ಸ್ವಿಫ್ಟ್ ಡಿಜೈರ್: ಖರೀದಿಸೋ ಮುನ್ನ ರಿವ್ಯೂ ಓದಿರಿ

ಸ್ವಿಫ್ಟ್ ಡಿಜೈರ್ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಯಲ್ಲಿ ದೊರಕುತ್ತಿದೆ. ಸ್ವಿಫ್ಟ್ ಡಿಜೈರ್ ಮುಂಭಾಗ ನೋಡಲು ಮಾರುತಿಯ ಇತ್ತೀಚಿನ ಎಸ್ಎಕ್ಸ್4 ಕಾರಿನಂತೆ ಇದೆ. ಅತ್ಯುತ್ತಮ ಸವಾರಿಗೆ ಸೂಕ್ತವಾಗಿರುವ ಸ್ವಿಫ್ಟ್ ಡಿಜೈರ್ ಇತ್ತೀಚೆಗೆ ಹಲವು ಸುರಕ್ಷಿತ ಫೀಚರುಗಳನ್ನೂ ಹೊಂದಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಟಾಟಾ ಮಾಂಝಾ, ಹ್ಯುಂಡೈ ಅಸೆಂಟ್, ಟೊಯೊಟಾ ಎಟಿಯೋಸ್ ಮತ್ತು ನಿಸ್ಸಾನ್ ಸನ್ನಿ ಕಾರಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.
ಎಂಜಿನ್: ಎಂಟ್ರಿ ಲೆವೆಲ್ ಸೆಡಾನ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಇದು 1,298 ಸಿಸಿಯ 16 ಕವಾಟದ ಪೆಟ್ರೋಲ್ ಎಂಜಿನ್ 6 ಸಾವಿರ ಆರ್ ಪಿಎಂಗೆ 87 ಹಾರ್ಸ್ ಪವರ್ ನೀಡುತ್ತದೆ. 4,500 ಆರ್ ಪಿಎಂಗೆ 113 ಟಾರ್ಕ್ ಪವರ್ ನೀಡುತ್ತದೆ.
ಡೀಸೆಲ್ ಆವೃತ್ತಿ 1,248 ಸಿಸಿಯ ಟರ್ಬೊ ಚಾರ್ಜ್ ಡ್ ಡಿಡಿಐಎಸ್ ಎಂಜಿನ್ ಹೊಂದಿದೆ. ಇದು 4 ಸಾವಿರ ಆರ್ ಪಿಎಂಗೆ 75 ಹಾರ್ಸ್ ಪವರ್ ಮತ್ತು 2 ಸಾವಿರ ಆರ್ ಪಿಎಂಗೆ 190 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳೆರಡೂ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿವೆ.
ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಕೆ ಸೀರಿಸ್ ಎಂಜಿನ್ ಹೊಂದಿದೆ. ಇದರಿಂದಾಗಿ ಕೇವಲ 13.8 ಸೆಕೆಂಡ್ ನಲ್ಲಿ ಸೊನ್ನೆಯಿಂದ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಈ ಕಾರಲ್ಲಿ ಪ್ರತಿಗಂಟೆಗೆ ಗರಿಷ್ಠ 169 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಮುಂದಿನ ಪುಟ ನೋಡಲು ಮರೆಯದಿರಿ.


Click it and Unblock the Notifications