660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಟಾಪ್ 10 ಕಾರು ಮಾರಾಟದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದು, ಇದೀಗ ವಿನೂತನ ಮಾದರಿಯ ನ್ಯೂ ಜನರೇಷನ್ ಆಲ್ಟೋ ಪರಿಚಯಿಸಲು ಮುಂದಾಗಿದೆ.

By Praveen

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಟಾಪ್ 10 ಕಾರು ಮಾರಾಟದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದು, ಇದೀಗ ವಿನೂತನ ಮಾದರಿಯ ನ್ಯೂ ಜನರೇಷನ್ ಆಲ್ಟೋ ಪರಿಚಯಿಸಲು ಮುಂದಾಗಿದೆ.

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ಕಳೆದ 2 ದಶಕಗಳ ಅವಧಿಯಲ್ಲಿ ವಿವಿಧ ಮಾದರಿಯ ಕಾರು ಮಾದರಿಗಳನ್ನು ಪರಿಚಯಿಸುತ್ತಾ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಸಣ್ಣ ಕಾರು ಮಾರಾಟ ವಿಭಾಗಕ್ಕೂ ಲಗ್ಗೆಯಿಡುತ್ತಿದ್ದು, 660 ಸಿಸಿ ಸಾಮರ್ಥ್ಯದ ಆಲ್ಟೋ ಮಾದರಿಯನ್ನು ಬಿಡುಗಡೆ ಮಾಡುವ ತವಕದಲ್ಲಿದೆ.

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ವರದಿಗಳ ಪ್ರಕಾರ ನ್ಯೂ ಜನರೇಷನ್ ಆಲ್ಟೋ ಮಾದರಿಯು ಈಗಾಗಲೇ ಜಪಾನ್ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿರುವ ಮಾದರಿಯಾಗಿದ್ದು, ಅದೇ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೂ ಪರಿಚಯಿಸುವ ಇರಾದೆಯನ್ನು ಮಾರುತಿ ಸುಜುಕಿ ವ್ಯಕ್ತಪಡಿಸಿದೆ.

Recommended Video

Toyota Innova Crysta India First Look: Specs, Features - Auto Expo 2016 | DriveSpark
660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಆಲ್ಟೋ 800 ಮಾದರಿಯಲ್ಲೇ ಎಲ್ಲಾ ಸುಧಾರಿತ ಸೌಲಭ್ಯಗಳನ್ನು 660 ಸಿಸಿ ಆವೃತ್ತಿಯಲ್ಲೂ ಪರಿಚಯಿಸುವ ನೀರಿಕ್ಷೆಯಿದ್ದು, ಸ್ಪೋರ್ಟ್ ಲುಕ್ ನೀಡಲಾಗುತ್ತಿದೆ.

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ಎಂಜಿನ್ ಸಾಮರ್ಥ್ಯ

ಈ ಮೇಲೆ ಹೇಳಿದ ಹಾಗೆ ಹೊಸ ಕಾರು 660 ಸಿಸಿ ಎಂಜಿನ್ ಹೊಂದಿದ್ದು, 51-ಬಿಎಚ್‌ಪಿ ಮತ್ತು 63-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಜೊತೆಗೆ ಪ್ರಸ್ತುತ ಆಲ್ಟೋ 800 ಮಾದರಿಗಿಂತಲೂ 100 ಕೆಜಿ ಕಡಿಮೆ ತೂಕವನ್ನು ಹೊಂದಿರಲಿದೆ ಎನ್ನಲಾಗಿದೆ.

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ಬೆಲೆ

ಹೊಸ ಕಾರಿನ ಕುರಿತು ಅಧಿಕೃತ ಮಾಹಿತಿ ಇಲ್ಲವಾದರೂ ಅಂದಾಜು ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.3 ಲಕ್ಷದಿಂದ 4.2 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದ್ದು, ಬಿಡುಗಡೆ ನಂತರವಷ್ಟೇ ನಿಖರ ಮಾಹಿತಿ ಲಭ್ಯವಾಗಲಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ಯಾವಾಗ ಬಿಡುಗಡೆ?

ಮಾರುತಿ ಸುಜುಕಿ ಹೇಳಿಕೆ ಪ್ರಕಾರ 2018ರ ಮೇ ಅವಧಿಗೆ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಆಲ್ಟೋ ಹೊಸ ಕಾರುಗಳು ಲಭ್ಯವಿರಲಿವೆ ಎಂದಿದೆ.

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ಮೈಲೇಜ್

ಎಂಜಿನ್ ಸಾಮರ್ಥ್ಯ ಕಡಿಮೆ ಹಿನ್ನೆಲೆ ಮೈಲೇಜ್ ವ್ಯಾಪ್ತಿ ಹೆಚ್ಚಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ಗೆ ಬರೋಬ್ಬರಿ 37 ಕಿಮಿ ಮೈಲೇಜ್ ಒದಗಿಸಲಿವೆ ಎಂಬ ಮಾಹಿತಿ ಇದೆ.

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ವಿನ್ಯಾಸಗಳು

ಆಲ್ಟೋ ಹೊಸ ಕಾರಿನ ವಿನ್ಯಾಸಗಳು ಅಂತರ್‌ರಾಷ್ಟ್ರೀಯ ಗುಣಮಟ್ಟ ಹೊಂದಿದ್ದು, ಅಡ್ವಾನ್ಸ್ ಫ್ರಂಟ್ ಗ್ರಿಲ್, ಸ್ಪೋರ್ಟ್ ಲುಕ್, ಹೆಡ್ ಲ್ಯಾಂಪ್ ಡಿಸೈನ್ ಸೇರಿದಂತೆ ಸುಧಾರಿತ ಒಳ ಮತ್ತು ಹೊರ ವಿನ್ಯಾಸಗಳನ್ನು ಹೊಂದಿದೆ.

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿನ ಎಲ್ಲ ಕಾರು ವಿಭಾಗದಲ್ಲೂ ತನ್ನದೇ ಪ್ರಭುತ್ವ ಸಾಧಿಸುತ್ತಿರುವ ಮಾರುತಿ ಸುಜುಕಿಯು ಇದೀಗ ಆಲ್ಟೋ ಹೊಸ ಕಾರು ಪರಿಚಯಿಸುವ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದೆ.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

Most Read Articles

Kannada
English summary
Read in Kannada about Next-Gen Maruti Alto To Launch With a 660cc Engine.
Story first published: Friday, October 27, 2017, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X