ಕಾರಿನಲ್ಲಿ ಬೆಂಗಳೂರು ಅಜ್ಜಂದಿರ ದಾಖಲೆ

Ramesh Babu Bangalore Marathon Car Driving Record
ಖಂಡಿತಾ ಇದನ್ನು ಅಜ್ಜಂದಿರ ದಾಖಲೆ ಎನ್ನಬಹುದು. ಹಾಗಂತ ಹೇಳಿದರೆ ರಮೇಶ್ ಬಾಬುಗೆ ಕೋಪನೂ ಬರಬಹುದು. ಯಾಕೆಂದರೆ ಅವರಿಗಿನ್ನೂ 55 ವಯಸ್ಸು. ಬೆಂಗಳೂರಿನ ಪ್ರೊಫೆಸರ್ ರಮೇಶ್ ಬಾಬು ನೇತೃತ್ವದಲ್ಲಿ ಮ್ಯಾರಥನ್ ಕಾರು ಚಾಲನೆಯಲ್ಲಿ ಹೊಸ ದಾಖಲೆ ಬರೆಯಲಾಗಿದೆ. ಇದು ಕನ್ಯಾಕುಮಾರಿಯಿಂದ ಕಾಶ್ಮಿರ ಕಾರು ಚಾಲನೆ.

Top of the World ಎಂಬ ಬೆಂಗಳೂರು ಕಂಪನಿಯ ಸ್ಥಾಪಕ ನಿರ್ದೇಶಕ ಡಾ. ಎಸ್ ರಮೇಶ್ ಬಾಬು(55). ಅವರು ಲೋಹಶಾಸ್ತ್ರ ವಿಭಾಗದಲ್ಲಿ ವಿಜ್ಞಾನಿ. ಇವರು 40 ವಿಶ್ವದಾಖಲೆ ಮತ್ತು 7 ರಾಷ್ಟ್ರೀಯ ದಾಖಲೆಯ ಸರದಾರ. ಇದೀಗ ಇವರಿಗೆ ಒಲಿದಿರುವುದು ಮ್ಯಾರಥಾನ್ ಕಾರು ಚಾಲನೆ ದಾಖಲೆ. ಇವರ ಹೆಸರು ಲಿಮ್ಕಾ ಪುಟದಲ್ಲೂ ಸೇರಿದೆ. ಈ ಡ್ರೈವಿಂಗ್ ನಡೆದದ್ದು ಕಳೆದ ಜೂನ್ ತಿಂಗಳಲ್ಲಿ.

ಇವರ ತಂಡದಲ್ಲಿದ್ದದ್ದು ಡಾ. ಕೆ. ಕುಮಾರ್(55). ಇವರು ಕರ್ನಾಟಕ ಕ್ಲೀನಿಂಗ್ ಕಾರ್ಪೊರೇಷನ್ ವಿಭಾಗದ ಅಧಿಕಾರಿ. ಮಾಜಿ ಪೈಲೇಟ್ ಕೂಡ ಹೌದು. ಶ್ರೀನಿವಾಸ ಆಟೋ ಗ್ಯಾರೇಜ್ ನ ಎಲ್. ಡಿ. ಗೋವಿಂದ ರಾಜನ್(63) ಕೂಡ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದಾರೆ. ಈ ಓಲ್ಡ್ ಮ್ಯಾನ್ ಗಳೊಂದಿಗೆ ಮತ್ತೊಬ್ಬ 31 ವಯಸ್ಸಿನ ಯುವಕ ಅಬಿನಂದನ್ ರಾಜ್ ಇದ್ದರು. ಇವರು ಒಳಾಂಗಣ ವಿನ್ಯಾಸಕ.

ಈ ನಾಲ್ಕು ಜನರ ತಂಡಕ್ಕೆ ರಮೇಶ್ ಬಾಬು ನಾಯಕ. ಕನ್ಯಾಕುಮಾರಿಯಿಂದ ಲೇಹ್(ಕಾಶ್ಮಿರ)ಗೆ ವೇಗವಾಗಿ ಅವಿರತ ಕಾರು ಚಾಲನೆ ಮಾಡಿದ್ದರಿಂದ ಇವರೆಲ್ಲರ ಹೆಸರು ಲಿಮ್ಕಾ ಪುಸ್ತಕದಲ್ಲಿ ದಾಖಲಾಗಿದೆ. ಮಧುರೈ, ಸೇಲಮ್, ಬೆಂಗಳೂರು, ಹೈದರಬಾದ್, ನಾಗಪುರ, ಜಾನ್ಸಿ, ಅಗ್ರಾ, ದೆಹಲಿ, ಚಂಡಿಗಢ, ಮನಾಲಿ, ಉದಾಶಿ ಮಾರ್ಗವಾಗಿ ಇವರ ಮ್ಯಾರಥಾನ್ ನಡೆದಿದೆ.

ಮಧ್ಯಮಗಾತ್ರದ ಸೆಡಾನ್ ಕಾರು ಬಳಸಿ ಇವರೆಲ್ಲ ಕೇವಲ ಮೂರು ದಿನಗಳಲ್ಲಿ 4002 ಕಿ.ಮೀ. ಡ್ರೈವ್ ಮಾಡಿದ್ದರು. ಸಂಚಾರ ದಟ್ಟಣೆ, ಪ್ರತಿಕೂಲ ವಾತಾವರಣದ ಹಿನ್ನಲೆಯಲ್ಲಿ ಸುಮಾರು 7 ಗಂಟೆ ಇವರಿಗೆ ನಷ್ಟವಾಗಿತ್ತು. ಇವರ ಒಟ್ಟಾರೆ ಮ್ಯಾರಥಾನ್ ಸಮಯ ಕೇವಲ 87 ಗಂಟೆ!

ಇದರೊಂದಿಗೆ ಈ ತಂಡ ಬೆಂಗಳೂರು- ಕಾಶ್ಮಿರ- ಬೆಂಗಳೂರನ್ನು ಸರಿಯಾಗಿ 8 ದಿನ, 9 ಗಂಟೆ, 15 ನಿಮಿಷಗಳಲ್ಲಿ ತಲುಪಿದ್ದಾರೆ. ಇವರು ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು, ಕಾಶ್ಮಿರ, ರಾಜಸ್ಥಾನ್, ಗುಜರಾತ್ ಮಾರ್ಗವಾಗಿ ಸಂಚರಿಸಿದ್ದರು. ಇದು ಕೂಡ ಇವರನ್ನು ಲಿಮ್ಕಾ ಪುಸ್ತಕಕ್ಕೆ ಸೇರಿಸುವಲ್ಲಿ ನೆರವಾಯಿತು. ಅಜ್ಜಂದಿರ ಸಾಧನೆ ಇಷ್ಟೇ ಅಲ್ಲ. ಮುಂದಿನ ಪುಟ ಓದಿ>>

More from DriveSpark

Article Published On: Friday, September 30, 2011, 16:12 [IST]
English summary
Prof. Dr. S. Ramesh Babu (55 years)- a Metallurgical Scientist and Founder Director of the “Top of the World” Centre for Excellence, credited with 40 World Records and 7 National Records has set a new record – this time in Marathon Highway Car Driving, by travelling from Kanyakumari to Kashmir and back. Read this Ramesh Babu and team Guinness Record drive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+