ಹಬ್ಬದ ಸೀಸನಿನಲ್ಲಿ ಮಾರುತಿ ಉತ್ಪಾದನೆ ಹೆಚ್ಚಳ!

ಒಂದು ರೀತಿಯಲ್ಲಿ ನೋಡಿದರೆ ಕಂಪನಿಗೆ ಉತ್ಪಾದನೆ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಯಾಕೆಂದರೆ ನೂತನ ಸ್ವಿಫ್ಟ್ ಬುಕ್ಕಿಂಗ್ ಹೆಚ್ಚಾಗಿದೆ. ಆದರೆ ಸಮರ್ಪಕ ಸಮಯಕ್ಕೆ ಗ್ರಾಹಕರಿಗೆ ಪೂರೈಕೆ ಮಾಡಲಾಗದ ಒತ್ತಡಕ್ಕೆ ಕಂಪನಿ ಸಿಲುಕಿದೆ.
ಈಗ ಮಾರುತಿ ಸುಜುಕಿ ನೂತನ ಸ್ವಿಫ್ಟ್ ಪೆಟ್ರೋಲ್ ಆವೃತ್ತಿಗೆ 6 ತಿಂಗಳು ವೇಟಿಂಗ್ ಪಿರೆಯಿಡ್ ಮತ್ತು ಡೀಸೆಲ್ ಆವೃತ್ತಿಗೆ ಸುಮಾರು 10 ತಿಂಗಳು ಕಾಯಬೇಕಂತೆ. ಈಗಾಗಲೇ ಸುಮಾರು ಒಂದು ಲಕ್ಷ ಜನರು ಸ್ವಿಫ್ಟ್ ಕಾರನ್ನು ಬುಕ್ಕಿಂಗ್ ಮಾಡಿದ್ದಾರೆ.
ಈಗ ಹಬ್ಬದ ಸೀಸನ್. ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ. ಹೀಗಾಗಿ ಕಂಪನಿಯು ಮಾನೆಸರ್ ಮತ್ತು ಗುರ್ ಗಾಂವ್ ಘಟಕದಲ್ಲಿ ಕಾರು ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ. "ನೂತನ ಸ್ವಿಫ್ಟ್ ಗೆ ದೇಶದಲ್ಲಿ ಅತ್ಯಧಿಕ ಬೇಡಿಕೆಯಿರುವುದರಿಂದ ಉತ್ಪಾದನೆಯನ್ನು ಶೇಕಡ 30-40ರಷ್ಟು ಹೆಚ್ಚಿಸಲಿದ್ದೇವೆ" ಎಂದು ಮಾರುತಿ ವಕ್ತಾರರು ಹೇಳಿದ್ದಾರೆ.


Click it and Unblock the Notifications








