2012 ಕಾರು: ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಆವೃತ್ತಿ

ಇತ್ತೀಚೆಗೆ ಹೊರತಂದ ಎಕ್ಸ್ ಯುವಿ5ಒಒ ಕಾರು ಕಂಪನಿಯ ನಿರೀಕ್ಷೆಯನ್ನು ಮೀರಿ ಬೇಡಿಕೆ ಪಡೆದುಕೊಂಡಿದೆ. ಇದೀಗ ಸೆಡಾನ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಸದೃಢವಾಗಲು 2012ರ ವೆರಿಟೊ ಆವೃತ್ತಿಯನ್ನು ಪರಿಚಯಿಸಲು ನಿರ್ಧರಿಸಿದೆ.
2012 ಮಹೀಂದ್ರ ವೆರಿಟೊ ಕಾರಿನಲ್ಲಿ ಆಕರ್ಷಕ ಇಂಟಿರಿಯರ್, ಸ್ಟಾಂಡರ್ಡ್ ಫೀಚರುಗಳನ್ನು ನಿರೀಕ್ಷಿಸಬಹುದು ಎಂದು ಕಂಪನಿ ಹೇಳಿದೆ.
ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಆವೃತ್ತಿಯು 2012 ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲಿದೆ. 2012ರ ಮಧ್ಯಾವದಿಯಲ್ಲಿ ಈ ಕಾರು ದೇಶದ ರಸ್ತೆಗಿಳಿಯಲಿದೆ. ಪರಿಸರಸ್ನೇಹಿ ಕಾರು ಖರೀದಿಗೆ ಆಲೋಚಿಸುತ್ತಿದ್ದವರು ಈ ಕಾರಿಗೆ ಕಾಯಬಹುದು.
ಮಹೀಂದ್ರ ಕಂಪನಿಯ ಕಾರುಗಳ ದರ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ. ಹೀಗಾಗಿ ನೂತನ ಕಾರಿನ ದರ ಕೂಡ ಈ ಸೆಗ್ಮೆಂಟಿನ ಕಾರುಗಳಿಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಒಂದು ಮೂಲದ ಪ್ರಕಾರ ಈ ಕಾರಿನ ದರ ಸುಮಾರು 5 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications








