ಬಾಲಿವುಡ್ ನಟಿ ಗುಲ್ ಪನಾಗ್ ಈಗ ಸ್ಪೋರ್ಟಿ ಬ್ಯೂಟಿ

ನಿನ್ನೆ ಆಕೆಗೆ ಆಡಿ ಕಂಪನಿಯು ಆಡಿ ಕಾರನ್ನು ಗಿಫ್ಟ್ ಕೊಟ್ಟಿದೆ ಎಂದು ಸುದ್ದಿಯಾಗಿತ್ತು. ಆದರೆ ಆಕೆ ಕ್ಯೂ5 ಕಾರನ್ನು ಖರೀದಿಸಿದ್ದು ಇಂದು ಖಚಿತವಾಗಿದೆ.
ದುಬಾರಿ ಕಾರುಗಳನ್ನು ಹೊಂದಿರುವ ಸೆಲೆಬ್ರಿಟಿಗಳ ಸಾಲಿಗೆ ಗುಲ್ ಪನಾಗ್ ಸೇರಿದ್ದಾರೆ. ಆಡಿ ಇಂಡಿಯಾ ಮುಖ್ಯಸ್ಥ ಮೈಕೆಲ್ ಪಾರ್ಷ್ಕೆ ನೂತನ ಕಾರಿನ ಕೀಲಿಕೈಯನ್ನು ಮುಂಬೈ ಷೋರೂಂನಲ್ಲಿ ಪನಾಗ್ ಗೆ ಹಸ್ತಾಂತರಿಸಿದ್ದಾರೆ.
ಐಷಾರಾಮಿ ಕಾರು ತಯಾರಿಕಾ ಕಂಪನಿಗಳು ಸದಾ ಸೆಲೆಬ್ರಿಟಿಗಳನ್ನು ಆಕರ್ಷಿಸಲು ಯತ್ನಿಸುತ್ತಿವೆ. ಕೆಲವೊಂದು ಕಾರುಗಳನ್ನು ಉಡುಗೊರೆಯಾಗಿ ನೀಡುವುದು ಉಂಟು.
ಇತ್ತೀಚೆಗೆ ಆಡಿ ಕಾರು ಖರೀದಿಸಿದ ಸೆಲೆಬ್ರಿಟಿ ಅಂದರೆ ಜಾನ್ ಅಬ್ರಹಾಂ. ಅವರು ಆಡಿ ಕ್ಯೂ7 ಕಾರು ಖರೀದಿಸಿದ್ದರು. ಕ್ಯೂ7ಗೆ ಹೋಲಿಸಿದರೆ ಗುಲ್ ಪನಾಗ್ ಖರೀದಿಸಿದ ಕಾರು ಸ್ವಲ್ಪ ಚಿಕ್ಕದು. ಈಗ ಜಾಗತಿಕವಾಗಿ ಹೆಚ್ಚು ಜನರು ಕ್ಯೂ5 ಖರೀದಿಸುತ್ತಿದ್ದಾರೆ. ಈ ಕಾರಿನ ಆರಂಭಿಕ ದರ ಸುಮಾರು 42 ಲಕ್ಷ ರುಪಾಯಿ.
ಕ್ಯೂ7 ಸರಣಿಯ ಎಂಜಿನ್ ಕ್ಯೂ5 ಕಾರಿನಲ್ಲಿದೆ. ಆದರೆ ಈ ಕಾರಿನ ಗಾತ್ರ ಚಿಕ್ಕದಿರುವುದರಿಂದ ಸಿಟಿ ರಸ್ತೆಗಳಿಗೆ ಹೆಚ್ಚು ಸೂಕ್ತವಾಗಿದೆ. ಕ್ಯೂ5 ಸ್ಪೋರ್ಟ್ಸ್ ಕಾರು ಎರಡು ಲೀಟರಿನ ಟಿಡಿಐ ಎಂಜಿನ್ ಮತ್ತು 3.0 ಟಿಡಿಐ ಆಯಿಲ್ ಬರ್ನರ್ ಹೊಂದಿದೆ.


Click it and Unblock the Notifications








