ಅಪಘಾತ ಮಾಡಿ ನೋಡು: ಕ್ರಾಷ್ ಟೆಸ್ಟ್ ಎಂದರೇನು?

ಆದರೆ ಕ್ರಾಷ್ ಟೆಸ್ಟಿಗೆ ಸಂಪೂರ್ಣ ಹೊಸ ಕಾರನ್ನು ಬಳಸಲಾಗುವುದಿಲ್ಲ. ಹೊಸ ಕಾರಿಗೆ ಬಳಸಿದ ಬಾಡಿ ಸೇರಿದಂತೆ ಹೊಸ ಮಾಡೆಲ್ ಕಾರಿನ ಡಮ್ಮಿಯನ್ನು ಡಿಕ್ಕಿ ಹೊಡೆಸಲಾಗುತ್ತದೆ. ಇದರೊಳಗೆ ಮನುಷ್ಯರು ಇರುವುದಿಲ್ಲ. ಮನುಷ್ಯರ ಗೊಂಬೆಯೊಂದನ್ನು ಕೂರಿಸಲಾಗುತ್ತದೆ. ಆದರೆ ಕಾರಿನ ತೂಕ ವಿನ್ಯಾಸವೆಲ್ಲ ಹೊಸ ಕಾರಿನಂತೆ ಇರಬೇಕು.
ಕ್ರಾಷ್ ಟೆಸ್ಟ್ ವಿಧ: ಕಾರು ಅಪಘಾತ ಪರೀಕ್ಷೆಯಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ವಾಹನದ ಮುಂಭಾಗವನ್ನು ಗೋಡೆಗೆ ಡಿಕ್ಕಿ ಹೊಡೆಸುವುದು, ವಾಹನ ಸೈಡ್ ಭಾಗವನ್ನು ಗೋಡೆಗೆ ಡಿಕ್ಕಿ ಹೊಡೆಸುವುದು.
ಮುಂಭಾಗ ಅಪಘಾತ: ನಿಗದಿತ ವೇಗದಲ್ಲಿ ಕಾರಿನ ಮುಂಭಾಗ ಗೋಡೆಗೆ ಡಿಕ್ಕಿ ಹೊಡೆಯಬೇಕು. ಈ ಸಮಯದಲ್ಲಿ ವಾಹನದಲ್ಲಿರುವರ ತಲೆಭಾಗಕ್ಕೆ ಯಾವ ಪ್ರಮಾಣದಲ್ಲಿ ಅಪಾಯವಾಗಬಹುದು ಎಂಬುದುನ್ನು ತಿಳಿದುಕೊಳ್ಳಲಾಗುತ್ತದೆ. ಅಪಘಾತದ ಕ್ಷಣವನ್ನು ಕ್ಯಾಮರಾದಲ್ಲಿ ದಾಖಲಿಸಲಾಗುತ್ತದೆ.
ಸೈಡ್ ಇಂಪ್ಯಾಕ್ಟ್ ಕ್ರಾಷ್ ಟೆಸ್ಟ್: ಕಾರಿನ ಸೈಡ್ ಭಾಗದ ಮೂಲಕ ಅಪಘಾತ ನಡೆಸಲಾಗುತ್ತದೆ. ಕಾರಿನ ಮೇಲೆ 1,368 ಕೆ.ಜಿ ಭಾರ ಬೀಳುವಂತಹ ಅಪಘಾತ ಇದಾಗಿದೆ. ಅಂದರೆ ಮತ್ತೊಂದು ಕಾರಿನ ಬಂಪರ್ ವೇಗವಾಗಿ ಬಂದು ಡಿಕ್ಕಿ ಹೊಡೆದರೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳುವ ಪರೀಕ್ಷೆ ಇದಾಗಿದೆ.


Click it and Unblock the Notifications








