ಟಾಟಾ ಇಂಡಿಕಾ ಕಾರನ್ನು "ಟ್ಯಾಕ್ಸಿ" ಎಂದ ಮಾರುತಿ ಸ್ವಿಫ್ಟ್

ಇದಕ್ಕೆ ಉದಾಹರಣೆಯಾಗಿ ಸ್ವಿಫ್ಟ್ ಮತ್ತು ಇಂಡಿಕಾ ಕಾರುಗಳ ಜಾಹೀರಾತನ್ನು ನೋಡಬಹುದು. ಇತ್ತೀಚೆಗೆ ಹೊಸ ಸ್ವಿಫ್ಟ್ ಕುರಿತು ಮಾರುತಿ ಸುಜುಕಿ ಜಾಹೀರಾತು ಅಭಿಯಾನ ಆರಂಭಿಸಿದೆ. ಅದರಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಯ ಟಾಟಾ ಇಂಡಿಕಾ ಕಾರನ್ನು ಟ್ಯಾಕ್ಸಿ ಎಂದಿದೆ.
ಜಾಹೀರಾತಿನಲ್ಲಿ, "ನಿಮ್ಮ ಕಾರು ನೋಡಲು ಟ್ಯಾಕ್ಸಿಯಂತೆ ಇರದಿರಲಿ ಅಥವಾ ಟ್ಯಾಕ್ಸಿಯಂತಹ ಕಾರು ಯಾಕೆ ಖರೀದಿಸುವಿರಿ, ಸ್ವಿಫ್ಟ್ ಕಾರು ಖರೀದಿಸಿ" ಎನ್ನಲಾಗಿದೆ. ಟಾಟಾ ಇಂಡಿಕಾ ಕಾರಿನ ಕುರಿತು ತಿಳಿದಿರುವರಿಗೆ ಇದು ಅರ್ಥವಾಗುತ್ತದೆ. ಯಾಕೆಂದರೆ ಇಂಡಿಕಾ ಟ್ಯಾಕ್ಸಿ ಚಾಲಕರ ನೆಚ್ಚಿನ ಕಾರು.
ಅರೇ ಇದರಲ್ಲಿ ಅಂತಹ ವಿಷಯವೇನಿದೆ ಎಂದು ಹುಬ್ಬೇರಿಸಬೇಡಿ. ಈ ಜಾಹೀರಾತಿನ ಸೂಕ್ಷ್ಮತೆ ಅರಿವಾಗಬೇಕಾದರೆ ಇದಕ್ಕೂ ಮೊದಲು ಟಾಟಾ ಮೋಟರ್ಸ್ ನೀಡಿದ ಜಾಹೀರಾತನ್ನು ನೋಡಬೇಕು.
ಟಾಟಾ ಇಂಡಿಕಾ ಮತ್ತು ಸ್ವಿಫ್ಟ್ ಕಾರುಗಳ ಫೀಚರುಗಳನ್ನು ಹೋಲಿಕೆ ಮಾಡಿ ಟಾಟಾ ಮೋಟರ್ಸ್ ಕಂಪನಿಯು ಇಂಡಿಕಾ ಕಾರು ಹೇಗೆ ಬೆಸ್ಟ್ ಎಂಬ ಜಾಹೀರಾತನ್ನು ಇತ್ತೀಚೆಗೆ ನೀಡಿತ್ತು. ಈ ಜಾಹೀರಾತಿಗೆ ಪ್ರತಿಯಾಗಿ ಮಾರುತಿ ಈ ಜಾಹೀರಾತು ಮೂಲಕ ಟಾಂಗ್ ನೀಡಿದೆ ಅಂತ ಸುಲಭವಾಗಿ ಅರ್ಥವಾಗುತ್ತದೆ.
ಸದ್ಯ ದೇಶದ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸ್ ಮತ್ತು ಮಾರುತಿ ಸುಜುಕಿ ಎರಡು ಪ್ರತಿಸ್ಪರ್ಧಿಗಳು. ಇವೆರಡು ಕಂಪನಿಗಳು ಅಗ್ಗದ ಮತ್ತು ಮೈಲೇಜ್ ಕಾರನ್ನು ರಸ್ತೆಗಿಳಿಸಿ ಮಾಸ್ ಜನರ ಮನಗೆದ್ದಿದೆ.


Click it and Unblock the Notifications








