ಮೇ 11ರಂದು ಹ್ಯುಂಡೈ ವೆರ್ನಾ ದೇಶದ ರಸ್ತೆಗೆ

2011 Hyundai Verna
ನವದೆಹಲಿ, ಮೇ 09: ಬಹುನಿರೀಕ್ಷಿತ ನೂತನ ವೆರ್ನಾ ಕಾರುಗಳು ದೇಶದ ರಸ್ತೆಗಿಳಿಯಲು ಕ್ಷಣಗಣನೆ ಆರಂಭವಾಗಿದೆ. ದೇಶದ ದ್ವಿತೀಯ ಅದ್ವಿತೀಯ ಕಾರು ತಯಾರಿಕ ಕಂಪನಿ ಹ್ಯುಂಡೈ "2011 ಹ್ಯುಂಡೈ ವೆರ್ನಾ" ಕಾರನ್ನು ಮೇ. 11ರಂದು ಹೊರತರುವ ನಿರೀಕ್ಷೆಗಳಿವೆ. ಕಂಪನಿಯ ಡೀಲರ್ ಗಳು ಈಗಾಗಲೇ ವೆರ್ನಾ ಬುಕ್ಕಿಂಗ್ ಮಾಡಲು ಒಪ್ಪಿಗೆ ನೀಡಿರುವುದು ಕೂಡ ಇದನ್ನು ಖಾತ್ರಿಗೊಳಿಸಿದೆ.

2011ರ ವೆರ್ನಾ ಕಾರುಗಳು ಡೀಸಲ್ ಮತ್ತು ಪೆಟ್ರೊಲ್ ಆವೃತ್ತಿಗಳಲ್ಲಿ ದೊರಕಲಿವೆ. ಈ ಕಾರುಗಳು ನಾಲ್ಕು ಆಯ್ಕೆಗಳಲ್ಲಿ ದೊರಕಲಿದೆ. ಅಂದರೆ ಎರಡು ಕಾರುಗಳು 1.4 ಲೀಟರ್ ಎಂಜಿನ್ ಹೊಂದಿರಲಿದ್ದು, ಉಳಿದ ಎರಡು ಕಾರುಗಳನ್ನು 1.6 ಲೀಟರ್ ಎಂಜಿನ್ ಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಫೋಕ್ಸ್ ವ್ಯಾಗನ್ ವೆಂಟೊ ಕಾರಿಗೆ ಪೈಪೋಟಿ ನೀಡುವ ನಿರೀಕ್ಷೆಯಿಂದ ನೂತನ ವೆರ್ನಾ ದರ 10 ಲಕ್ಷ ರೂ.ಗಿಂತ ಕಡಿಮೆ ಇರಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಕಂಪನಿ ಮೂಲಗಳ ಪ್ರಕಾರ ಹೊಸ ವೆರ್ನಾ ದರ 10 ಲಕ್ಷ ರೂ.ಗಿಂತ ಹೆಚ್ಚಿರಲಿದೆ. ಡೀಲರ್ ಗಳ ಪ್ರಕಾರ ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳ ನಡುವೆ ದರ ಅಂದಾಜು 50 ಸಾವಿರ ರು. ವ್ಯತ್ಯಾಸವಿರಲಿದೆ.

ವೆರ್ನಾ ಕಾರಿನ 1.4 ಲೀಟರ್ ಗಾಮಾ ಪ್ರೆಟ್ರೊಲ್ ಎಂಜಿನ್ ಸುಮಾರು 106 ಹಾರ್ಸ್ ಪವರ್ ನೀಡುತ್ತದೆ. 1.6 ಲೀಟರ್ ನ ಗಾಮಾ ಪೆಟ್ರೊಲ್ ಎಂಜಿನ್ 122 ಹಾರ್ಸ್ ಪವರ್ ನೀಡುತ್ತದೆ. 1.4 ಲೀಟರ್ ಡೀಸಲ್ ಎಂಜಿನ್ ಗರಿಷ್ಠ 90 ಹಾರ್ಸ್ ಪವರ್ ನೀಡಿದರೆ 1.6 ಲೀಟರ್ ಡೀಸಲ್ ಎಂಜಿನ್ 126 ಹಾರ್ಸ್ ಪವರ್ ನೀಡಲಿದೆ.

ಇದನ್ನೂ ಓದಿ: ಯುವರಾಜ್ ನಿಗೆ ಒಲವಿನ ಉಡುಗೊರೆ

ಪೆಟ್ರೊಲ್ ಕಾರುಗಳು ಪ್ರತಿಲೀಟರ್ ಗೆ ಸುಮಾರು 17 ಕಿ.ಮೀ. ಮೈಲೇಜ್ ನೀಡುತ್ತದೆ. ನೂತನ ಡೀಸಲ್ ಆವೃತ್ತಿಗಳು ಪ್ರತಿಲೀಟರ್ ಗೆ ಸುಮಾರು 20 ಕಿ.ಮೀ. ಮೈಲೇಜ್ ಹೊಂದಿದೆ. 2011ರ ವೆರ್ನಾ ಡೀಸಲ್ ಕಾರ್ ಪೆಟ್ರೊಲ್ ಆವೃತ್ತಗಿಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ.

ಆಕರ್ಷಕ ಕಾರ್ಯಕ್ಷಮತೆಯೊಂದಿಗೆ ಇಂಧನ ದಕ್ಷತೆಯ ಫೀಚರ್ ಗಳನ್ನು ಹೊಂದಿರುವುದರಿಂದ ಹ್ಯುಂಡೈ ಕಂಪನಿಯ ನಾಲ್ಕು ವೆರ್ನಾ ಕಾರುಗಳು ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯಿದೆ. ಇಂಧನ ದಕ್ಷತೆ ಕುರಿತು ಎಆರ್ಎಐ ಸರ್ಟಿಫಿಕೇಟ್ ಹೊಂದಿರುವುದು 2011ರ ವೆರ್ನಾ ಕಾರಿನ ವಿಶೇಷತೆಯಾಗಿದೆ.

More from DriveSpark

Article Published On: Monday, May 9, 2011, 10:36 [IST]
English summary
Hyundai is all set to introduce the 2011 Verna in this month on 11th of May. 2011 Verna will be available in both diesel and petrol variants. 2011 Hyundai Verna RB Expected Price, Features, review, mileage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+