪುದಚೇರಿಯಲ್ಲಿ ದಾಖಲಾಗಿರುವ ಮರ್ಸಿಡಿಸ್ ಬೆಂಝ್ ಕಾರಿನ ನೋಂದಣಿಯಲ್ಲೂ ಗೋಲ್‌ಮಾಲ್ ನಡೆದಿದ್ದು, ಪರಿಚಯವಿದ್ದ ಎಂಜನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ದಾಖಲೆಗಳನ್ನು ನೀಡಿ ಕಾರಿನ ನೋಂದಣಿಯನ್ನು ಮಾಡಿಸಲಾಗಿದೆ.

ಬಿತ್ತು ಭಾರೀ ಪ್ರಮಾಣದ ದಂಡ
ಇದರಿಂದ ಅಮಲಾ ಪೌಲ್ ವಿರುದ್ಧ ಭಾರೀ ಪ್ರಮಾಣದ ದಂಡ ವಿಧಿಸಿರುವ ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು 20 ಲಕ್ಷ ದಂಡ ಹಾಕಿದ್ದಾರೆ. ಒಂದು ವೇಳೆ ದಂಡ ಕಟ್ಟಲು ಸಾಧ್ಯವಿಲ್ಲವಾದ್ರೆ 7 ವರ್ಷ ಜೈಲು ವಾಸ ಅನುಭವಿಸಬೇಕಾದ ಪರಿಸ್ಥಿತಿ ಬಂದೊಗಿದೆ.

ಕಾರಿನ ಎಂಜಿನ್ ಸಾಮರ್ಥ್ಯ
ಕ್ಲಾಸಿಕ್ ಕಾರು ಮಾದರಿಗಳಲ್ಲಿ ಅತಿಹೆಚ್ಚು ಜನಪ್ರಿಯಗೊಂಡಿರುವ ಮರ್ಸಿಡಿಸ್ ಬೆಂಝ್ ಎಸ್350 ಕಾರು 3.0-ಡೀಸೆಲ್ ಎಂಜಿನ್ ಹೊಂದಿದ್ದು, 620 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ಹೀಗಾಗಿ ಇದರ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1.30ಕೋಟಿ ಇದೆ.
Trending On DriveSpark Kannada:


Click it and Unblock the Notifications








