ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಭಾರತೀಯ ಕಾರುಗಳನ್ನು ಸುರಕ್ಷಿತವಾಗಿಸಲು ನಿಟ್ಟಿನಲ್ಲಿ ಹೊಸ ಸುರಕ್ಷತಾ ನಿಯಮಗಳನ್ನು ಮುಂದಿನ ವರ್ಷದ ಜುಲೈ 1ರಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಹೊಸ ನಿಯಮದಿಂದಾಗಿ ಅಪಘಾತಗಳ ಸಂದರ್ಭದಲ್ಲಿ ಪ್ರಾಣಹಾನಿಯ ಪ್ರಮಾಣ ಕಡಿಮೆಯಾಗಲ

By Girish

ಭಾರತೀಯ ಕಾರುಗಳನ್ನು ಸುರಕ್ಷಿತವಾಗಿಸಲು ನಿಟ್ಟಿನಲ್ಲಿ ಹೊಸ ಸುರಕ್ಷತಾ ನಿಯಮಗಳನ್ನು ಮುಂದಿನ ವರ್ಷದ ಜುಲೈ 1ರಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಹೊಸ ನಿಯಮದಿಂದಾಗಿ ಅಪಘಾತಗಳ ಸಂದರ್ಭದಲ್ಲಿ ಪ್ರಾಣಹಾನಿಯ ಪ್ರಮಾಣ ಕಡಿಮೆಯಾಗಲಿದೆ.

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಹೌದು, ಭಾರತದ ರಸ್ತೆಗಳು ಅತ್ಯಂತ ಅಪಾಯಕಾರಿ ಎನ್ನಿಸುವ ಹಂತಕ್ಕೆ ಬಂದು ತಲುಪಿದ್ದು, ದಿನಬೆಳಗ್ಗೆ ಎದ್ದರೆ ಸಾಕು ಟಿವಿ, ಪೇಪರ್‌ಗಳಲ್ಲಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಬರೀ ಅಪಘಾತಗಳ ಬಗ್ಗೆ ಕೇಳಿ, ಕೇಳಿ ಮನಸ್ಥಿತಿಗಳು ಅಪಘಾತಗಳ ಬಗ್ಗೆ 'ನಿರ್ಲಕ್ಷ್ಯ' ಧೋರಣೆ ಹೊಂದುವ ಮಟ್ಟಕ್ಕೆ ಬಂದು ನಿಂತಿವೆ. ಗಂಟೆಗೆ ನೂರಾರು ಜನ ರಸ್ತೆಗಳ ಮೇಲೆ ಪ್ರಾಣ ಬಿಡುತ್ತಿರುವುದನ್ನು ಕಂಡು, ಇದಕ್ಕೆ ಕೊನೆಯೇ ಇಲ್ಲವೇ ? ಎಂಬ ಅಸಹಾಯಕ ಮಾತುಗಳು ನಮ್ಮಲ್ಲೇ ಮೂಡಿರುವುದು ಸತ್ಯ !!

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಆದ್ರೆ, ಇದಕ್ಕೆಲ್ಲಾ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಭಾರತದಲ್ಲಿ ಅನುಷ್ಠಾಗೊಳಿಸಲು ಮುಂದಾಗಿದ್ದು, ಈ ನಿರ್ಧಾರವು ಸಾಕಷ್ಟು ಜೀವಗಳಿಗೆ ಜೀವರಕ್ಷಕವಾಗಿ ಕೆಲಸ ಮಾಡಲಿದೆ ಎನ್ನಬಹುದು.

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಪ್ರಯಾಣಿಕರ ಮತ್ತು ಪಾದಚಾರಿಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೂತನ ನಿಯಮವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಅನುಮೋದಿಸಿದ್ದು, ಪ್ರತಿ ವರ್ಷ ಸಂಭವಿಸುವ 1.52 ಲಕ್ಷ ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸುವ ಕಾರ್ಯ ಮುಂದಿನ ವರ್ಷದಿಂದ ನೆಡೆಯಲಿದೆ.

Recommended Video

[Kannada] BMW 330i Gran Turismo Launched In India - DriveSpark
ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಹೌದು, ಈ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿರುವ ಸರ್ಕಾರ, ಮುಂದಿನ ವರ್ಷದ ಜುಲೈ ತಿಂಗಳಿನಿಂದ ತಯಾರಾಗುವ ಎಲ್ಲಾ ವಾಹನಗಳಲ್ಲಿ ಏರ್ ಬ್ಯಾಗ್‌ಗಳು, ಸೀಟ್-ಬೆಲ್ಟ್ ಜ್ಞಾಪನೆಗಳು, ಗಂಟೆಗೆ 80 ಕಿ.ಮೀ ಗರಿಷ್ಠ ಮಿತಿ, ರಿವರ್ಸ್ ಪಾರ್ಕಿಂಗ್ ಎಚ್ಚರಿಕೆಗಳು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸೆಂಟ್ರಲ್ ಲಾಕಿಂಗ್ ತೆರೆದುಕೊಳ್ಳುವ ವ್ಯವಸ್ಥೆ, ನಿಗಧಿಗೂ ಹೆಚ್ಚಿನ ಅತಿಕ್ರಮಣವನ್ನು ದಾಟಿದ ನಂತರ ವೇಗದ ಬಗ್ಗೆ ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಲಿದೆ.

