ಡೀಸೆಲ್ ಕಾರು ಖರೀದಿಸಬೇಡಿ, ಯಾಕೆಂದರೆ...

ಮೊದಲನೆಯದಾಗಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ಆದರೆ ಯಾರು ಡೀಸೆಲ್ ಕಾರು ಖರೀದಿಸಬಹುದು, ಯಾರು ಖರೀದಿಸಬಾರದು ಅಂತ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಪೆಟ್ರೋಲ್ ದುಬಾರಿ ಅನ್ನೋ ಒಂದೇ ಕಾರಣಕ್ಕೆ ಡೀಸೆಲ್ ಕಾರು ಖರೀದಿಸಿದರೆ ನಷ್ಟ ಕಟ್ಟಿಟ್ಟ ಬುತ್ತಿ.
ಪೆಟ್ರೋಲ್ ಆವೃತ್ತಿಗಳಿಗೆ ಹೋಲಿಸಿದರೆ ಡೀಸೆಲ್ ಕಾರು ದರ ಸುಮಾರು 80 ಸಾವಿರ ರು. ದುಬಾರಿಯಿದೆ. ಇದಕ್ಕಿಂತ ಕಡಿಮೆಯೂ ಇರಬಹುದು. ಕೊಂಚ ಜಾಸ್ತಿಯೂ ಇರಬಹುದು.
ಕಾರು ಖರೀದಿದಾರರು ಹೆಚ್ಚು ಹಣ ನೀಡಲು ಸಿದ್ಧರಿರುತ್ತಾರೆ. ಅದಕ್ಕಾಗಿ ಅವರು ಕಾರು ಸಾಲ ಪಡೆದುಕೊಳ್ಳುತ್ತಾರೆ. ಡೀಸೆಲ್ ಕಾರು ಖರೀದಿಯಿಂದ ಇಎಂಐ ಪಾವತಿ ಕೂಡ ಹೆಚ್ಚಾಗುತ್ತದೆ. ಉದಾಹರಣೆಗೆ ಡೀಸೆಲ್ ಕಾರು ಖರೀದಿಗೆ ಒಂದು ಲಕ್ಷ ರುಪಾಯಿಗೆ 1 ಸಾವಿರ ರು. ಪಾವತಿಸುತ್ತೀರಿ. ಪೆಟ್ರೋಲ್ ಕಾರಿಗಿಂತ ಹೆಚ್ಚು ಇಎಂಐ ಪಾವತಿಸಬೇಕು.
ಹೆಚ್ಚು ಮೈಲೇಜ್ ಮತ್ತು ಡೀಸೆಲ್ ದರ ಕಡಿಮೆಯಿರುವುದರಿಂದ ಹೆಚ್ಚುವರಿ ವೆಚ್ಚ ದೊಡ್ಡ ಸಮಸ್ಯೆಯಲ್ಲವೆಂದು ಕಾರು ಖರೀದಿದಾರರು ಯೋಚಿಸುತ್ತಾರೆ.
ಮಾರುತಿ ಸುಜುಕಿ ಮತ್ತು ಟೊಯೊಟಾದಂತಹ ಕಂಪನಿಗಳು ಡೀಸೆಲ್ ಕಾರು ಯಾರಿಗೆ ಅಗತ್ಯ ಅನ್ನೋದರ ಕುರಿತು ಗ್ರಾಹಕರಿಗೆ ಸಾಕಷ್ಟು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿವೆ.
ಅಂದರೆ ಪ್ರತಿತಿಂಗಳು ಕನಿಷ್ಠ 2 ಸಾವಿರ ಕಿ.ಮೀ.ಯಾದರೂ ಕಾರು ಚಲಾಯಿಸದವರಿಗೆ ಡೀಸೆಲ್ ಕಾರು ವ್ಯರ್ಥ. ಹತ್ತಿರದ ಕಚೇರಿಗೆ ಹೋಗಲು, ತಿಂಗಳಿಗೊಮ್ಮೆ ಊರಿಗೆ ಹೋಗಲು ಮಾತ್ರ ಬಳಸುವಿರಾದರೆ ಡೀಸೆಲ್ ಕಾರು ಸೂಕ್ತ ಅಲ್ಲವೇ ಅಲ್ಲ.
