ಬೆಂಗಳೂರು ಬಾಬುಗಳು ಮಾಡಿದ ಗಿನ್ನಿಸ್ ದಾಖಲೆ!!

* ಕನ್ಯಾಕುಮಾರಿಯಿಂದ ಲೇಹ್: 4,002 ಕಿ.ಮೀ. ದೂರವನ್ನು ಕಾರಿನಲ್ಲಿ 3 ದಿನ, 21 ಗಂಟೆ, 50 ನಿಮಿಷದಲ್ಲಿ ಕ್ರಮಿಸಿದ್ದಾರೆ.
* ವೃತ್ತ ಪ್ರವಾಸ: ಬೆಂಗಳೂರು- ಕನ್ಯಾಕುಮಾರಿ- ಬೆಂಗಳೂರು- ಲೇಹ್- ಶ್ರೀನಗರ-ಬೆಂಗಳೂರು ಪ್ರಯಾಣ. ಇದು ಎಲ್ಲಿಂದ ಹೊರಟರೋ ಅಲ್ಲಿಗೇ ವಾಪಸ್ ಬರೋ ರೌಂಡ್ ಟ್ರಿಪ್. ಇದನ್ನು 8 ದಿನ, 9 ಗಂಟೆ, 15 ನಿಮಿಷದಲ್ಲಿ ಕ್ರಮಿಸಿದ್ದಾರೆ.
* ಬೆಂಗಳೂರಿನಿಂದ ಲೇಹ್ ಮತ್ತು ಅಲ್ಲಿಂದ ನಾನ್ ಸ್ಟಾಪ್ ಮರು ಪ್ರಯಾಣ. ಗಮನಿಸಬೇಕಾದ ಸಂಗತಿಯೆಂದರೆ ರಾತ್ರಿಯೂ ಎಲ್ಲಿಯೂ ನಿಲ್ಲದೇ ಪ್ರಯಾಣ ಮಾಡುತ್ತಿದ್ದರು. ಊಟ ತಿಂಡಿ ಮತ್ತು ವಿಶ್ರಾಂತಿಗಾಗಿ ಕೆಲವೇ ನಿಮಿಷಗಳನ್ನು ವ್ಯಯಿಸುತ್ತಿದ್ದರು.
* ಈ ನಾಲ್ಕು ಜನರಲ್ಲಿ ಮೂವರಿಗೆ 55ಕ್ಕಿಂತ ಹೆಚ್ಚು ವಯಸ್ಸು.
* ತಂಡದ ನಾಯಕ ಪ್ರೊ ರಮೇಶ್ ಬಾಬು ಕಾರು ಚಾಲನೆ ಕಲಿತದ್ದು ಕೇವಲ 6 ತಿಂಗಳ ಹಿಂದೆ. ಅದು ಕೂಡ ತನ್ನ 55ನೇ ವಯಸ್ಸಿನಲ್ಲಿ.
* ಮ್ಯಾರಥಾನ್ ಸೈಕ್ಲಿಂಗ್, ಮ್ಯಾರಥಾನ್ ಸ್ಕೂಟರ್ ಡ್ರೈವಿಂಗ್ ಮತ್ತು ಈಗಿನ ಮ್ಯಾರಥಾನ್ ಕಾರು ಚಾಲನೆಯಲ್ಲಿ ಅಡ್ವೆಂಚರ್ ದಾಖಲೆ ಮಾಡಿದ ಒಬ್ಬರೇ ಒಬ್ಬರು ವ್ಯಕ್ತಿಯೆಂದರೆ ರಮೇಶ್ ಬಾಬು.
* ಒಟ್ಟಾರೆ ಪ್ರಯಾಣ 8,592 ಕಿ.ಮೀ. ಬಳಸಿದ್ದು ಕೇವಲ 763 ಡೀಸೆಲ್. ಸರಾಸರಿ ಮೈಲೇಜ್ ಪ್ರತಿಲೀಟರ್ ಗೆ 14 ಕಿ.ಮೀ. ವೆಚ್ಚ ಲೀಟರ್ ಗೆ ಮೂರು ರುಪಾಯಿ.
ಮುಂದಿನ ಪುಟಗಳಲ್ಲಿದೆ ಇವರ ದಾಖಲೆಯ ಫುಲ್ ಡಿಟೈಲ್ಸ್>>


Click it and Unblock the Notifications








