ಹಳೆ ಸ್ವಿಫ್ಟ್ ಖರೀದಿಗೆ ವೇಟಿಂಗ್ ಅವಧಿಯೇ ಇಲ್ಲ!!

ಆದರೆ ಸ್ವಿಫ್ಟ್ ಉತ್ಪಾದನಾ ಘಟಕದಲ್ಲಿ ಎಲ್ಲವೂ ಸರಿಯಿರಲಿಲ್ಲ. ಅಲ್ಲಿನ ನೌಕರರು ಪ್ರತಿಭಟನೆ, ಗಲಭೆಯಲ್ಲಿ ನಿರತರಾದರು. ತತ್ಪರಿಣಾಮವಾಗಿ ಸ್ವಿಫ್ಟ್ ಉತ್ಪಾದನೆ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು.
ಇದೀಗ ಹೊಸ ಸ್ವಿಫ್ಟ್ ವೇಟಿಂಗ್ ಅವಧಿ ಆರರಿಂದ ಎಂಟು ತಿಂಗಳವರೆಗಿದೆ. ಆದರೆ ಗ್ರಾಹಕರು ಅಷ್ಟು ದಿನ ಕಾಯೋಕ್ಕೆ ಸಿದ್ಧರಿದ್ದಾರ? ಅಥವಾ ಅವರಿಗೆ ಯಾವುದಾದರೂ ಪರ್ಯಾಯ ಮಾರ್ಗಗಳನ್ನು ಸೂಚಿಸುತ್ತೀರಾ? ಎಂದು ಬೆಂಗಳೂರು ಡೀಲರ್ ಬಳಿ ಪ್ರಶ್ನಿಸಲಾಯಿತು. ಆದರೆ ಅವರು ಹೆಸರು ಬಹಿರಂಗಪಡಿಸಲು ಇಚ್ಚಿಸಲಿಲ್ಲ.
"ಗ್ರಾಹಕರಿಗೆ ನಾವು ದೀರ್ಘ ವೇಟಿಂಗ್ ಪಿರಿಯೆಡ್ ಬಗ್ಗೆ ವಿವರಿಸಿ ಹೇಳುತ್ತೇವೆ. ಅವರಿಗೆ ಅಷ್ಟು ತಿಂಗಳು ಕಾಯೋದು ಕಷ್ಟ ಅನಿಸಿದರೆ ಹಳೆಯ ಸ್ವಿಫ್ಟ್ ಖರೀದಿಸುವಂತೆ ಸೂಚಿಸುತ್ತೇವೆ. ಯಾಕೆಂದರೆ ಕ್ಷಮತೆಯಲ್ಲಿ ಇವೆರಡು ಕಾರುಗಳ ನಡುವೆ ಮಹತ್ವದ ವ್ಯತ್ಯಾಸವಿಲ್ಲ" ಎನ್ನುತ್ತಾರೆ.
"ಕೇವಲ ವಿನ್ಯಾಸದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಆದರೆ ಹಳೆಯ ಎಂಜಿನ್ ಹೊಸದರಲ್ಲೂ ಇದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಹಳೆಯ ಸ್ವಿಫ್ಟಿಗೆ ಒಂದು ದಿನದ ವೇಟಿಂಗ್ ಅವಧಿ ಕೂಡ ಇಲ್ಲ. ಬಹು ಮುಖ್ಯವಾಗಿ ಹೊಸ ಸ್ವಿಫ್ಟ್ ಗೆ ಹೋಲಿಸಿದರೆ ಹೊಸ ಸ್ವಿಫ್ಟ್ ದುಬಾರಿ" ಎಂದು ಅವರು ಅಭಿಪ್ರಾಯಪಡುತ್ತಾರೆ.
ಆದರೆ ಜನರಿಗೆ ಹಳೆಯ ಸ್ವಿಫ್ಟ್ ಇಷ್ಟವಾಗುತ್ತ? ಅವರು ಬೇರೆ ಕಂಪನಿಯ ಕಾರುಗಳತ್ತ ಮರಳುವುದಿಲ್ಲವೇ? "ಮಾರುತಿ ಗ್ರಾಹಕರು ಈ ಬ್ರಾಂಡ್ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಬೇಕಾದರೆ ಎಂಟತ್ತು ತಿಂಗಳು ಕಾಯಬಲ್ಲರು. ಅಥವಾ ಹಳೆಯ ಸ್ವಿಫ್ಟ್ ಖರೀದಿಸಬಲ್ಲರು" ಎಂದು ಅವರು ದೃಢವಾಗಿ ಹೇಳುತ್ತಾರೆ.
"ಆದರೆ ಗ್ರಾಹಕರು ಬೇರೆ ಬ್ರಾಂಡಿಗೆ ಹೋಗೋ ಸಾಧ್ಯತೆಯೇ ಇಲ್ಲ. ಬ್ರಾಂಡ್ ಮೇಲಿನ ನಂಬಿಕೆಯೇ ಇದಕ್ಕೆ ಕಾರಣ. ಜೊತೆಗೆ ಮಾರುತಿ ಕಾರುಗಳು ಮರುಮಾರಾಟದ ಮೌಲ್ಯವನ್ನೂ ಹೊಂದಿವೆ" ಎಂದು ಡೀಲರ್ ಅಭಿಪ್ರಾಯಪಡುತ್ತಾರೆ.
"ಮಾರುತಿ ಸುಜುಕಿ ಕಾರು ಮೇಟೆಂನ್ಸ್ ಕೂಡ ಅಗ್ಗವಾಗಿದೆ. ಬೇರೆ ಕಂಪನಿಯ ಕಾರು ಖರೀದಿಸುವುದಕ್ಕಿಂತ ಹಳೆಯ ಸ್ವಿಫ್ಟ್ ಖರೀದಿಸುವುದು ಉತ್ತಮ. ಆದರೆ ನೌಕರರ ಪ್ರತಿಭಟನೆ ಸ್ವಿಫ್ಟ್ ಮಾರಾಟಕ್ಕೆ ತುಸು ಹೊಡೆತ ನೀಡಿದೆ" ಅನ್ನೋದನ್ನು ಅವರು ಒಪ್ಪುತ್ತಾರೆ. (ದಟ್ಸ್ ಕನ್ನಡ ವಾರ್ತೆ)


Click it and Unblock the Notifications








