ಸ್ವಂತ ವಾಹನ ಬೇಡ, ಸಾರ್ವಜನಿಕ ಸಾರಿಗೆನೇ ಸೂಕ್ತ

Traffic Jam Bangalore
ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಹೆಚ್ಚಿನ ಜನರು ನಗರಗಳಲ್ಲಿ ವಾಹನ ಚಾಲನೆ ಮಾಡುವುದು ಕಡು ಕಷ್ಟವೆಂದಿದ್ದಾರೆ. ಅದಕ್ಕಾಗಿ ಆದಷ್ಟು ಸ್ವಂತ ವಾಹನ ಬಳಕೆ ಕಡಿಮೆ ಮಾಡಿರುವುದಾಗಿ ಹೇಳುತ್ತಾರೆ. ಎಲ್ಲಾದರೂ ಪ್ರಯಾಣ ಮಾಡಬೇಕಿದ್ದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಇವರಿಗೆ ಇಷ್ಟವಂತೆ.

ನಿತ್ಯ ಪ್ರಯಾಣದ ಜಂಜಾಟ ಕಚೇರಿ ಅಥವಾ ಶಾಲೆಯಲ್ಲಿನ ಫರ್ಮಾಮೆನ್ಸ್ ಮೇಲೆ ಕೆಟ್ಟ ಪರಿಣಾಮ ಬೀರುವುದಾಗಿ ಹೆಚ್ಚಿನವರು ಹೇಳುತ್ತಾರೆ. ಟ್ರಾಫಿಕ್ ನಲ್ಲಿ ಸಿಲುಕಿ ಕೊನೆಗೆ ಕಷ್ಟದಲ್ಲಿ ಕಚೇರಿ ತಲುಪಿ ಉಸ್ಸಪ್ಪ ಅಂತ ಹೆಚ್ಚಿನವರು ಕುಳಿತುಕೊಳ್ಳುತ್ತಾರೆ.

"ದಿನನಿತ್ಯದ ಪ್ರಯಾಣ ಭಾವನಾತ್ಮಕವಾಗಿ ಪ್ರಮುಖ ಅಂಶ. ಹೆಚ್ಚಿನ ನಗರಗಳು ಸಂಚಾರ ದಟ್ಟಣೆಯ ಸಮಸ್ಯೆಯಿಂದ ಬಳಲುತ್ತಿವೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸಂಚಾರ ಸಮಸ್ಯೆ ಹೆಚ್ಚು ಗೋಚರಿಸಿದೆ" ಎಂದು ಐಬಿಎಂ ಗ್ಲೋಬಲ್ ಟ್ರಾನ್ಸ್ ಫೋರ್ಟೆಷನ್ ವಿಶ್ಲೇಷಕ ನವೀನ್ ಲಂಬಾ ಹೇಳುತ್ತಾರೆ.

ಒಂದು ಒಳ್ಳೆ ವಿಷ್ಯ: ದೆಹಲಿ, ಬೆಂಗಳೂರು, ಬೀಜಿಂಗ್ ನಗರಗಳಲ್ಲಿ ಕಳೆದ ಮೂರು ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆಯಂತೆ. ಟ್ರಾಫಿಕ್ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಸರಾಸರಿಯಾಗಿ ಹೇಳಬೇಕೆಂದರೆ ನೈರೊಬಿ, ಮೆಕ್ಸಿಕೊ ಸಿಟಿ, ಜೋಹಾನ್ಸ್ ಬರ್ಗ್, ಬೀಜಿಂಗ್, ಬೆಂಗಳೂರು ಮತ್ತು ಮಾಸ್ಕೊ ನಗರಗಳಲ್ಲಿ ಹೆಚ್ಚು ಜನರು ಟ್ರಾಫಿಕ್ ನಲ್ಲಿ ವ್ಯರ್ಥವಾಗಿ ಕಳೆಯುತ್ತಾರಂತೆ. ಇದರಿಂದ ಕೆಲಸ ಅಥವಾ ಶಾಲೆಯ ಸಮಯ ವ್ಯರ್ಥವಾಗುತ್ತದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

More from DriveSpark

Article Published On: Tuesday, October 4, 2011, 17:12 [IST]
English summary
Garden city Bangalore is the most painful city for Driving in India. Bangalore is Sixth worst city in the World for driving. Mexico top One in the list of worst cities to commute, IBM Commuter Pain Survey 2011 Said. Bangalore Trafic Jam, driver stress....
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+