ನಿಸ್ಸಾನ್ ಡೀಸೆಲ್ ಸನ್ನಿ ಸೇಡನ್ ಶೀಘ್ರದಲ್ಲಿ ಆಗಮನ

ಅಲ್ಲಿ ಬಿಡುಗಡೆಯಾಗಲಿರುವ ಡೀಸೆಲ್ ಮಾದರಿ ಸನ್ನಿ ಕಾರಿನ ವಿಷಯ ಜಗಜ್ಜಾಹೀರಾಗಿದೆ. ನಿಸ್ಸಾನ್ ಇಂಡಿಯಾ ಕಂಪೆನಿ ಹೊಸ ಡೀಸೆಲ್ ಕಾರ್ ಸನ್ನಿ ಸೇಡನ್ ಅನ್ನು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಬಿಡುಗಡೆ ಮಾಡಲು ಯೋಜನೆ ಹಮ್ಮಿಕೊಂಡಿದೆ.
ಈಗಾಗಲೇ ಬಿಡುಗಡೆ ಆಗಿರುವ ಸನ್ನಿ ಕಾರಿಗೆ ರೆಗ್ಯಲರ್ ಆಗಿ ಬಳಕೆಮಾಡುತ್ತಿದ್ದ ಅದೇ ಮೈಕ್ರಾ ಉಪಯೋಗಿಸಲಾಗಿದೆ. ಬರಲಿರುವ ಸನ್ನಿ ಸೇಡನ್ ಕಾರ್ ಕೂಡ ಇದರಿಂದಲೇ ರೂಪತಾಳಲಿದೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಡೀಸೆಲ್ ಕಾರ್ ಸಾಕಷ್ಟು ಜನಪ್ರಿಯವಾಗುತ್ತಿದೆ. ಇದಕ್ಕೆ ನೇರವಾದ ಕಾರಣ ಪೆಟ್ರೋಲ್ ಬೆಲೆಯಲ್ಲಿ ಆಗುತ್ತಿರುವ ಹೆಚ್ಚಳ.
ಹಾಗಾಗಿ ಹೆಚ್ಚಿನ ಕಾರ್ ಕಂಪೆನಗಳು ಪೆಟ್ರೋಲ್ ಹಾಗೂ ಡೀಸೆಲ್, ಎರಡೂ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲು ಬಯಸಿವೆ. ಇದಕ್ಕೆ ತಾಜಾ ಉದಾಹರಣೆ ಇತ್ತೀಚಿಗೆ ಆಗಸ್ಟ್ 19 ರಂದು ಬಿಡುಗಡೆಯಾದ ಮಾರುತಿ ಸುಝುಕಿಯ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳು. ವೋಕ್ಸ್ ವ್ಯಾಗನ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೇವಲ ಡೀಸೆಲ್ ಕಾರ್ ಜೆಟ್ಟಾ ಮತ್ತು ಪ್ಯಾಸಂಟ್ ಬಿಡುಗಡೆ ಮಾಡಿ, ಭವಿಷ್ಯದಲ್ಲಿ ಡೀಸೆಲ್ ಕಾರುಗಳ ಬರುವಿಕೆಯನ್ನು ಖಾತ್ರಿ ಪಡಿಸಿದೆ.
ನಿಸ್ಸಾನ್ ಕಂಪೆನಿಯ ಹೊಸ ಡೀಸೆಲ್ ಕಾರ್ ಸನ್ನಿ ಸೇಡನ್ ಹೊಂದಲು ನೀವು ಈ ವರ್ಷದ ಕೊನೆಯವರೆಗೆ ಮಾತ್ರ ಕಾಯಬೇಕು. ಬರುವ ವರ್ಷ ಪ್ರಾರಂಭದಲ್ಲಿ ಇದರ ಎಂಟ್ರಿಯಂತೂ ಗ್ಯಾರಂಟಿ!


Click it and Unblock the Notifications