ಈ ಕಾರಿಗೆ ಚಾಲಕ ಬೇಕಿಲ್ಲ: ಸ್ವಯಂಚಾಲಿತ ಕಾರು

ಚಾಲಕನ ಅಗತ್ಯವಿಲ್ಲದೇ ಸ್ವಯಂ ಚಾಲಿತವಾಗಿ ಚಲಿಸುವ ಕಾರೊಂದನ್ನು ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಬ್ರಿಟನಿನ ಫ್ರೀ ಯುನಿವರ್ಸಿಟಿ ಸಂಶೋಧಕರೂ ಇದರಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ಕಾರು ಯಾವುದೇ ಟ್ರಾಫಿಕ್ ನಲ್ಲೂ ಚಲಿಸುತ್ತದೆ. ಎದುರಿಗೆ ಕಾರು, ಮನುಷ್ಯರು ಅಡ್ಡ ಬಂದರೂ ಗುರುತು ಹಿಡಿಯುತ್ತದೆ. ಇದನ್ನು ಭವಿಷ್ಯದ ಕಾರು ಎನ್ನಲಾಗಿದೆ.
ಸಂಶೋಧಕರು ಇದಕ್ಕಾಗಿ ಫೋಕ್ಸ್ ವ್ಯಾಗನ್ ಪಸ್ಸಾಟ್ ಕಾರನ್ನು ಬಳಸಿದ್ದಾರೆ. ಇದಕ್ಕೆ ಅಡ್ವಾನ್ಸ್ ಡ್ ಕಮ್ಯೂನಿಕೇಷನ್ ಮತ್ತು ನ್ಯಾವಿಗೇಷನ್ ತಂತ್ರಜ್ಞಾನಗಳನ್ನು ಅಳವಡಿಸಿದ್ದಾರೆ. ಅಂದ್ರೆ ಸ್ಯಾಟಲೈಟ್ ನ್ಯಾವಿಗೇಷನ್, ಲೇಸರ್ ಸ್ಕ್ಯಾನರ್, ಕ್ಯಾಮರಾ ಮತ್ತು ಕಂಪ್ಯೂಟರ್ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಳಸಿಸಿದ್ದಾರೆ. ಕ್ಯಾಮರಾ ಮತ್ತು ಸ್ಕ್ಯಾನರ್ ಗಳನ್ನು ಕಾರಿನ ಎದುರು ಮತ್ತು ಹಿಂದಿನ ಬಂಪರಿಗೆ ಅಳವಡಿಸಲಾಗಿದೆ.
ವಿಜ್ಞಾನಿಗಳು ಈ ಕಾರು ಅಭಿವೃದ್ಧಿಪಡಿಸಲು ಸತತ ನಾಲ್ಕು ವರ್ಷಗಳ ಶ್ರಮ ಪಟ್ಟಿದ್ದಾರಂತೆ. ಇದೀಗ ಪ್ರಾಯೋಗಿಕವಾಗಿ ಈ ಕಾರು ರಸ್ತೆಯಲ್ಲಿ ಚಲಿಸುತ್ತಿದೆಯಂತೆ. ಚಾಲಕನಿಲ್ಲದ ಕಾರು ಕಲ್ಪನೆ ಇದು ಮೊದಲಲ್ಲ. ಇದಕ್ಕೂ ಮುನ್ನ ಟೊಯೊಟಾ ಪ್ರಿಯೂಸ್ ಕಾರಿಗೆ ಗೂಗಲ್ ಸ್ವಯಂಚಾಲಿತ ತಂತ್ರಜ್ಞಾನ ಅಳವಡಿಸಿ ಯಶಸ್ವಿಯಾಗಿತ್ತು.


Click it and Unblock the Notifications








