6 ತಿಂಗಳಲ್ಲಿ ಮಹೀಂದ್ರ ರೇವಾ ಎನ್ಎಕ್ಸ್ಆರ್ ರಸ್ತೆಗೆ

"ನೂತನ ರೇವಾ ಕಾರನ್ನು ಈಗ ಅಭಿವೃದ್ಧಿಪಡಿಸುತ್ತಿದ್ದೇವೆ. ಇದೀಗ ಅಂತಿಮ ಹಂತದಲ್ಲಿದೆ. ಮುಂದಿನ ಆರು ತಿಂಗಳಲ್ಲಿ ಈ ಕಾರು ರಸ್ತೆಗಿಳಿಯಲಿದೆ" ಎಂದು ಮಹೀಂದ್ರ ಆಂಡ್ ಮಹೀಂದ್ರ ಉತ್ಪನ್ನ ಅಭಿವೃದ್ಧಿ, ತಂತ್ರಜ್ಞಾನ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜನ್ ವಡೆರಾ ಹೇಳಿದ್ದಾರೆ.
"ನೂತನ ರೇವಾ ಕಾರಿನಲ್ಲಿ ನಾಲ್ಕು ಜನರು ಪ್ರಯಾಣಿಸಬಹುದಾಗಿದೆ. ಇತರ ಸಾಮಾನ್ಯ ಕಾರುಗಳಲ್ಲಿರುವ ಎಲ್ಲಾ ಫೀಚರುಗಳೂ ಇದರಲ್ಲಿರಲಿವೆ" ಎಂದು ವಡೆರಾ ಮಾಹಿತಿ ನೀಡಿದ್ದಾರೆ. ಅಂದರೆ ನಾಲ್ಕು ಸೀಟಿನ ಇತರ ಕಾರುಗಳಂತೆ ಸ್ಥಳಾವಕಾಶ, ಪವರ್ ಮತ್ತು ಇತರ ಫೀಚರುಗಳಿರಲಿವೆ ಎಂದಿದ್ದಾರೆ.
ಆದರೆ ನೂತನ ಕಾರಿನ ದರದ ಕುರಿತು ಕಂಪನಿ ಇನ್ನೂ ಪ್ರಕಟಿಸಿಲ್ಲ. ಈ ಕಾರು ವೆಚ್ಚ ಕಡಿತದ ಕಾರಾಗಲಿದೆ ಎಂದು ವಡೆರಾ ಹೇಳಿದ್ದಾರೆ. ತಂತ್ರಜ್ಞಾನ ದುಬಾರಿಯಾದ ಕಾರಣ ಎಲೆಕ್ಟ್ರಿಕ್ ಕಾರು ಕೊಂಚ ದುಬಾರಿ. ಆದರೆ ನಾವು ಆದಷ್ಟು ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ರಾಜನ್ ವಡೆರಾ ಹೇಳಿದ್ದಾರೆ. ಈಗ ಪ್ರತಿತಿಂಗಳು 50 ರೇವಾ ಕಾರುಗಳು ಮಾರಾಟವಾಗುತ್ತಿವೆ.


Click it and Unblock the Notifications