ಹೆಚ್ಚಿನ ಕಂಪನಿಗಳು ಡೀಸೆಲ್ ಕಾರಿನ ಸರ್ವಿಸ್ ವೆಚ್ಚದ ಕುರಿತು ಗ್ರಾಹಕರಿಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಡೀಸೆಲ್ ಕಾರು ನಿರ್ವಹಣೆ ಯಾವತ್ತಿಗೂ ದುಬಾರಿ. ನಿಯಮಿತವಾಗಿ ಆಯಿಲ್ ಬದಲಾಯಿಸುತ್ತಿರಬೇಕು. ನಿಯಮಿತವಾಗಿ ಸರ್ವಿಸ್ ಮಾಡಿಸುತ್ತಲೇ ಇರಬೇಕು. ಆದರೆ ಪೆಟ್ರೋಲ್ ಕಾರುಗಳಿಗೆ ಇಷ್ಟೊಂದು ಮೇಟೆಂನ್ಸ್ ಅಗತ್ಯವೇ ಇಲ್ಲ.
ಪೆಟ್ರೋಲ್ ಉರಿಯುವುದಕ್ಕೂ ಡೀಸೆಲ್ ಉರಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಡೀಸೆಲ್ ಉರಿಯಲು ಹೆಚ್ಚು ಶ್ರಮ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಡೀಸೆಲ್ ಎಂಜಿನ್ ಬ್ಲಾಕ್ ಆಗೋ ಸಾಧ್ಯತೆ ಹೆಚ್ಚು. ಕೆಲವು ಸಮಯದ ನಂತರ ಡೀಸೆಲ್ ಎಂಜಿನ್ ಡ್ಯಾಮೆಜ್ ಆಗೋ ಸಾಧ್ಯತೆಯೂ ಇದೆ. ಪೆಟ್ರೋಲ್ ಸುಲಲಿತವಾಗಿ ಉರಿಯುತ್ತದೆ. ಇದರಿಂದ ಎಂಜಿನ್ ಗೆ ಅಪಾಯ ಕಡಿಮೆ.
ನೀವು ಸುದೀರ್ಘ ಸಮಯ ಕಾರನ್ನು ಇಟ್ಟುಕೊಳ್ಳಲು ಬಯಸುವಿರಾದರೆ ಪೆಟ್ರೋಲ್ ಎಂಜಿನ್ ಕಾರು ಸೂಕ್ತ. ಆದರೆ ಡೀಸೆಲ್ ತಂತ್ರಜ್ಞಾನ ಈಗ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಪೆಟ್ರೋಲ್ ಕಾರು ಎಂಜಿನ್ ಸರಿಸಮವಾಗಿ ಬೆಳೆದಿಲ್ಲ ಅನ್ನೋದು ನಿಜ. ದಿನಕ್ಕೆ 100-200 ಕಿಲೋಮೀಟರ್ ಪ್ರಯಾಣ ನಿಮಗೆ ಅನಿವಾರ್ಯವಾದರೆ ಡೀಸೆಲ್ ಕಾರು ಖರೀದಿಸಿ. ಇಲ್ಲವಾದರೆ ಡೀಸೆಲ್ ಕಾರು ವ್ಯರ್ಥ.
ಒಂದು ವಿಷಯ ತಿಳಿದುಕೊಳ್ಳಬೇಕು. ಡೀಸೆಲ್ ಕಾರಿನ ಮೆಕಾನಿಸಂ ಪೆಟ್ರೋಲ್ ಎಂಜಿನಿಗಿಂತ ತುಂಬಾ ಭಿನ್ನ. ಅದು ಅತ್ಯಧಿಕ ಚಾಲನೆ ಮಾಡಿದರೆ ಮಾತ್ರ ಲಾಭದಾಯಕ.


Click it and Unblock the Notifications








