ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು ಯಾವವು? ಇಲ್ಲಿದೆ ಬಿಡುಗಡೆಯ ಸಂಪೂರ್ಣ ಮಾಹಿತಿ..!

ಮುಂದಿನ ತಿಂಗಳು ನವೆಂಬರ್‌ನಲ್ಲಿ ಬಹುನೀರಿಕ್ಷಿತ ಪ್ರಮುಖ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಹೊಸ ಕಾರುಗಳ ಬಿಡುಗಡೆಯ ದಿನಾಂಕ, ಬೆಲೆ ಮತ್ತು ಎಂಜಿನ್ ಸಾಮರ್ಥ್ಯದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

By Praveen

ಮುಂದಿನ ತಿಂಗಳು ನವೆಂಬರ್‌ನಲ್ಲಿ ಬಹುನೀರಿಕ್ಷಿತ ಪ್ರಮುಖ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಹೊಸ ಕಾರುಗಳ ಬಿಡುಗಡೆಯ ದಿನಾಂಕ, ಬೆಲೆ ಮತ್ತು ಎಂಜಿನ್ ಸಾಮರ್ಥ್ಯದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಜಿಎಸ್‌ಟಿ ಜಾರಿ ನಂತರ ಇದು ದ್ವಿಗುಣಗೊಳ್ಳುತ್ತಿದೆ. ಹೀಗಾಗಿ ಆಟೋ ಉತ್ಪಾದಕರು ವಿವಿಧ ನಮೂನೆ ಸೆಡಾನ್, ಹ್ಯಾಚ್‌ಬ್ಯಾಕ್, ಎಸ್‌ಯುವಿ ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಪ್ರಮುಖ ಕಾರುಗಳ ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ.

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ರೆನಾಲ್ಟ್ ಕ್ಯಾಪ್ಚರ್

ದೇಶದಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ಆಟೋಮೋಟಿವ್‌ ಬ್ರ್ಯಾಂಡ್‌ಗಳಲ್ಲೊಂದಾದ ರೆನಾಲ್ಟ್ ಇಂಡಿಯಾ ಸಂಸ್ಥೆಯು ಪ್ರೀಮಿಯಂ ಎಸ್‌ಯುವಿ ಸರಣಿಯಲ್ಲಿ "ರೆನೋ ಕ್ಯಾಪ್ಚರ್‌' ಕಾರನ್ನು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಈಗಾಗಲೇ ಹೊಸ ಕಾರು ಖರೀದಿಗಾಗಿ ಮುಂಗಡ ಕಾಯ್ದಿರಿಸುವಿಕೆ ಪ್ರಕ್ರಿಯೆ ಕೂಡಾ ಆರಂಭವಾಗಿದೆ.

Recommended Video

[Kannada] Mahindra KUV 100 NXT Launched In India - DriveSpark
ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಆಲ್ ವಿಲ್ಹ್ ಡ್ರೈವ್ ಮಾಡುವಂತಹ ಸೌಲಭ್ಯ ಪಡೆದುಕೊಂಡಿರುವ ಮೊಟ್ಟ ಮೊದಲ ಕ್ಯಾಪ್ಚರ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜುಗೊಂಡಿರುವ ರೆನಾಲ್ಟ್ ಸಂಸ್ಥೆಯು ಹೊಸ ಕಾರಿನ ಮೂಲಕ ಮತ್ತೊಂದು ದಾಖಲೆ ನಿರ್ಮಾಣದ ತವಕದಲ್ಲಿದೆ.

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಪ್ರಸ್ತುತ ಕ್ಯಾಪ್ಚರ್ ಎಂಜಿನ್ ಮಾದರಿಯೂ ಭಾರತದಲ್ಲಿ ಡಸ್ಟರ್ ಕಾರಿಗಿಂತ ಒಂದು ಮಟ್ಟದಲ್ಲಿ ಹೆಚ್ಚು ಲೈನ್ ಅಪ್ ಹೊಂದಿರುವ ಕಾರು ಇದಾಗಿರಲಿದ್ದು, 1.5-ಲೀಟರ್ ಹೆಚ್4ಕೆಎಲ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡಿಸಿಐ ಡೀಸೆಲ್ ಎಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಬಿಡುಗಡೆಯ ದಿನಾಂಕ- ನವೆಂಬರ್ 6

ಬೆಲೆ (ಅಂದಾಜು) - ರೂ.10 ರಿಂದ ರೂ.14 ಲಕ್ಷ

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್

2016ರಲ್ಲಿ ಲಾಸ್ ಏಂಜಲೀಸ್‌ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಆವೃತ್ತಿಯು ಇದೀಗ ಗ್ರಾಹಕರ ಕೈ ಸೇರುತ್ತಿದೆ.

