'ಬ್ಲೈಂಡ್ ಸ್ಪಾಟ್' ಕನ್ನಡಿಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು?

ಬ್ಲೈಂಡ್ ಸ್ಪಾಟ್ ಕನ್ನಡಿಗಳ ಬಳಕೆ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

By Praveen

ಇತ್ತೀಚಿಗೆ ಪ್ರತಿ ಕಾರು ಮಾದರಿಯಲ್ಲೂ ಬ್ಲೈಂಡ್ ಸ್ಪಾಟ್ ಕನ್ನಡಿಗಳ ಬಳಕೆ ಹೆಚ್ಚುತ್ತಿದ್ದು, ಇದರ ಬಳಕೆ ತಪ್ಪು, ಸರಿ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆ ಓದುಗರ ಮಾಹಿತಿಗಾಗಿ ಈ ಕುರಿತು ಚರ್ಚಿಸಲಾಗಿದ್ದು, ಬ್ಲೈಂಡ್ ಸ್ಪಾಟ್ ಕನ್ನಡಿಗಳ ಬಳಕೆ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

'ಬ್ಲೈಂಡ್ ಸ್ಪಾಟ್' ಕನ್ನಡಿಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು?

ಸಾಮಾನ್ಯವಾಗಿ ಬ್ಲೈಂಡ್ ಸ್ಪಾಟ್ ಕನ್ನಡಿಗಳನ್ನು 'ಕನ್ವೆಕ್ಸ್ ಮಿರರ್' ಅಥವಾ 'ಫಿಶ್ ಐ' ಗಳೆಂದು ಸಂಭೋದಿಸಲಾಗುತ್ತದೆ. ಕಾರಿನ ಹೊರಗಿನ ಕನ್ನಡಿಯೊಳಗೆ ಆಳವಡಿಸಲಾಗುವ ಇಂತಹ ಕನ್ವೆಕ್ಸ್ ಮಿರರ್‌ಗಳು ಚಾಲನೆ ವೇಳೆ ಸಂಕುಚಿತ ನೋಟವನ್ನು ಪ್ರದಾನ ಮಾಡಲಿದ್ದು, ಹಿಂಬದಿಯ ವಿಶಾಲವಾದ ಪ್ರದೇಶವು ಕನ್ನಡಿಯಲ್ಲಿ ಚೊಕ್ಕದಾಗಿ ಗೋಚರಿಸಲಿದೆ.

'ಬ್ಲೈಂಡ್ ಸ್ಪಾಟ್' ಕನ್ನಡಿಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು?

ಇದರ ಪರಿಣಾಮ ಬ್ಲೈಂಡ್ ಸ್ಪಾಟ್ ಸಾಧ್ಯತೆಯನ್ನು ಕಡಿಮೆಯಾಗಲಿದ್ದು, ಮತ್ತಷ್ಟು ದೂರದ ಪ್ರದೇಶಕ್ಕೆ ಗೋಚರತೆಯು ಲಭ್ಯವಾಗಲಿದೆ. ಹೊರಗಿನ ರಿಯರ್ ವ್ಯೂ ಮಿರರ್ ನಲ್ಲಿ ಆಳವಡಿಸಲಾಗುವ ಕನ್ವೆಕ್ಸ್ ಮಿರರ್‌ಗಳು ವೃತ್ತಾಕಾರವನ್ನು ಹೊಂದಿರುತ್ತದೆ. ಆದರೆ ಇಂತಹ ಬ್ಲೈಂಡ್ ಸ್ಪಾಟ್ ಮಿರರ್ ಗಳು ಸುರಕ್ಷತೆಯನ್ನು ಒದಗಿಸುವ ಬದಲು ಕೆಲವೊಂದು ಬಾರಿ ಹೆಚ್ಚಿನ ಅಸುರಕ್ಷತೆಗೆ ಕಾರಣವಾಗುತ್ತದೆ.

'ಬ್ಲೈಂಡ್ ಸ್ಪಾಟ್' ಕನ್ನಡಿಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು?

ಗೊಂದಲ ಸೃಷ್ಟಿ

ಮೊದ ಮೊದಲು ಕನ್ವೆಕ್ಸ್ ಮಿರರ್ ಬಳಕೆ ಮಾಡುವ ಚಾಲಕರಲ್ಲಿ ಹೆಚ್ಚಿನ ಗೊಂದಲತೆ ಸೃಷ್ಟಿ ಮಾಡುವ ಸಾಧ್ಯತೆಯಿದೆ. ಯಾಕೆಂದರೆ ಹಿಂಬದಿಯ ದೃಶ್ಯಗಳು ಎರಡೆರಡು ಕಡೆ ಗಾಜಿನಲ್ಲಿ ಕಾಣಿಸುವುದರಿಂದ ಚಾಲಕರು ಗಲಿಬಿಲಿಗೊಳಗಾಗುವ ಸಾಧ್ಯತೆಯಿದೆ. ಹಾಗಾಗಿ ಇದರ ನಿಖರ ಬಳಕೆಗಾಗಿ ಅಭ್ಯಾಸದ ಅಗತ್ಯವೂ ಇರುತ್ತದೆ.