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ದೀರ್ಘಕಾಲದಿಂದಲೂ ಸಹ ಹೆಚ್ಚುವರಿ ಸುರಕ್ಷತಾ ಲಕ್ಷಣಗಳನ್ನು ಅಳವಡಿಸುವ ಬಗ್ಗೆ ಚರ್ಚೆಗಳು ನೆಡೆಯುತ್ತಲೇ ಇದ್ದವು. ಆದರೆ, ಒಮ್ಮತದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗುತ್ತಿದ್ದವು ಎನ್ನಬಹುದು. ಕೊನೆಗೂ ರಸ್ತೆ ಸಾರಿಗೆ ಇಲಾಖೆಯು ಹೊಸ ನಿಯಮ ಅಂಗೀಕರಿಸಿದೆ.

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಪ್ರಸ್ತುತ, ಬಹಳಷ್ಟು ವಾಹನ ತಯಾರಕ ಸಂಸ್ಥೆಗಳು ಸುರಕ್ಷತಾ ವೈಶಿಷ್ಟ್ಯಗಳನ್ನು ಕಾರಿನ ಒಂದು ಭಾಗವಾಗಿ ನೀಡುತ್ತಿವೆ ಮತ್ತು ಉನ್ನತ-ಶ್ರೇಣಿಯ ಐಷಾರಾಮಿ ವಾಹನಗಳಲ್ಲಿ ಮಾತ್ರ ಈ ವೈಶಿಷ್ಟ್ಯಗಳನ್ನು ಒದಗಿಸುತ್ತಿರುವುದನ್ನು ನಾವು ನೋಡಬಹುದಾಗಿದೆ.

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಹೊಸ ಕಾರುಗಳು 80 km ವೇಗವನ್ನು ದಾಟಿದ ನಂತರ ಆಡಿಯೋ ಎಚ್ಚರಿಕೆ, ಅದೇ ವಾಹನವು 100 ಕಿಲೋಮೀಟರ್ ದಾಟಿದಾಗ ಎಚ್ಚರಿಕೆಯು ಚುರುಕಾಗಿಸುವ ವ್ಯವಸ್ಥೆ ಮತ್ತು ಈ ವೇಗ 120 ಕಿ.ಮೀ.ಗಿಂತಲೂ ಹೆಚ್ಚಿಗೆ ಹೋದಾಗ ತಡೆರಹಿತ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ತರಲಾಗುತ್ತಿದೆ.

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಹಿಂಭಾಗದ ಸಂವೇದಕಗಳು ಮತ್ತು ಗಾಳಿಚೀಲಗಳನ್ನು ಹಗುರ ವಾಣಿಜ್ಯ ವಾಹನಗಳಿಗೂ ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ, ಪ್ರಾಥಮಿಕವಾಗಿ ನಗರ ಪ್ರದೇಶಗಳಲ್ಲಿ ಮಾತ್ರ ಈ ನಿಯಮ ಅನುಷ್ಠಾನಗೊಳ್ಳಲಿದೆ.

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಅಪಘಾತದ ನಂತರ ಪ್ರಯಾಣಿಕರು ವಾಹನದ ಒಳಗೆ ಸಿಲುಕಿಕೊಳ್ಳುವ ಘಟನೆಗಳು ಇತ್ತೀಚಿಗೆ ಹೆಚ್ಚಾಗಿದ್ದು, ಅಪಘಾತಗಳು ಅಥವಾ ಬೆಂಕಿಯ ಘಟನೆ ಸಂಭವಿಸಿದ್ದಲ್ಲಿ ಸ್ವಯಂಚಾಲಿತವಾಗಿ ಕಾರಿನ ಬಾಗಿಲು ತೆರೆದುಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಬೇಕು ಎಂಬ ನಿಯಮವನ್ನು ಕೇಂದ್ರ ಜಾರಿಗೆ ತರುತ್ತಿದೆ.

Most Read Articles

Kannada
English summary
In a bid to make the Indian cars safer, new safety rules will be implemented from July 1, 2019. As per the new rule, all the vehicles manufactured after 1st July 2019 will have to be equipped with airbags, seat-belt reminders, an alert system for speed after crossing 80 km/h, reverse parking alerts, and manual override over the central locking system for emergencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X