ಬೆಂಗಳೂರು ಘಟಕಕ್ಕೆ ಬಾಗಿಲು ಹಾಕಿ ಕೂತ ಬಾಷ್

"ನೌಕರರ ಸಂಘ ಮತ್ತು ಕಂಪನಿಯ ಸಿಬ್ಬಂದಿಗಳು ಸೆಪ್ಟಂಬರ್ 28ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನೌಕರರು ಯಾವುದೇ ನೋಟಿಸನ್ನು ಆಡಳಿತ ಮಂಡಳಿಗೆ ನೀಡಿಲ್ಲ. ಹೀಗಾಗಿ ಕಳೆದ ಕೆಲವು ದಿನಗಳಿಂದ ಘಟಕ ತೆರೆದಿಲ್ಲ" ಎಂದು ಬಾಷ್ ಲಿಮಿಟೆಡ್ ಮುಂಬೈ ಷೇರುಪೇಟೆಯಲ್ಲಿ ಮಾಹಿತಿ ನೀಡಿದೆ.
"ನೌಕರರ ಸಂಘದ ನ್ಯಾಯಸಮತ್ತವಲ್ಲದ ಪ್ರತಿಭಟನೆ ಹಿನ್ನಲೆಯಲ್ಲಿ ಕಂಪನಿಯು ಕಳೆದ ತಿಂಗಳು ಸೆಪ್ಟಂಬರ್ 29ರಿಂದ ಘಟಕದ ವಹಿವಾಟನ್ನು ಸ್ಥಗಿತಗೊಳಿಸಿದ್ದೇವೆ" ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಹೊರಗುತ್ತಿಗೆ ಜಾಡ್ಯವನ್ನು ಆಟೋಮೊಬೈಲ್ ಕ್ಷೇತ್ರದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿರುವ ಬಾಷ್ ಕಂಪನಿ ಮ್ಯಾನೇಜ್ಮೆಂಟ್ ವಿರುದ್ಧ ಬಾಷ್ ನೌಕರರು ಪ್ರತಿಭಟನೆ ಆರಂಭಿಸಿದ್ದರು.


Click it and Unblock the Notifications








