ಹಬ್ಬದ ಸಂಭ್ರಮಕ್ಕೆ ಅಗ್ಗದ ಐದು ಮೈಲೇಜ್ ಕಾರು
ಹಬ್ಬದ ಸಮಯದಲ್ಲಿ ದೇಶದಲ್ಲಿ ಕಾರು ಬೈಕು ಖರೀದಿ ಬಲು ಜೋರು. ಹಲವು ವರ್ಷಗಳಿಂದ ಜತನದಿಂದ ಕೂಡಿಟ್ಟ ದುಡ್ಡು ಅಥವಾ ಬ್ಯಾಂಕ್ ಸಾಲದ ನೆರವಿನಿಂದ ಹಬ್ಬದ ಸೀಸನಿನಲ್ಲಿ ಕಾರು ಅಥವಾ ಬೈಕು ಖರೀದಿಸುತ್ತಾರೆ. ಹಬ್ಬಕ್ಕೆ ಹೊಸ ಕಾರು ಪಡೆದು ಫ್ಯಾಮಿಲಿ ಸವಾರಿ ಮಾಡುತ್ತಾರೆ.
ಈ ವರ್ಷದ ದೀಪಾವಳಿ ಸಂಭ್ರಮದ ಪಟಾಕಿಯ ಸ್ಥಳದಲ್ಲಿ "ಪೆಟ್ರೋಲ್ ಬಾಂಬ್" ಭಯವಿದೆ. ಪೆಟ್ರೋಲ್ ದರವೇ ಬಾಂಬಿನಂತೆ ಜನರನ್ನು ಭೀತಿಗೊಳಿಸಿದೆ. ಹಾಗಂತ ಹಲವು ವರ್ಷಗಳಿಂದ ಕಾರೊಂದ ಖರೀದಿಸಬೇಕೆಂದು ಕನಸು ಕಾಣುತ್ತಿದ್ದವರು ಸುಮ್ಮನಿರುತ್ತಾರೆಯೇ? ಕಾರು ಖರೀದಿಸಿಯೇ ತೀರುತ್ತಾರೆ.
ಓಕೆ. ಈ ಹಬ್ಬಕ್ಕೆ ನೀವು ಕಾರು ಖರೀದಿಸುತ್ತೀರಿ ಅಂದಿಟ್ಟುಕೊಳ್ಳೋಣ. ಪೆಟ್ರೋಲ್ ದುಬಾರಿಯಾಗಿರುವ ಈ ಕಾಲದಲ್ಲಿ ಮೈಲೇಜ್ ಮರೆಯದವನೇ ಜಾಣ. ಭಾರತೀಯರು ಯಾವತ್ತಿಗೂ ಮೈಲೇಜ್ ಕಾರು ಬೈಕುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಇಲ್ಲಿನವರಿಗೆ ಶೋಕಿಗಿಂತ ಕಾರ್ಯಕ್ಷಮತೆ ಮುಖ್ಯ.
ಒಳ್ಳೆಯದು. ನಿಮಗೀಗ ಮೈಲೇಜ್ ಕಾರು ಬೇಕು. ಅದು ಕಡಿಮೆ ದರಕ್ಕೆ ಸಿಗಬೇಕು ಅಲ್ಲವೇ. ಇಲ್ಲಿ 5 ಮೈಲೇಜ್ ಕಾರುಗಳನ್ನು ನೀಡಲಾಗಿದೆ. ಇದು ಹೆಚ್ಚು ದಕ್ಷತೆಯ ಮತ್ತು ಕಡಿಮೆ ಬಜೆಟ್ ಕಾರು. ಎಲ್ಲಾ ಕಾರುಗಳು ನಿಮಗೆ ಇಷ್ಟವಾಗಬೇಕೆಂದಿಲ್ಲ. ಆದರೆ ನಿಮಗಿಷ್ಟವಾದ ಕಾರುಗಳು ಮುಂದಿನ ಪುಟದಲ್ಲಿವೆ ಅನ್ನೋದು ಸುಳ್ಳಲ್ಲ. ಅಡ್ವಾನ್ಸ್ ಆಗಿ ದೀಪಾವಳಿ ಹಬ್ಬದ ಶುಭಾಶಯಗಳು.


Click it and Unblock the Notifications
