ಸ್ವಿಫ್ಟ್ ಡಿಜೈರ್ ಹೊರಗೆ ನೋಡಿ, ಒಳಗೆ ಇಣುಕಿ

ಎಕ್ಸ್ ಟೀರಿಯರ್: ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಹೊರ ವಿನ್ಯಾಸ ಡೈನಾಮಿಕ್ ಲುಕ್ ನಿಂದ ಇಷ್ಟವಾಗುತ್ತದೆ. ಹೆಡ್ ಲ್ಯಾಂಪ್, ಮುಂಭಾಗದ ಗ್ರಿಲ್ ಮತ್ತು ನೀಟಾಗಿ ಕಂಪನಿಯ ಸಿಂಬಲ್ ಜೋಡಿಸಿರುವುದು ಗಮನ ಸೆಳೆಯುತ್ತದೆ. ಕಾರಿನ ಬಾಡಿ ಬಣ್ಣದ ಬಂಪರ್ ಗಳು, ಆಕರ್ಷಕ ವಿನ್ಯಾಸದ ರಿಯರ್ ವ್ಯೂ ಮಿರರ್, ಡೋರ್ ಹ್ಯಾಂಡಲ್ಸ್ ಕೂಡ ಇಷ್ಟವಾಗುತ್ತದೆ. ಸ್ಪೋರ್ಟಿ ಅಲಾಯ್ ವೀಲ್ ಮತ್ತು ಒಆರ್ ವಿಎಂ ಫೀಚರಿನ ಟರ್ನ್ ಇಂಡಿಕೇಟರ್ ಗಳು ಸೂಪರ್.
ಇಂಟಿರಿಯರ್ ಗೆ ಇಣುಕಿ: ಸ್ವಿಫ್ಟ್ ಡಿಜೈರ್ ಕಾರಿನ ಒಳಭಾಗ ನೋಡಿದಾಗ ಖಂಡಿತಾವಾಗಿಯೂ ಇದು ವ್ಯಾಲ್ಯು ಫಾರ್ ಮನಿ ಎಂಬುದು ಅರ್ಥವಾಗುತ್ತದೆ. ಇಂಟಿರಿಯರ್ ಸಿಂಪಲ್ ಆಗಿದ್ದರೂ ಗಮನ ಸೆಳೆಯುತ್ತದೆ. ಅದರ ಒಟ್ಟಾರೆ ಕ್ಯಾಬಿನ್ ಸ್ಪೋರ್ಟಿ ಲುಕ್ ನಿಂದ ಇಷ್ಟವಾಗುತ್ತದೆ. ಸ್ವಿಫ್ಟ್ ಮತ್ತು ಎಸ್ ಎಕ್ಸ್ 4 ಕಾರುಗಳಲ್ಲಿರುವ ಸ್ಟೇರಿಂಗ್ ವೀಲ್ ನ್ನೇ ಬಳಸಲಾಗಿದೆ. ಒಟ್ಟಾರೆ ಇಂಟಿರಿಯರ್ ಇಷ್ಟವಾಗುತ್ತದೆ.


Click it and Unblock the Notifications