2012 ಕಾರು: ಷೆವರ್ಲೆ ಸೇಲ್ ಸ್ವಾಗತಕ್ಕೆ ತಳಿರುತೋರಣ

Chevrolet Sail
2012ರಲ್ಲಿ ಏನೆಲ್ಲ ಸಂಭವಿಸಬಹುದು? ಪ್ರಳಯವಾಗುತ್ತೋ ಗೊತ್ತಿಲ್ಲ. ಆದರೆ ಕಾರು ಕಂಪನಿಗಳಂತು ಪೆಟ್ರೋಲ್ ದರ ಹೆಚ್ಚಳ, ಬಡ್ಡಿದರ ಹೆಚ್ಚಳ, ಮಾರಾಟ ಇಳಿಕೆ, ರೂಪಾಯಿ ಮೌಲ್ಯ ಕುಸಿತ, ನೌಕರರ ಪ್ರತಿಭಟನೆ ಹೀಗೆ ಹಲವು ಪ್ರಳಯ, ಚಂಡಮಾರುತಗಳ ಹೊಡೆತಕ್ಕೆ ಸಿಲುಕಿಯಾಗಿದೆ.

ಆದರೆ ಹೆಚ್ಚಿನ ಕಂಪನಿಗಳು 2012ರ ಕುರಿತು ಹೆಚ್ಚು ಆಶಾದಾಯಕತೆ ಹೊಂದಿವೆ. ಹತ್ತು ಹಲವು ಕಾರುಗಳು ದೇಶದ ರಸ್ತೆಗಿಳಿಯಲು ರೆಡಿಯಾಗಿವೆ. ವಾಹನಪ್ರೀಯರಲ್ಲಿ ಈಗಾಗಲೇ ನಿರೀಕ್ಷೆಗಳು ಗರಿಗೆದರಿವೆ. 2012ರಲ್ಲಿ ರಸ್ತೆಗಿಳಿಯಲಿರುವ ಮಧ್ಯಮಗಾತ್ರದ ಕಾರುಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಷೆವರ್ಲೆ ಸೇಲ್: ಜನರಲ್ ಮೋಟರ್ಸ್ ಕಂಪನಿಯ ಷೆವರ್ಲ್ ಕಾರು ಬ್ರಾಂಡು ಪ್ರೇಮಿಗಳಿಗೆ ಇದು ಸಿಹಿ ಸುದ್ದಿ. ಕಂಪನಿಯು ಷೆವರ್ಲೆ ಸೇಲ್ ಎಂಬ ಮಧ್ಯಮಗಾತ್ರದ ಸೆಡಾನ್ ಕಾರನ್ನು ರಸ್ತೆಗಿಳಿಸಲು ಯೋಜಿಸಿದೆ. ದೇಶದ ರಸ್ತೆಗೆ ಪೂರಕವಾಗಿರುವ ಈ ಸೇಲ್ ಕಾರು ಕಂಪನಿಯ ಕಾರು ಮಾರಾಟ ಅಥವಾ ಸೇಲ್ ಹೆಚ್ಚಿಸುವುದೇ ಕಾದುನೋಡಬೇಕಿದೆ.

ಸೇಲ್ ಸೆಡಾನ್ ಕಾರು 1.4 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ರಸ್ತೆಗಿಳಿಯಲಿದೆ. ಕಂಪನಿಯು ಅಧಿಕೃತವಾಗಿ ಸೇಲ್ ದರ ಪ್ರಕಟಿಸಿಲ್ಲ. ಒಂದು ಮೂಲದ ಪ್ರಕಾರ ಇದರ ದರ ಸುಮಾರು 5.70 ಲಕ್ಷ ರುಪಾಯಿಯಿಂದ 7.5 ಲಕ್ಷ ರುಪಾಯಿವರೆಗಿರಲಿದೆಯಂತೆ.

ಷೆವರ್ಲೆ ಸೇಲ್ ಕಾರು ದೇಶದ ರಸ್ತೆಯಲ್ಲಿರುವ ಇತರ ಕಾಂಪ್ಯಾಕ್ಟ್ ಸೆಡಾನ್ ಗಳಾದ ಮಾರುತಿ ಸುಜುಕಿ ಡಿಜೈರ್, ಮಹೀಂದ್ರ ವೆರಿಟೊ, ಟಾಟಾ ಮಾಂಝಾ ಮತ್ತು ಟೊಯೊಟಾ ಎಟಿಯೋಸ್ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಮಾರುತಿ ಸುಜುಕಿಯ ಕಾರೊಂದು 2012ರಲ್ಲಿ ರಸ್ತೆಗಿಳಿಯಲಿದೆ. ಅದ್ಯಾವುದು ಅನ್ನೋ ಕುತೂಹಲವಿದ್ದವರನ್ನು ಮುಂದಿನ ಪುಟ ಕಾಯುತ್ತಿದೆ.

More from DriveSpark

Article Published On: Thursday, December 29, 2011, 14:33 [IST]
English summary
New cars for the year 2012in india. Upcoming launches Compact or mid-size sedans. Four exclusive mid-size sedans models that will land on the domestic shores. 2012 Upcoming cars: Chevrolet Sail, Maruti Swift Dzire 2012, Tata Manza CS, Mahindra Verito 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+