ನೋಡಿ ಸಾರ್, 100 ಕಿ.ಮೀ. ಮೈಲೇಜ್ ನೀಡೋ ಆಡಿ ಕಾರ್

Audi Set To Launch 100kmpl 2012 A3
ಅರೇ ನೀವ್ಯಾಕೆ ಕಣ್ಣು ಒರೆಸಿಕೊಂಡು ನೋಡುತ್ತಿದ್ದೀರಿ. ಕಾಗುಣಿತ ತಪ್ಪಲ್ಲ. ಸರಿಯಾಗಿಯೇ ಓದಿದ್ದೀರಿ. ಪ್ರತಿಲೀಟರ್ ಡೀಸೆಲ್ ಗೆ ನೂರು ಕಿ.ಮೀ. ಮೈಲೇಜ್ ನೀಡುವ ಕಾರೊಂದು ಶಾಂಘೈ ವಾಹನ ಪ್ರದರ್ಶನದಲ್ಲಿ ಅನಾವರಣಗೊಂಡಿದೆ.

ಕಾರು ಖರೀದಿದಾರರು ಅತ್ಯಂತ ಹೆಚ್ಚು ಪ್ರಾಮುಖ್ಯತೆ ಕೊಡುವ ಅಂಶವೆಂದರೆ ಮೈಲೇಜ್. ದೇಶದ ಅತ್ಯಧಿಕ ಮೈಲೇಜ್ ಕಾರೆಂದರೆ ಇಂಡಿಕಾ ಇವಿ2. ಇದು ಪ್ರತಿಲೀಟರ್ ಇಂಧನಕ್ಕೆ 25 ಕಿ.ಮೀ. ಮೈಲೇಜ್ ನೀಡುತ್ತದೆ. ಆದರೆ ಇಲ್ಲೊಂದು ಕಾರಿದೆ. ಇದು ಇವಿ2 ಕಾರಿಗಿಂತ ನಾಲ್ಕು ಪಟ್ಟು ಹೆಚ್ಚು ಮೈಲೇಜ್ ನೀಡುತ್ತದೆ.

ಜರ್ಮನಿಯ ದುಬಾರಿ ಕಾರು ತಯಾರಿಕಾ ಕಂಪನಿ ಆಡಿ ನೂತನ ಎ3 ಕಾರನ್ನು ಶಾಂಘೈ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದೆ. 2012ರ ಆಡಿ ಎ3 ಸಣ್ಣ ಸೆಡಾನ್ ಕಾರಾಗಿದ್ದು ಡೀಸೆಲ್ ಎಂಜಿನ್ ಹೊಂದಿದೆ. ಈ ಕಾರಿನ ವಿಶೇಷ ತಂತ್ರಜ್ಞಾನದ ಎಂಜಿನ್ ಮೈಲೇಜ್ ಹೆಚ್ಚಿಸಲು ನೆರವಾಗಿದೆಯಂತೆ.

ಆಡಿ ಎ3 ಕಾರಲ್ಲಿ ಸಿಲಿಂಡರ್ ಡಿಆಕ್ಟಿವೇಷನ್ ತಂತ್ರಜ್ಞಾನವಿದೆ. ಅಂದ್ರೆ ಕಾರಿನಲ್ಲಿ ಲೋಡ್ ಕಡಿಮೆ ಇದ್ದಾಗ 4 ಸಿಲಿಂಡರ್ ಎಂಜಿನನ್ನು 2 ಸಿಲಿಂಡರ್ ಗೆ ಪರಿವರ್ತಿಸಬಹುದು. ಈ ರೀತಿ ಮಾಡಿ ಗಂಟೆಗೆ 50 ಕಿ.ಮೀ. ವೇಗದಲ್ಲಿ ಸಾಗಿದರೆ ಪ್ರತಿಲೀಟರ್ ಡೀಸೆಲ್ ಗೆ 100 ಕಿ.ಮೀ. ಮೈಲೇಜ್ ದೊರಕುತ್ತದೆ ಎಂದು ಕಂಪನಿ ಹೇಳಿದೆ.

ಮುಂದಿನ ವರ್ಷದ ಆರಂಭದಲ್ಲಿ ಈ ಕಾರು ಯುರೋಪ್ ಮತ್ತು ಅಮೆರಿಕ ದೇಶಗಳ ರಸ್ತೆಗಿಳಿಯಲಿದೆ. ಭಾರತಕ್ಕೆ ಬರುವ ಯಾವುದೇ ಸೂಚನೆ ದೊರಕಿಲ್ಲ. ದರದ ಕುರಿತು ಯಾವುದೇ ಮಾಹಿತಿಯಿಲ್ಲ. ಆಡಿ ಕಂಪನಿಯ ಕಾರಾಗಿರುವ ಕಾರಣ ಇದರ ದರ ಅಗ್ಗವಾಗಿರುವ ಯಾವುದೇ ಸಾಧ್ಯತೆಗಳು ಇಲ್ಲವೆಂದು ಊಹಿಸಬಹುದು.

More from DriveSpark

Article Published On: Monday, October 24, 2011, 16:07 [IST]
English summary
Audi Set To Launch 100kmpl 2012 A3. Audi, the German premium car maker has unveiled the A3 sedan which was first displayed at the Shanghai auto show. The 2012 Audi A3 is a small sedan powered by a diesel engine. It has an engine technology that will improve the car's mileage to mind blowing levels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+