ಸ್ವಿಫ್ಟ್ ಡಿಜೈರ್: ಫೀಚರುಗಳಿಗೇನೂ ಕಮ್ಮಿಯಿಲ್ಲ!

ಡ್ಯಾಷ್ ಬೋರ್ಡ್ ನಲ್ಲಿ ಅಟಾಚ್ ಆಗಿರುವ ಆಡಿಯೋ ಸಿಸ್ಟಮ್ ಆಕರ್ಷಕವಾಗಿದೆ. ಆಡಿಯೋ ಕಂಟ್ರೊಲ್, ಪವರ್ ವಿಂಡೋಸ್, ಹೊಂದಾಣಿಕೆ ಮಾಡಬಹುದಾದ ಸ್ಟೇರಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್(ಏರ್ ಕಂಡಿಷನ್) ಇತ್ಯಾದಿ ಫೀಚರುಗಳಿವೆ. ಅಷ್ಟೇ ಏಕೆ ನೀವು ಸ್ಮೋಕರ್ ಆಗಿದ್ದರೆ ಸಿಗರ್ ಲೈಟ್ ಕೂಡ ಇದೆ!
ಸುರಕ್ಷಿತ ಫೀಚರು: ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಸುರಕ್ಷಿತ ಸವಾರಿಗೆ ಬೇಕಾದಷ್ಟು ಫೀಚರುಗಳಿವೆ. ಮುಂಭಾಗದ ಏರ್ ಬ್ಯಾಗ್, ಇಬಿಡಿ ಮತ್ತು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಇಎಲ್ಆರ್ ಹೋಂದಾಣಿಕೆಯಿರುವ ಮುಂಭಾಗದ ಮತ್ತು ಹಿಂಭಾಗದ ಸೀಟಿನಲ್ಲಿ "ಸೀಟು ಬೆಲ್ಟ್" ಇವೆ.
ಸುರಕ್ಷಿತ ಸವಾರಿಗೆ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಇನ್ನಷ್ಟು ಫೀಚರುಗಳಿವೆ. ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಸಹಕರಿಸುವ ಚೈಲ್ಡ್ ಲಾಕ್ ಇದೆ. ಉಳಿದಂತೆ ಕಾರಿನ ಸೈಡ್ ತಾಗಿ ಅಪಾಯವಾಗುವುದನ್ನು ತಪ್ಪಿಸಲು ಸುರಕ್ಷಿತ ಬೀಮ್ ಗಳಿವೆ, ಫಾಗ್ ಲ್ಯಾಂಪ್, ಕೀಲೆಸ್ ಎಂಟ್ರಿ, ಅತ್ಯಧಿಕ ಗುಣಮಟ್ಟದ ಹಿಂಭಾಗದ ಲ್ಯಾಂಪ್, ಐಕ್ಯಾಟ್ ಇತ್ಯಾದಿ ಫೀಚರುಗಳಿವೆ.
ವೆರಿ ಇಂಪಾರ್ಟೆಂಟ್: ಇದರ ದರ, ಮೈಲೇಜ್ ಮುಂದಿನ ಪುಟದಲ್ಲಿದೆ


Click it and Unblock the Notifications