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಆವೃತ್ತಿಯು, ಸಿಂಗಲ್ ಪೀಸ್ ಹೆಕ್ಸ್‌ಗೊನಲ್ ಫ್ರಂಟ್ ಗ್ರಿಲ್ ಪಡೆದುಕೊಂಡಿರುವುದು ಹೊಸ ಕಾರಿನ ಅಂದವನ್ನು ಹೆಚ್ಚಿಸಿದೆ.

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಲಭ್ಯವಿರಲಿರುವ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಮತ್ತು ಪೆಟ್ರೋಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿವೆ.

ಬಿಡುಗಡೆ ದಿನಾಂಕ- ನವೆಂಬರ್ 8

ಬೆಲೆ (ಅಂದಾಜು)- ರೂ. 7 ಲಕ್ಷದಿಂದ ರೂ. 9.5 ಲಕ್ಷ

ಓದಿರಿ-ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಸೆಲೆರಿಯೊ ಹ್ಯಾಚ್‌ಬ್ಯಾಕ್ ಆವೃತ್ತಿಗಳು ಸಾಕಷ್ಟು ಜನಪ್ರಿಯತೆ ಹೊಂದಿದ್ದು, ಈ ಹಿನ್ನೆಲೆ ಪ್ರಸಕ್ತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸುಧಾರಿತ ಮಾದರಿಯನ್ನು ಪರಿಚಯಿಸಲು ಮುಂದಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಸೆಲೆರಿಯೊ ಎಕ್ಸ್ ಆವೃತ್ತಿಯನ್ನು ಪರಿಚಯಿಸುತ್ತಿದೆ.

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಪ್ರಸ್ತುತ ಮಾರುತಿ ಸುಜುಕಿ ಟಾಟಾ ಟಿಯಾಗೊ ಕಾರಿನಿಂದಲೇ ಸೆಲೆರಿಯೊ ಕಾರುಗಳು ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಈ ಕಾರಣದಿಂದಾಗಿ ಸೆಲೆರಿಯೊ ಕಾರನ್ನು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಹೀಗಾಗಿ ಸೆಲೆರಿಯೊ ಎಕ್ಸ್ ಕಾರು 1-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 90-ಎನ್‌ಎಂ ಟಾರ್ಕ್ ಹಾಗೂ 67-ಬಿಎಚ್‌ಪಿ ಉತ್ಪಾದನಾ ಶಕ್ತಿಯೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್ ಹೊಂದಿರಲಿದೆ.

ಬಿಡುಗಡೆಯ ದಿನಾಂಕ- ನವೆಂಬರ್ ಕೊನೆಯ ವಾರ

ಬೆಲೆ (ಅಂದಾಜು)- ರೂ. 4.5 ಲಕ್ಷದಿಂದ ರೂ.5.5 ಲಕ್ಷ

ಓದಿರಿ- 660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಲ್ಯಾಂಡ್ ರೋವರ್ ಡಿಸ್ಕವರಿ

ಬ್ರಿಟಿಷ್ ಕಾರು ಉತ್ಪಾದಾನಾ ಸಂಸ್ಥೆಯಾಗಿರುವ ಲ್ಯಾಂಡ್ ರೋವರ್ ಸಂಸ್ಥೆಯು 5ನೇ ಜನರೇಷನ್ ಡಿಸ್ಕವರಿ ಕಾರು ಮಾದರಿಯನ್ನು ಪರಿಚಯಿಸುತ್ತಿದ್ದು, ಅಂತ್ಯಂತ ಸುಧಾರಿತ ಮಾದರಿಯ ಅಲ್ಯುಮಿನಿಯಂ ಪ್ರೇರಿತ ಚಾರ್ಸಿ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಈ ಮೂಲಕ 3.0-ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಟರ್ಬೋ ಎಂಜಿನ್ ಹೊಂದಲಿರುವ ಡಿಸ್ಕವರಿ ಹೊಸ ಆವೃತ್ತಿಯು 255-ಬಿಎಚ್‌ಪಿ ಅಥವಾ 335-ಬಿಎಚ್‌ಪಿ ಉತ್ಪಾದನಾ ಶಕ್ತಿಯೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಳ್ಳಲಿದೆ.

ಬಿಡುಗಡೆಯ ದಿನಾಂಕ- ನವೆಂಬರ್ 28

ಆರಂಭಿಕ ಕಾರಿನ ಬೆಲೆ- 71.38 ಲಕ್ಷ

ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಎಸ್‌ಯುವಿ ಕಾರು ಖರೀದಿಗೆ ಗ್ರಾಹಕರು ವಿಶೇಷ ಆಸಕ್ತಿ ತೊರುತ್ತಿರುವುದು ವಿಶೇಷ ಎನ್ನಬಹುದು.

Trending On DriveSpark Kannada:

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

More from DriveSpark

Article Published On: Saturday, October 28, 2017, 14:22 [IST]
English summary
New Car Launches In November 2017: Launch Date, Specifications, Images And Expected Price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+