ಉದ್ಯಾನ ನಗರಿಯಲ್ಲಿ ನಿತ್ಯ ಪ್ರಯಾಣದ ಕಿರಿಕಿರಿ

2011ರ ಐಬಿಎಂ ಕಮ್ಯೂಟರ್ ಪೈನ್ ಸರ್ವೆ ನಿತ್ಯ ಪ್ರಯಾಣದಲ್ಲಿ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಇಷ್ಟವಿಲ್ಲದ ನಗರಗಳ ಕುರಿತು ಸಮೀಕ್ಷೆ ನಡೆಸಿದೆ. ಕೆನಡಾದ ಮಾಂಟ್ರಿಲ್ ಪ್ರಯಾಣದಲ್ಲಿ ಹೆಚ್ಚು ನೋವು ನೀಡುವ ನಗರ. ಇದರ ನಂತರದ ಸ್ಥಾನ ಲಂಡನ್ ಮತ್ತು ಚಿಕಾಗೋ ನಗರಗಳದ್ದು.
ಸಂಚಾರ ದಟ್ಟಣೆ, ಇಂಧನ ದರ, ಪ್ರಯಾಣದ ಜಂಜಾಟ ಸೇರಿದಂತೆ ಹತ್ತಂಶಗಳನ್ನು ಮಾನದಂಡವಾಗಿ ಇಟ್ಟುಕೊಂಡು ಸಮೀಕ್ಷೆ ನಡೆಸಲಾಯಿತು. ಇದರಲ್ಲಿ ಬೆಂಗಳೂರಿಗೆ ಆರನೇ ಸ್ಥಾನ ದೊರಕಿದೆ. ಮೊದಲ ಸ್ಥಾನ ಮೆಕ್ಸಿಕೊ ಸಿಟಿಗೆ ದೊರಕಿದೆ. ಹೆಚ್ಚು ಕೆಟ್ಟ ನಗರಕ್ಕೆ ದೊರಕಿದ ಅಂಕಗಳಿಗೆ ಅನುಗುಣವಾಗಿ ವಿಶ್ವದ ಟಾಪ್ ಕೆಟ್ಟ ನಗರಗಳ ಪಟ್ಟಿ ಮುಂದಿದೆ.
1. ಮೆಕ್ಸಿಕೊ ಸಿಟಿ-108 ಅಂಕ
2. ಶೆನ್ಷೆನ್-95 ಅಂಕ
3. ಬೀಜಿಂಗ್- 95 ಅಂಕ
4. ನೈರೊಬಿ-88 ಅಂಕ
5. ಜೋಹಾನ್ಸ್ ಬರ್ಗ್-83 ಅಂಕ
6. ಬೆಂಗಳೂರು-75 ಅಂಕ
7. ನವದೆಹಲಿ-72 ಅಂಕ
ಮುಂದಿನ ಸ್ಥಾನಗಳನ್ನು ಕ್ರಮವಾಗಿ ಮಾಸ್ಕೊ, ಮಿಲನ್, ಸಿಂಗಾಪುರ, ಲಾಸ್ ಏಂಜಲ್ಸ್, ಪ್ಯಾರಿಸ್, ಮ್ಯಾಡ್ರಿಡ್, ನ್ಯೂಯಾರ್ಕ್ ಸಿಟಿ, ಟೊರೊಂಟೊ, ಸ್ಟಾಕ್ ಹಾಮ್, ಚಿಕಾಗೊ ಇತ್ಯಾದಿ ನಗರಗಳು ಪಡೆದಿವೆ.
ಸುಮಾರು ಆರು ಕಾಂಟಿನೆಂಟಲ್ ದೇಶಗಳ 20 ನಗರಗಳನ್ನು ಸಮೀಕ್ಷೆ ನಡೆಸಲಾಯಿತು. ಚಾಲಕರ ಅಭಿಪ್ರಾಯಗಳ ಮೂಲಕ ಈ ನಿರ್ಣಯಕ್ಕೆ ಬರಲಾಗಿದೆ. ಜಾಗತಿಕ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಉಂಟಾಗುವ ಕಿರಿಕಿರಿ, ಪಿರಿಪಿರಿ, ಒತ್ತಡ, ಕಷ್ಟ ಪ್ರಮುಖ ಮಾನದಂಡವಾಗಿತ್ತು.
ಬೆಂಗಳೂರಿಗೆ ಆಶಾದಾಯಕ ಸುದ್ದಿ ಮುಂದಿನ ಪುಟದಲ್ಲಿದೆ.


Click it and Unblock the Notifications








