ಮತ್ತೆರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರ

Written By:

ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ಕಾರು ಸಂಸ್ಥೆಯು ದೇಶದಲ್ಲಿ ಮತ್ತೆರಡು ವಿದ್ಯುತ್ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದೆ. ನಿಕಟ ಮೂಲಗಳ ಪ್ರಕಾರ ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರುಗಳು ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದೆ.

ಫೇಮ್ (FAME) ಇಂಡಿಯಾದ ಎರಡನೇ ರಾಷ್ಟ್ರೀಯ ವರ್ಕ್ ಶಾಪ್ ಮತ್ತು ಪ್ರದರ್ಶನ ಮೇಳದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರ ರೇವಾ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಸಚ್‌ದೇವ, ವರ್ಷಾಂತ್ಯದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಮತ್ತೆರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರ

ಎರಡು ಸೀಟುಗಳ ಇ2ಒ ಹ್ಯಾಚ್ ಬ್ಯಾಕ್ ಕಾರಿನ ಹೊರತಾಗಿ ಇತ್ತೀಚೆಗಷ್ಟೇ ಮಹೀಂದ್ರ ರೇವಾ, ಇ-ವೆರಿಟೊ ಮಧ್ಯಮ ಗಾತ್ರದ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು.

ಮತ್ತೆರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರ

ನೆರೆಯ ಚೀನಾದಲ್ಲಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತ ಸಹ ಪರಿಸರ ಸ್ನೇಹಿ ವಾಹನಗಳನ್ನು ಆಳವಡಿಸುವುದರ ಮಹತ್ವವನ್ನು ಅರಿಯಬೇಕಿದೆ.

ಮತ್ತೆರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರ

ಚೀನಾದಲ್ಲಿ 2015ರಲ್ಲಿ 1,76,627 ಯುನಿಟ್ ಗಳಷ್ಟು ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿದ್ದವು. ಇನ್ನೊಂದೆಡೆ ಇದೇ ಅವಧಿಯಲ್ಲಿ ಅಮೆರಿಕ 1,15,262 ಯುನಿಟ್ ಗಳ ಮಾರಾಟವನ್ನು ಕಂಡಿತ್ತು. ಅದೇ ಹೊತ್ತಿಗೆ 2015-16ರ ಆರ್ಥಿಕ ಸಾಲಿನಲ್ಲಿ ಭಾರತದಲ್ಲಿದ್ದು ಬರಿ 753 ಯುನಿಟ್ ಮಾತ್ರವಾಗಿದೆ.

ಮತ್ತೆರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರ

ಎಲೆಕ್ಟ್ರಿಕ್ ವಾಹನಗಳ ನಿರ್ಮಾಣ ಹಾಗೂ ಮಾರಾಟ ಏರುಗತಿಗಾಗಿ ಸರಕಾರ ಸಬ್ಸಿಡಿ ನೀಡಬೇಕಾಗಿರುವುದು ಅತ್ಯಗತ್ಯವಾಗಿದೆ. ಅಲ್ಲದೆ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಗಳಂತಹ ಮೂಲ ಸೌಕರ್ಯಗಳ ಅಭಿವೃದ್ಧಿಯು ಆಗಬೇಕಿದೆ.

ಮತ್ತೆರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರ

ಅಷ್ಟಕ್ಕೂ ಮಹೀಂದ್ರ ರೇವಾ ಬಿಡುಗಡೆ ಮಾಡಲಿರುವ ಎಲೆಕ್ಟ್ರಿಕ್ ಕಾರುಗಳು ಯಾವುವು ಎಂಬುದು ಇನ್ನು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಇದೊಂದು ಪೂರ್ಣ ಪ್ರಯಾಣದ ವಿದ್ಯುತ್ ಚಾಲಿತ ಕಾರಾಗಿರಲಿದೆ ಎಂಬುದು ಸಂತಸದ ವಿಷಯವಾಗಿದೆ.

ಮತ್ತೆರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರ

2010ರಲ್ಲಿ ರೇವಾ ಬಹುತೇಕ ಶೇರನ್ನು ಮಹೀಂದ್ರ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಇದಕ್ಕೂ ಮೊದಲು 2001ರಲ್ಲಿ ಚೇತನ್ ಮೈನಿ ಸಾರಥ್ಯದಲ್ಲಿ ಸಂಸ್ಥೆ ರೂಪುಗೊಂಡಿರುವುದು ಈಗ ಇತಿಹಾಸ.

English summary
Mahindra To Launch Two New Electric Vehicles
Story first published: Thursday, July 21, 2016, 11:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark