ಬೆಂಗಳೂರು ಸುರೇಶ್ ಬಾಬು ಗಿನ್ನಿಸ್ ಸ್ಟೋರಿ

ಇವರು ಪ್ರವಾಸ ಮಾಡುವಾಗ ಓಡೋಮೀಟರ್ ನಿಖರ ಸಮಯವನ್ನು ಪೊಲೀಸ್ ಸಿಬ್ಬಂದಿಗಳಲ್ಲಿ, ಬ್ಯಾಂಕ್ ಮ್ಯಾನೇಜರ್ ಗಳಲ್ಲಿ, ಪೆಟ್ರೋಲ್ ಪಂಪ್ ಅಧಿಕಾರಿಗಳಲ್ಲಿ ಸಹಿಹಾಕಿಸಿದರು. ಒಟ್ಟಾರೆ ಇವರ ಪ್ರಯಾಣ ಸಂಪೂರ್ಣ ಪಾರದರ್ಶಕವಾಗಿದ್ದು ಸಂಪೂರ್ಣ ಮಾಹಿತಿ ತೃಪ್ತಿಕರವಾಗಿದೆ ಎಂದು ಲಿಮ್ಕಾ ಅಧಿಕಾರಿಗಳು ಹೇಳಿದ್ದಾರೆ.
8,592 ಕಿ.ಮೀ. ಪ್ರಯಾಣಕ್ಕೆ 636 ಲೀಟರ್ ಡೀಸೆಲ್ ಬಳಕೆಯಾಗಿದೆ. ಅಂದರೆ ಪ್ರತಿಲೀಟರ್ ಗೆ ಸರಾಸರಿ 14 ಕಿ.ಮೀ. ಮೈಲೇಜ್ ದೊರಕಿದೆ. ಅವರಿಗೆ ಪ್ರತಿ ಕಿ.ಮೀ.ಗೆ 3 ರುಪಾಯಿ ಇಂಧನ ವೆಚ್ಚವಾಗಿದೆ. ಈ ಮ್ಯಾರಥಾನ್ ಸವಾರಿಗೆ ಅವರಿಗೆ ಒಟ್ಟಾರೆ ವೆಚ್ಚವಾಗಿರೋದು 7.5 ಲಕ್ಷ ರುಪಾಯಿ.
ಇವರು ಉತ್ತಮ ರಸ್ತೆಯಲ್ಲಿ ಪ್ರತಿಗಂಟೆಗೆ 80 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಿದ್ದರು. ಹಿಮಾಚಲ ಭಾಗಗಳಲ್ಲಿ ಇವರ ಕಾರಿನ ವೇಗ ಗರಿಷ್ಟ ಪ್ರತಿಗಂಟೆಗೆ 20 ಕಿ.ಮೀ. ಆಗಿತ್ತು. ಇವರ ಈ ಡ್ರೈವಿಂಗ್ ಸಮಯದಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ. ಇವರ ಪ್ರಯಾಣಕ್ಕೆ ಟೂಲ್ ಗೇಟ್, ಮಿಲಿಟರಿ ಚೆಕಪ್ ಸಮಸ್ಯೆಯೂ ಎದುರಾಗಿತ್ತು. ಇದು ಇವರ ದಾಖಲೆಯ ಕೊಂಚ ಸಮಯ ನುಂಗಿಹಾಕಿತ್ತು.
ಇಂತಹ ಮ್ಯಾರಥಾನ್ ಹಲವು ವಿಷಯಗಳಲ್ಲಿ ಕಠಿಣ. ಇಲ್ಲಿ ತಾಂತ್ರಿಕ ಅಡಚಣೆಯೇ ಪ್ರಮುಖ ಸಮಸ್ಯೆ. ಅಂದರೆ ಇಂಧನ ಟ್ಯಾಂಕ್ ಲೀಕೆಜ್, ಗೇರ್ ಸಮಸ್ಯೆ, ಬ್ರೇಕ್ ಫೈಲ್ಯೂರ್ ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ಇದು ರಿಸ್ಕ್ ಕೂಡ ಹೌದು. ಆದರೂ ಈ ಓಲ್ಡ್ ಮ್ಯಾನ್ ಅದನ್ನೆಲ್ಲ ಸಮರ್ಥವಾಗಿ ನಿಭಾಯಿಸಿದ್ದಾರೆ.
ಸುರೇಶ್ ಬಾಬು ಎಂಬ ಅಜ್ಜನ ದಾಖಲೆಯ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಇವರು ಸುಮಾರು 40 ವಿಶ್ವದಾಖಲೆ ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ 7 ದಾಖಲೆ ಮಾಡಿದ್ದಾರೆ. ಕರ್ನಾಟಕ ಸೊಲೊ ಸೈಕಲ್ ಟೂರ್ ನಲ್ಲೂ ದಾಖಲೆ ಮಾಡಿದ್ದಾರೆ. ಅಂದರೆ ಸುಮಾರು 25 ದಿನದಲ್ಲಿ 2,850 ಕಿ.ಮೀ. ಸೊಲೊ ಸೈಕಲ್ ಸವಾರಿ ಮಾಡಿದ್ದಾರೆ. ವೇಗದ ಮ್ಯಾರಥಾನ್ ಸ್ಕೂಟರ್ ಸವಾರಿಯಲ್ಲೂ ಇವರು ದಾಖಲೆ ಮಾಡಿದ್ದಾರೆ.
ಇನ್ನೊಂದು ಅಚ್ಚರಿಯ ವಿಷಯ ಗೊತ್ತೆ? ಈ ಸುರೇಶ್ ಬಾಬು ಡ್ರೈವಿಂಗ್ ಕಲಿತು 6 ತಿಂಗಳು ಕಳೆದಿರಲಿಲ್ಲ. ಆಗಲೇ ದಾಖಲೆ ಮಾಡಿದ್ದಾರೆ. ಅದು ಕೂಡ ತನ್ನ 55ನೇ ವಯಸ್ಸಿನಲ್ಲಿ. ಇವರ ಉತ್ಸಾಹ ಕಂಡು ಯುವಕರೇ ನಾಚಬೇಕು ಅಲ್ಲವೇ..


Click it and Unblock the Notifications








