ನ್ಯಾನೊ ಆಯ್ತು ಈಗ ಸ್ವಿಫ್ಟ್ ಡಿಜೈರ್ ಬೆಂಕಿ

ಈ ಬೆಂಕಿ ಆಕಸ್ಮಿಕ ಜರುಗಿದ್ದು ಮುಂಬೈನ ವಿಕ್ರೊಲಿ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ. "ಎಂಜಿನ್ ನಲ್ಲಿ ಅತಿಯಾದ ಬಿಸಿ ಕಾಣಿಸಿಕೊಂಡ ತಕ್ಷಣ ಕಾರು ನಿಲ್ಲಿಸಿದೆ. ತಕ್ಷಣ ಬೆಂಕಿ ಕಾಣಿಸಿಕೊಂಡಿತ್ತು. ಕಾರು ಪೂರ್ತಿ ಬೆಂಕಿಗಾಹುತಿಯಾಯಿತು" ಎಂದು ಚಾಲಕ ಹೇಳಿದ್ದಾರೆ.
2007ರಿಂದಲೂ ಸ್ವಿಫ್ಟ್ ಡಿಜೈರ್ ದೇಶದ ರಸ್ತೆಯಲ್ಲಿ ಜನಪ್ರಿಯ ಕಾರಾಗಿದೆ. ಇಲ್ಲಿವರೆಗೆ ಯಾವುದೇ ಕಾರಿನಲ್ಲೂ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿರಲಿಲ್ಲ. "ಇತ್ತೀಚೆಗೆ ಮಾನೆಸರ್ ಘಟಕದಲ್ಲಿ ನೌಕರರ ಗಲಾಟೆ ಜೋರಾಗಿದೆ. ಕಂಪನಿಗೆ ಕೆಟ್ಟ ಹೆಸರು ತರಲು ಅಲ್ಲಿನ ಕೆಲಸಗಾರರು ಏನೋ ಕಿತಾಪತಿ ಮಾಡಿರಬೇಕು" ಎಂದು ಟೀಮ್ ಬಿಎಚ್ ಪಿ ಸದಸ್ಯರೊಬ್ಬರು ಅಂದಾಜಿಸುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿಯಿಲ್ಲ.


Click it and Unblock the Notifications








