ಮುಂದಿನ ವರ್ಷದಿಂದ ಟೊಯೊಟಾ ಎಟಿಯೋಸ್ ರಫ್ತು

ಜಾಗತಿಕ ಮಾರುಕಟ್ಟೆಯ ರಸ್ತೆ ಮತ್ತು ಸ್ಥಳೀಯ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಎಟಿಯೋಸ್ ಕಾರುಗಳನ್ನು ಕೊಂಚ ಮಾರ್ಪಾಡು ಮಾಡಲು ಕಂಪನಿ ನಿರ್ಧರಿಸಿದೆ.
ದೇಶದಲ್ಲಿ ಕಾರು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿರುವುದಾಗಿ ಕಂಪನಿಯ ಭಾರತದ ಅಂಗಸಂಸ್ಥೆ ಟೊಯೊಟಾ ಕಿರ್ಲೊಸ್ಕರ್ ಮೋಟರ್ ಈ ಹಿಂದೆ ಪ್ರಕಟಿಸಿತ್ತು. ಕಂಪನಿಯು 2013ರಲ್ಲಿ 3,10,000 ವಾಹನಗಳನ್ನು ಉತ್ಪಾದಿಸಲು ನಿರ್ಧರಿಸಿದೆ. ಈಗ ಕಂಪನಿಯು ವಾರ್ಷಿಕವಾಗಿ 1.6 ಲಕ್ಷ ಕಾರುಗಳನ್ನು ಉತ್ಪಾದಿಸುತ್ತಿದೆ.
ಡೀಸೆಲ್ ಎಟಿಯೋಸ್, ಲಿವಾ: ಟೊಯೊಟಾ ಕಂಪನಿಯು ಇತ್ತೀಚೆಗೆ ಎಂಟ್ರಿ ಲೆವೆಲ್ ಎಟಿಯೋಸ್ ಸೆಡಾನ್ ಮತ್ತು ಕಾಂಪ್ಯಾಕ್ಟ್ ಕಾರು ಇಂಟಿಯೋಸ್ ಲಿವಾ ಕಾರಿನ ಡೀಸೆಲ್ ಆವೃತ್ತಿಗಳನ್ನು ಅನಾವರಣ ಮಾಡಿತ್ತು. ಇವೆರಡು ಆವೃತ್ತಿಗಳ ದರ ಕ್ರಮವಾಗಿ 5.54 ಲಕ್ಷ ರು. ಮತ್ತು 7.87 ಲಕ್ಷ ರು.(ದೆಹಲಿ ಎಕ್ಸ್ ಶೋರೂಂ) ಆಗಿದೆ.
ಪೆಟ್ರೋಲ್ ಎಟಿಯೋಸ್ ಲಿವಾ: ನೂತನ ಹ್ಯಾಚ್ ಬ್ಯಾಕ್ ಲಿವಾ ಶಕ್ತಿಶಾಲಿ 1197 ಸಿಸಿಯ 16 ಕವಾಟದ ಡಿಒಎಚ್ ಸಿ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು 5600 ಆರ್ ಪಿಎಂಗೆ 78.9 ಹಾರ್ಸ್ ಪವರ್ ನೀಡುತ್ತದೆ.
ಈ ಕಾರು 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಟೊಯೊಟಾ ಎಟಿಯೋಸ್ ಲಿವಾ ಪ್ರತಿಲೀಟರ್ ಇಂಧನಕ್ಕೆ 18.31 ಕಿ.ಮೀ. ಮೈಲೇಜ್ ನೀಡುತ್ತದೆ. ಎಕ್ಸ್ ಶೋರೂಂನಲ್ಲಿ ಇದರ ದರ 3.99 ಲಕ್ಷ ರು. ನಿಂದ 5.99 ಲಕ್ಷ ರು.ವರೆಗಿದೆ.


Click it and Unblock the Notifications








