ಎಕ್ಸ್‌ಕ್ಲೂಸಿವ್; ಬೆಂಗ್ಳೂರಲ್ಲಿ ಮಹೀಂದ್ರ ಇ2ಒ ಫೋರ್ ಡೋರ್ ಆವೃತ್ತಿ ಟೆಸ್ಟಿಂಗ್!
ಬೆಂಗಳೂರಿನ ರಸ್ತೆಯಲ್ಲಿ ಪ್ರಾಯೋಗಿಕ ಸಂಚಾರ ಪರೀಕ್ಷೆಯ ವೇಳೆಯಲ್ಲಿ ಬಹುನಿರೀಕ್ಷಿತ ಮಹೀಂದ್ರ ಇ2ಒ ನಾಲ್ಕು ಬಾಗಿಲುಗಳ ವಿದ್ಯುತ್ ಚಾಲಿತ ಕಾರನ್ನು ಸೆರೆ ಹಿಡಿಯುವಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಯಶಸ್ವಿಯಾಗಿದೆ.
ನಿಮ್ಮ ಮಾಹಿತಿಗಾಗಿ ಮಹೀಂದ್ರ ಇ2ಒ ಫೋರ್ ಡೋರ್ ವರ್ಷನ್ ಕಾರನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಜನೆಯನ್ನು ಮಹೀಂದ್ರ ರೇವಾ ಹೊಂದಿದೆ. ಇದರಂಗವಾಗಿ ಬೆಂಗಳೂರು ನಗರದಲ್ಲಿ ಟೆಸ್ಟಿಂಗ್ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ನೂತನ ಕಾರಿನಲ್ಲಿ ಕಂಡುಬಂದಿರುವ ಪ್ರಮುಖ ಬದಲಾವಣೆಯೆಂದರೆ ಚಾರ್ಜಿಂಗ್ ಪಾಯಿಂಟನ್ನು ಕಾರಿನ ಎಡಬದಿಯಲ್ಲಿ ಜೋಡಣೆ ಮಾಡಲಾಗಿದೆ.

ನೂತನ ಮಹೀಂದ್ರ ಇ2ಒ ಹೆಚ್ಚು ಅಗಲವಾದ ಚಕ್ರಗಳನ್ನು ಪಡೆದಿದ್ದು, ಸುರಕ್ಷಾ ದೃಷ್ಟಿಕೋನದಲ್ಲಿ ಹೆಚ್ಚು ಫಲಕಾರಿಯೆನಿಸಲಿದೆ.

ಬಲ್ಲ ಮೂಲಗಳ ಪ್ರಕಾರ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿ ಅಂದರೆ ಅಕ್ಟೋಬರ್ ವೇಳೆಯಾಗುವಾಗ ನಾಲ್ಕು ಬಾಗಿಲುಗಳ ಮಹೀಂದ್ರ ಇ2ಒ ಮಾರುಕಟ್ಟೆ ಪ್ರವೇಶಿಸಲಿದೆ.

ಈಗ ಮಾರುಕಟ್ಟೆಯಲ್ಲಿರುವ ಟು ಡೋರ್ ಆವೃತ್ತಿಯು 48 ವೋಲ್ಟ್ ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸ್ಪಡುತ್ತದೆ. ಇದು 53.9 ಎನ್ ಎಂ ತಿರುಗುಬಲ 25.4 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಹೀಂದ್ರ ಇ2ಒ ಪ್ರತಿ ಗಂಟೆಗೆ 81 ಕೀ.ಮೀ. ವೇಗದಲ್ಲಿ ಸಂಚರಿಸಲಿದ್ದು, ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 120 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸಬಹುದಾಗಿದೆ.

220 ವಾಟ್ 15 ಎ ಸಾಕೆಟ್ ಮುಖಾಂತರ ಐದು ತಾಸಿನಲ್ಲೇ ಸಂಪೂರ್ಣವಾಗಿ ಚಾರ್ಜ್ ಮಾಡಿಸಬಹುದಾಗಿದೆ.

ಇಡೀ ದೇಶದಲ್ಲೇ ನಮ್ಮ ಬೆಂಗಳೂರಿನಲ್ಲಿ ವಿದ್ಯುತ್ ಚಾಲಿಕ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದರಂತೆ ಮಹೀಂದ್ರ ರೇವಾ ಸಹ ಬೆಂಗಳೂರು ಕೇಂದ್ರಿಕರಿಸಿ ಗರಿಷ್ಠ ಮಾರಾಟ ಗುರಿಯಿರಿಸಿಕೊಂಡಿದೆ.


Click it and Unblock the Notifications