'ಬ್ಲೈಂಡ್ ಸ್ಪಾಟ್' ಕನ್ನಡಿಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು?

ಕನ್ನಡಿಯ ಅಂಚಿನಲ್ಲಿ ಪ್ರತಿಬಿಂಬ

ಕನ್ನಡಿಯ ಅಂಚಿನಲ್ಲಿ ಪ್ರತಿಬಿಂಬ ಲಗ್ಗತ್ತಿಸಿರುವುದರಿಂದ ಅದರತ್ತ ಚಾಲಕರು ದಿಟ್ಟಿಸಿ ನೋಡುವ ಅವಶ್ಯಕತೆಯಿರುತ್ತದೆ. ಇದು ಚಾಲನೆ ವೇಳೆ ಏಕಾಗ್ರತೆಗೆ ಭಂಗವನ್ನುಂಟು ಮಾಡುವ ಭೀತಿಯಿದೆ.

'ಬ್ಲೈಂಡ್ ಸ್ಪಾಟ್' ಕನ್ನಡಿಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು?

ಬೆಳಕಿನಿಂದಲೇ ಕುರುಡು

ಆಧುನಿಕ ಸೈಡ್ ವ್ಯೂ ಮಿರರ್ ಗಳಲ್ಲಿ ಬೆಳಕು ಪ್ರತಿಫಲಿಸುವುದನ್ನು ತಡೆಯುವ ಶಕ್ತಿಯಿರುತ್ತದೆ. ಇನ್ನೊಂದೆಡೆ ಬ್ಲೈಂಡ್ ಸ್ಪಾಟ್ ಮಿರರ್ ಗಳಲ್ಲಿ, ಪ್ರಜ್ವಲಿಸುವ ಬೆಳಕನ್ನು ಹೀರಿಕೊಳ್ಳುವ ವ್ಯವಸ್ಥೆಯಿರುವುದಿಲ್ಲ. ಇದರಿಂದ ಚಾಲಕರಿಗೆ ನೆರವಾಗುವ ಬದಲು ರಾತ್ರಿ ಪಯಣಗಳಲ್ಲಿ ಹೆಚ್ಚಿನ ಸಮಸ್ಯೆ ಸೃಷ್ಟಿ ಮಾಡಲಿದೆ.

'ಬ್ಲೈಂಡ್ ಸ್ಪಾಟ್' ಕನ್ನಡಿಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು?

ಅಂಟಿಸುವುದು ಹಾನಿಕಾರಕ, ತೆಗೆಯುವುದು ಕಷ್ಟ

ಔಟ್ ಸೈಡ್ ರಿಯರ್ ವ್ಯೂ ಮಿರರ್ ಮೇಲೆ ಬ್ಲೈಂಡ್ ಸ್ಪಾಟ್ ಕನ್ನಡಿಗಳನ್ನು ಅಂಟಿಸುವುದರಿಂದ ನೈಜ ಗಾಜಿನ ವಿನ್ಯಾಸಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಮತ್ತೆ ಇನ್ನು ಬೇಡವೆನಿಸಿದಾಗ ಇದನ್ನು ತೆಗೆದು ಹಾಕುವುದು ಮತ್ತಷ್ಟು ಕಷ್ಟಕರವಾಗಲಿದೆ.

'ಬ್ಲೈಂಡ್ ಸ್ಪಾಟ್' ಕನ್ನಡಿಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು?

ಆಕರ್ಷಕವಲ್ಲದ ನೋಟ

ಇದು ಅಷ್ಟೊಂದು ದೊಡ್ಡ ಸಮಸ್ಯೆಯಿಲ್ಲದಿದ್ದರೂ ಕಾರಿನ ನೈಜ ಸೌಂದರ್ಯವನ್ನು ಕೆಡಿಸುತ್ತದೆ ಎಂಬುದು ನಮ್ಮ ಅಭಿಮತವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳೇನು? ಕಾಮೆಂಟ್ ಮಾಡಿ.

More from DriveSpark

Article Published On: Monday, October 2, 2017, 13:00 [IST]
English summary
Read in Kannada; Let's take a look at why you should think twice about installing these blind spot mirrors on your car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+