ಶೇಕಡ 4ರಷ್ಟು ಮಾರುತಿ ಸುಜುಕಿ ಸ್ವಿಫ್ಟ್ ಬುಕ್ಕಿಂಗ್ ಕ್ಯಾನ್ಸಲ್

ಮಾನೆಸರ್ ಘಟಕದಲ್ಲಿ ನೌಕರರ ಮುಷ್ಕರದಿಂದ ಕಂಪನಿಯು ಸಾಕಷ್ಟು ನಷ್ಟ ಅನುಭವಿಸಿದೆ. ಆದರೆ ಕಂಪನಿಯ ಬ್ರಾಂಡ್ ಇಮೇಜಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸ್ವಿಫ್ಟ್ ಗಾಗಿ ಹೆಚ್ಚು ದಿನ ಕಾಯಲು ಸಿದ್ಧರಿದ್ದಾರೆ. ಆದರೂ ಈಗಾಗಲೇ ಸ್ವಿಫ್ಟ್ ಬುಕ್ಕಿಂಗ್ ಮಾಡಿದ ಗ್ರಾಹಕರಲ್ಲಿ ಶೇಕಡ 4ರಷ್ಟು ಗ್ರಾಹಕರು ಸ್ವಿಫ್ಟ್ ಬುಕ್ಕಿಂಗ್ ರದ್ದುಗೊಳಿಸಿದ್ದಾರೆ.
ಸ್ವಿಫ್ಟ್ ಬುಕ್ಕಿಂಗ್ ಈಗಾಗಲೇ ಒಂದು ಲಕ್ಷ ಯುನಿಟ್ ದಾಟಿರುವುದರಿಂದ ಬುಕ್ಕಿಂಗ್ ಸ್ಥಗಿತಗೊಳಿಸಿರುವುದಾಗಿ ಕಂಪನಿ ಹಿಂದೊಮ್ಮೆ ಪ್ರಕಟಿಸಿತ್ತು. ಇದೇ ಸಮಯದಲ್ಲಿ ಮಾನೆಸರ್ ಘಟಕದಲ್ಲಿ ನೌಕರರ ಪ್ರತಿಭಟನೆಯಿಂದ ಉತ್ಪಾದನೆಗೂ ಹಿನ್ನಡೆಯಾಗಿತ್ತು. ಪರಿಣಾಮವಾಗಿ ವೇಟಿಂಗ್ ಪಿರೆಯಿಡ್ ಕೂಡ ಹೆಚ್ಚಾಗಿತ್ತು.


Click it and Unblock the Notifications








