ಹರಾಜಿಗಿಡಲಾದ ಸ್ಟೀವ್ ಜಾಬ್ಸ್ ಕಾರಿನ ಬೆಲೆ ಎಷ್ಟು ಗೊತ್ತಾ?
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಈ ಹಿಂದೆ ಬಳಿಕೆ ಮಾಡುತ್ತಿದ್ದ ಅಚ್ಚುಮೆಚ್ಚಿನ ಕಾರು ಬಿಎಂಡಬ್ಲ್ಯು ಝಡ್8 ಅಮೆರಿಕದಲ್ಲಿ ಹರಾಜಾಗಿಡಲಾಗಿದ್ದು, ಬೃಹತ್ ಮೊತ್ತಕ್ಕೆ ಮಾರಾಟವಾಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಈ ಹಿಂದೆ ಬಳಿಕೆ ಮಾಡುತ್ತಿದ್ದ ಅಚ್ಚುಮೆಚ್ಚಿನ ಕಾರು ಬಿಎಂಡಬ್ಲ್ಯು ಝಡ್8 ಅಮೆರಿಕದಲ್ಲಿ ಹರಾಜಾಗಿಡಲಾಗಿದ್ದು, ಬೃಹತ್ ಮೊತ್ತಕ್ಕೆ ಮಾರಾಟವಾಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಬಿಎಂಡಬ್ಲ್ಯು ಕಾರು ಮಾದರಿಗಳಲ್ಲೇ ಅತಿ ಹೆಚ್ಚು ದುಬಾರಿಯಾಗಿರುವ ಝಡ್8 ಹಲವು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಟೈಟಾನಿಯಂ ಫಿನಿಶಿಂಗ್ ಇರೋ ಈ ಸ್ಪೋರ್ಟ್ಸ್ ಕಾರಿಗೆ ಲೆದರ್ ಇಂಟೀರಿಯರ್ ಅನ್ನು ಹೊಂದಿರುವ ಮತ್ತೊಂದು ವಿಶೇಷ.

ಹೀಗಾಗಿಯೇ 2000ರ ಅಕ್ಟೋಬರ್ ನಲ್ಲಿ ಈ ಕಾರನ್ನು ಖರೀದಿ ಮಾಡಿದ್ದ ಸ್ಪೀವ್ ಜಾಬ್ಸ್, 2003ರವರೆಗೆ ಇದೇ ಕಾರನ್ನು ಬಳಕೆ ಮಾಡಿದ್ದರು. ತದನಂತರ ಹೊಸ ಕಾರು ಖರೀದಿ ಹಿನ್ನೆಲೆ ಲಾಸ್ ಏಂಜಲೀಸ್ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದರು.
Recommended Video


ಆದ್ರೆ ಬಿಎಂಡಬ್ಲ್ಯು ಝೆಡ್ 8 ಖರೀದಿ ಮಾಡಿದ್ದ ಲಾಸ್ ಏಂಜಲೀಸ್ ಮೂಲದ ವ್ಯಕ್ತಿ ಇದೀಗ ಮತ್ತೆ ಸಾಮಾಜಿಕ ಸೇವೆಗಳ ನಿಧಿ ಸಂಗ್ರಹಕ್ಕಾಗಿ ಸ್ಟೀವ್ ಜಾಬ್ಸ್ ಕಾರನ್ನು ಮರು ಮಾರಾಟ ಮಾಡುತ್ತಿದ್ದು, ಡಿಸೆಂಬರ್ 6ರಂದು ಈ ಕಾರನ್ನು ಹರಾಜು ಹಾಕಲಾಗುತ್ತಿದೆ.

ನೀರಿಕ್ಷೆಗೂ ಮೀರಿ ಬಂದ ಬೇಡಿಕೆ
ಹೌದು.. ಯಾವಾಗ ಸ್ಟೀವ್ ಜಾಬ್ಸ್ ಬಳಕೆ ಮಾಡಿದ ಕಾರು ಮಾರಟಕ್ಕಿದೆ ಎನ್ನಲಾಯಿತೊ ಅಂದಿನಿಂದಲೇ ಝಡ್8 ಕಾರು ತಮ್ಮದಾಗಿಸಿಕೊಳ್ಳಲು ಸಾವಿರರು ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದು, 3 ರಿಂದ 3.5 ಕೋಟಿಗೆ ಮಾರಾಟವಾಗುವ ನೀರಿಕ್ಷೆಯಿದೆ.

ಕಾರಿನ ಎಂಜಿನ್ ವಿಶೇಷತೆ ಏನು?
ಅಲ್ಯುಮಿನಿಯಂ ಚಾರ್ಸಿ ಹೊಂದಿರುವ ಝಡ್8 ಕಾರು ಮಾದರಿಯು 4.9-ಲೀಟರ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 402-ಬಿಎಚ್‌ಪಿ ಮತ್ತು 500-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.
ಓದರಿ- ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಹೀಗಾಗಿಯೇ 5 ಸೇಕೆಂಡುಗಳಲ್ಲಿ 100 ಕಿಮಿ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಪ್ರತಿ ಗಂಟೆಗೆ 230 ಕಿಮಿ ಸಾಗುವ ಗುಣ ಹೊಂದಿದೆ.

ಇನ್ನು 2000ರಲ್ಲಿ ಸ್ಟೀವ್ ಜಾಬ್ಸ್ ಈ ಕಾರನ್ನು ಖರೀದಿಸಿದ 67ನೇ ಗ್ರಾಹಕರಾಗಿದ್ದು, ಸ್ಟೀವ್ ಗೆ ಸೂಪರ್ ಕಾರುಗಳ ಬಗ್ಗೆ ಯಾವುದೇ ಕ್ರೇಝ್ ಕೂಡಾ ಇರಲಿಲ್ಲ. ಆದರೂ ಅಧಿಕ ಮೊತ್ತದ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದರು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಈ ಹಿಂದೆ ಬಳಕೆ ಮಾಡಿದ್ದ ಸ್ಟೀವ್ ಜಾಬ್ಸ್ ಬಿಎಂಡಬ್ಲ್ಯು ಝೆಡ್8 ಕಾರನ್ನು ಇದೀಗ ಮೂರನೇ ವ್ಯಕ್ತಿ ಮಾರಾಟ ಮಾಡುತ್ತಿದ್ದು, ಸಾಮಾಜಿಕ ಕಾರ್ಯಗಳ ನಿಧಿ ಸಂಗ್ರಹಕ್ಕಾಗಿ ಈ ವಿನೂತನ ಕಾರನ್ನು ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಡಿಸೆಂಬರ್ 6ರಂದು ಇದರ ನಿಖರ ಬೆಲೆ ಗೊತ್ತಾಗಲಿದೆ ಎನ್ನಬಹುದು.
Trending On DriveSpark Kannada:
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!
ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು ಯಾವವು? ಇಲ್ಲಿದೆ ಬಿಡುಗಡೆಯ ಸಂಪೂರ್ಣ ಮಾಹಿತಿ..!
ಇದು ಟಾಟಾ ಕಾರುಗಳ ಗಮ್ಮತ್ತು- ಪ್ರವಾಹದಲ್ಲೂ ಆಪ್ ರೋಡ್ ಕಸರತ್ತು ಪ್ರದರ್ಶನ ಮಾಡಿದ ಹೆಕ್ಸಾ


Click it and Unblock the Notifications








